India Languages, asked by veena9198, 10 months ago

ಗ್ರಂಥಾಲಯಗಳ ಮಹತ್ವ ಪ್ರಬಂಧ​

Answers

Answered by alinakincsem
168

Answer:

Explanation:

ಇತ್ತೀಚಿನ ದಿನಗಳಲ್ಲಿ ಜನರು ಬಹುತೇಕ ಎಲ್ಲದಕ್ಕೂ ತಂತ್ರಜ್ಞಾನವನ್ನು ಬಳಸಲಾರಂಭಿಸಿದ್ದಾರೆ. ಅವರು ತಮ್ಮದೇ ಆದ ವಿಷಯಗಳನ್ನು ಅನ್ವೇಷಿಸಲು ಅವಕಾಶವನ್ನು ಪಡೆಯುವುದಿಲ್ಲ. ಉದಾಹರಣೆಗೆ, ಪುಸ್ತಕಗಳನ್ನು ಮೆಚ್ಚುವ ಸಮಯವಿತ್ತು, ಏಕೆಂದರೆ ಅವುಗಳನ್ನು ಬಹಳ ವರ್ಷಗಳವರೆಗೆ ಸಂಶೋಧಿಸಲಾಗುತ್ತಿತ್ತು ಮತ್ತು ಅದರ ನಂತರ ಅವುಗಳು ಪ್ರಪಂಚದ ಲಾಭ ಪಡೆಯಲು ಪ್ರಕಟವಾಗುತ್ತವೆ.

ಗ್ರಂಥಾಲಯಗಳು ಜನರಿಂದ ತುಂಬಲು ಬಳಸುತ್ತವೆ ಆದರೆ ಈಗ ಪ್ರತಿಯೊಬ್ಬರೂ ಸುಲಭವಾದ ಮಾರ್ಗವನ್ನು ಬಯಸುತ್ತಾರೆ.

ಜನರು ಮೊದಲಿನಂತೆ ಅವುಗಳನ್ನು ಬಳಸದಿದ್ದರೂ ಸಹ, ಗ್ರಂಥಾಲಯಗಳನ್ನು ಹೊಂದಿರುವುದು ಇನ್ನೂ ಮುಖ್ಯವಾಗಿದೆ.

ಕನಿಷ್ಠ, ಸಾರ್ವಜನಿಕ ಗ್ರಂಥಾಲಯಗಳು ಅವಶ್ಯಕ. ಡಿಜಿಟಲ್ ಸೌಲಭ್ಯಗಳನ್ನು ಹೊಂದಿರದ ನಮ್ಮಲ್ಲಿ ಇದು ಹೀಗಿದೆ.

ತುಂಡಾಗಿ ಏನನ್ನಾದರೂ ಅಧ್ಯಯನ ಮಾಡಲು ಬಯಸುವವರಿಗೆ ಗ್ರಂಥಾಲಯಗಳು ಆರಾಮ ಮತ್ತು ಕಾಳಜಿಯನ್ನು ನೀಡುತ್ತವೆ. ಏಕಾಂತತೆಯು ಜನರಿಗೆ ಒಳ್ಳೆಯದು, ಏಕೆಂದರೆ ಮೌನವಾಗಿರುವುದು ಗ್ರಂಥಾಲಯದ ನಿಯಮಗಳಲ್ಲಿ ಒಂದಾಗಿದೆ.

ಜನರು ಪುಸ್ತಕಗಳನ್ನು ಓದುವುದು ಮತ್ತು ಅವರಿಗೆ ಉಚಿತ ಪ್ರವೇಶವನ್ನು ಹೊಂದಿರುವುದು ಒಳ್ಳೆಯದು. ಅಂತಹ ಗ್ರಂಥಾಲಯಗಳು ಜನರಿಗೆ ಕಲಿಯಲು ಅನುಕೂಲವಾಗುತ್ತವೆ

Answered by vishwaykuri
10

Answer:ಪುರಾತನ ಕಾಲದಿಂದಲೂ ನಾವು ಗ್ರಂಥಾಲಯಗಳನ್ನು ಕಾಣಬಹುದು ಆದರೆ ಅವು ಸಾವ೯ಜನಿಕರ ಸ್ವತ್ತಾಗದೇ ರಾಜರ , ಉಳ್ಳವರ ಸ್ವತ್ತಾಗಿದ್ದವು . ಕ್ರಮೇಣ ಗ್ರಂಥಾಲಯಗಳು ಸಾವ೯ಜನಿಕರಿಗೆ ಮುಕ್ತ ಪ್ರವೇಶ ನೀಡಿ ಓದುಗರಿಗೆ ಅನುಕೂಲ ಕಲ್ಪಿಸಿಕೊಟ್ಟವು . ಇದೀಗ ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ ಕೆಲಸ ನಿವ೯ಹಿಸುವ ಮತ್ತು ಸ್ಪದಾ೯ತ್ಮಕ ಅಧ್ಯಯನ

ಕೇಂದ್ರಗಳಾಗಿ ಕೆಲಸ ನಿವ೯ಹಿಸುವಷ್ಟು  ಬೆಳದು ನಿಂತಿವೆ  . ಹಿಂದೆ ಗ್ರಂಥಪಾಲಕನನ್ನು  ಉಗ್ರಾಣಿಕನೆಂದು , ಗ್ರಂಥಾಲಯವನ್ನು ಉಗ್ರಾಣ ಎಂದು ಕರೆಯುತ್ತಿದ್ದರು  . ಅಧುನಿಕ  ಕಾಲದಲ್ಲಿ  ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ , ಸ್ಪಧಾ೯ತ್ಮಕ ಅಧ್ಯಯನ ಕೇಂದ್ರ , ಮಕ್ಕಳ, ವೃದ್ದರ , ಸಂಶೋಧನಾ ,ಶೈಕ್ಷಣಿಕ , ವಿಶೇಷ,ವಿಶ್ವವಿದ್ಯಾಲಯ  ಹೀಗೆ ಅನೇಕ  ಪ್ರಕಾರದ ಗ್ರಂಥಾಲಯಗಳು ಓದುಗರಿಗೆ ಗ್ರಂಥ  ದೊರಕಿಸಿಕೊಡುವ ಕೆಲಸ ಮಾಡುತ್ತಿವೆ ಇಂತಹ  ಗ್ರಂಥಾಲಯಗಳ ಅಭಿವೃದ್ಧಿ ಗೆ ಶ್ರಮಿಸಿದ ಅನೇಕ  ಮಹನೀಯರಿದ್ದಾರೆ . ಅವರ ಕಿರುಪರಿಚಯ ಹೀಗಿದೆ .

ಆಂಡ್ರ್ಯೂ ಕಾನೇ೯ಗಿ :  ಇವರು ಅಮೇರಿಕಾದ ಕೈಗಾರಿಕೋದ್ಯಮಿ  ಗ್ರಂಥಾಲಯ ಸ್ಥಾಪನೆಗಾಗಿ ಹೆಚ್ಚು ಹಣ ವಿನಿಯೋಗಿಸಿದ್ದಾರೆ . ಇವರು ವ್ಯಯ ಮಾಡಿದ ಹಣದಲ್ಲಿ ಸುಮಾರು ೨೮೧೧ , ಸಾವ೯ಜನಿಕ ಗ್ರಂಥಾಲಯಗಳನ್ನು  ಕ್ರಿ . ಶ ೧೯೧೧ . ರ ಹೊತ್ತಿಗೆ  ಸ್ಥಾಪಿಸಿದ್ದರು . ಗ್ರಂಥಾಲಯದಿಂದಾಗುವ ಮುಖ್ಯ ಲಾಭ    ಜ್ಞಾನಾಜ್ಞ೯ನೆ  , ನಾವೇನಾದರೂ ಕೊಡದಿದ್ದರೆ ಅವು ನಮಗೇನೂ ಕೊಡಲಾರವು ಎಂಬುದು ಅವರ ಅಭಿಪ್ರಾಯವಾಗಿತ್ತು .

ಚಾಲ್ಸ್೯ಅಮ್ಮಿ ಕಟ್ಟರ್  :  ಅಮೇರಿಕಾ ದೇಶದ ಬಾಸ್ಟನ ನಗರದವರಾದ ಇವರು , ತಮ್ಮ ಶಿಕ್ಷಣದ ನಂತರ ಧಮೊ೯ಪದೇಶಕರಾಗಿ ಕಾಯ೯ನಿವ೯ಹಿಸುವ ಸಂದಭ೯ದಲ್ಲಿ  ಗ್ರಂಥಾಲಯ ನಿವ೯ಹಣೆ ಜವಾಬ್ದಾರಿ ಇವರದಾಯಿತು , ಕೆಲಸ ನಿವ೯ಹಿಸುವ ಸಮಯದಲ್ಲಿ   ಗ್ರಂಥಾಲಯ ವಿಜ್ಞಾನದಲ್ಲಿ ಆಸಕ್ತಿ ಬೆಳಸಿಕೊಂಡು , ಸೂಚಿಗಳನ್ನು ರಚಿಸಿ  , ಪರಿಷ್ಕರಿಸಿ ತಮ್ಮ ಪರಿಶ್ರಮದಿಂದ  ( ರೂಲ್ಸ್ ಫಾರ್ ಎ ಡಿಕ್ಸನರಿ ಕ್ಯಾಟಲಾಗ್ ) ೧೮೭೫ ರಲ್ಲಿ ಕೃತಿ ರಚಿಸಿದರು . ಈ ಪದ್ದತಿ ಇಂದು ಅನೇಕ ಗ್ರಂಥಾಲಯಗಳಲ್ಲಿ ಚಾಲ್ತಿಯಲ್ಲಿದೆ .

ಖುದಾಭಕ್ಷ ಖಾನ್ :   ಇವರು  ಪ್ರಾಚ್ಯ ಸಾವ೯ಜನಿಕ ಗ್ರಂಥಾಲಯ ಸಂಸ್ಥಾಪಕರು .  ತಮ್ಮ ತಂದೆಯ ಸಂಗ್ರಹದಿಂದ ದೊರೆತ ೧೪೦೦ ಹಸ್ತಪ್ರತಿಗಳೊಂದಿಗೆ ಸಾವ೯ಜನಿಕ ಗ್ರಂಥಾಲಯ ತೆರೆದರು , ಪ್ರಾಚೀನ ವಸ್ತು ಮಾರಲು ಬಂದವರಿಗೆ ಒಂದಕ್ಕೆ ಎರಡರಷ್ಟು ಬೆಲೆ ಕೊಟ್ಟು ಖರೀದಿಸಿ ಪ್ರಾಚ್ಯವಸ್ತು ಸಾವ೯ಜನಿಕ ಗ್ರಂಥಾಲಯ ಬೆಳೆಯುವಂತೆ ಅದರ ವಿಸ್ತಾರ ಹೆಚ್ಚಿಸಿದರು . ಕಾಲಾನಂತರ ಅದು ಖುದಾಭಕ್ಷ  ಸಾವ೯ಜನಿಕ ಗ್ರಂಥಾಲಯ ಎಂದು ಪ್ರಸಿದ್ಧವಾಯಿತು . ಬಂಗಾಳ ಸಕಾ೯ರ ಗ್ರಂಥಾಲಯವನ್ನು ತನ್ನ  ಆಡಳಿತಕ್ಕೆ  ಒಳಪಡಿಸಿತು . ಇವರ ಸೇವೆಯನ್ನು ಗುರುತಿಸಿ ಅಂದಿನ ಬ್ರಿಟಿಷ್ ಸಕಾ೯ರ ಖಾನ್ ಬಹಾದೂರ ೧೮೮೧ , ಸಿ. ಐ. ಇ ೧೯೦೩ ರಲ್ಲಿ ,ಬಿರುದುಗಳನ್ನು  ನೀಡಿ ಗೌರವಿಸಿವೆ .ಇದಲ್ಲದೆ ಅವರು ಪಾಟ್ನಾದಲ್ಲಿ ಪ್ರಸಿದ್ದ  ವಕೀಲರಾಗಿದ್ದರು . ಹೈದಬಾದ ಸಂಸ್ಥಾನದ ಮುಖ್ಯ ನ್ಯಾಯಾಧೀಶರಾಗಿಯ ಸೇವೆ ಸಲ್ಲಿಸಿದ್ದಾರೆ .

ಹೆನ್ರಿ ಎವ್ಲಿನ್ ಬ್ಲಿಸ್  :  ಅಮೆರಿಕಾ ದೇಶದ ನ್ಯೂಯಾಕ೯ ನಗರ ವಾಸಿಯಾಗಿದ್ದ ಇವರು , ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಹಲವಾರು ಬದಲಾವಣೆ ತಂದು ಅಲ್ಲಿಯವರೆಗೂ ಚಾಲ್ತಿಯಲ್ಲಿದ್ದ ದಶಾಂಶ ಮತ್ತು ವ್ಯಾಪಕ ವಗೀ೯ಕರಣ ಪದ್ದತಿಗಳನ್ನು ಪರಿಷ್ಕರಿಸಿದರು . ನಿಯತಕಾಲಿಕೆ,  ಗ್ರಂಥಗಳ ಮುಖಾಂತರ ವಗೀ೯ಕರಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗೆ ಕಾರಣೀಕತ೯ರಾದರು .   ಇವರ ದಿ  ಆಗ೯ನೈಸೇಷನ ಆಫ್ ನಾಲೆಡ್ಜ  ಆಂಡ್ ಸಿಸ್ಟಂ ಆಫ್ ಸೈನ್ಸಸ್ , ಮತ್ತು ದಿ ಆಗ೯ನೈಸೇಷನ್ ಆಫ್ ನಾಲೆಡ್ಜ್ ಇನ್ ಲೈಬ್ರರೀಸ್ ಆಂಡ್ ಸಬ್ಜೆಕ್ಟ ಅಪ್ರೋಚ್ ಟು ಬುಕ್ಸ ಎಂಬ ಗ್ರಂಥಾಲಯಗಳನ್ನು ರಚಿಸಿದ್ದಾರೆ .

ಮೆಲವಿಲ್ ಡ್ಯೂಯಿ :  ಮೆಲವಿಲ್ ಡ್ಯೂಯಿ ೧೦ ಡಿಸಂಬರ್ ೧೮೫೧ ರಲ್ಲಿ ತಂದೆ ಜೋಯಲ್ ಡ್ಯೂಯಿ  ತಾಯಿ ಎಲಿಜಾ ಗ್ರೀನ್ ರ ಮಗನಾಗಿ ನ್ಯೂಯಾಕ೯ ನ ಆಡಂಸೆಂಟರನಲ್ಲಿ ಜನಿಸಿದರು . ಚಪ್ಪಲಿ ಹೊಲೆಯುವ ಮನೆ ಕಸುಬಾಗಿದ್ದ ಕುಟುಂಬದಿಂದ ಬಂದ ಮೆಲವಿಲ್ ಡ್ಯೂಯಿ ಮುಂದೆ ಇಡೀ ಜಗತ್ತೇ ವಿಶ್ವ ಗ್ರಂಥಾಲಯ ಚಳುವಳಿಯ ಪಿತಾಮಹನಾಗುತ್ತಾನೆಂದು ಯಾರು ಉಹಿಸಿರಲಿಲ್ಲ . ಗ್ರಂಥಾಲಯದ ಸಂಗ್ರಹವನ್ನು ವ್ಯವಸ್ಥಿತವಾಗಿ ಮತ್ತು ಕ್ರಮಬದ್ದವಾಗಿ ಜೋಡಿಸುವ ವಿಧಾನವನ್ನು ಕಂಡು ಹಿಡಿದರು . ೧೮೭೬ ರಲ್ಲಿ  ದಶಾಂಶ ವಗೀ೯ಕರಣ  ಪದ್ದತಿಯನ್ನು ಕಂಡುಹಿಡಿದರು , ಈ ಪದ್ದತಿ ೦೦೦-೯೯೯ ಸಂಖ್ಯೆಗಳನ್ನು ಬಳಸಿ ಅವಿಷ್ಕಾರ ಮಾಡಿದ ಡ್ಯೂಯಿ ದಶಾಂಶ ವಗೀ೯ಕರಣ ಇಂದಿಗೂ  ಜಗತ್ತಿನಾದ್ಯಂತ ಹೆಚ್ಚು ಪ್ರಸ್ತುತ . ಇದಲ್ಲದೆ ವೃತ್ತಿನಿರತರಾಗ ಬಯಸುವವರಿಗೆ ಗ್ರಂಥಪಾಲಕರ ತರಬೇತಿ ಶಾಲೆ ಪ್ರಾರಂಬಿಸಿದ್ದು , ಇವರ ಸಂಪಾದಕತ್ವದಲ್ಲಿ ಗ್ರಂಥಪಾಲಕರಿಗೆ ಉಪಯುಕ್ತವಾಗುವಂತಹ ಲೈಬ್ರರಿ ನೋಟ್ಸ ಪತ್ರಿಕೆ  ಪ್ರಾರಂಬಿಸಿದರು. ಸಾವ೯ಜನಿಕ ಗ್ರಂಥಾಲಯದ    ವಿಸ್ತಾರಣಾ ಸೇವೆಯಾದ ಸಂಚಾರಿ ಗ್ರಂಥಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ .  ಮೆಲವಿಲ್ ಡ್ಯೂಯಿಗೆ ಅವರಿಗೆ ಸಂದ ಮನ್ನಣೆಗಳು ಕೊಲಂಬಿಯಾ ಕಾಲೇಜಿನ ಗ್ರಂಥಪಾಲಕ ಮತ್ತು ಗ್ರಂಥಾಲಯ ತರಬೇತಿ ಶಾಲೆಯ ಮುಖ್ಯಸ್ಥ , ಅಮೆರಿಕಾ ಗ್ರಂಥಾಲಯ ಸಂಘದ ಕಾಯ೯ದಶಿ೯ , ಅಧ್ಯಕ್ಷ . ನ್ಯೂಯಾಕ೯ ಸ್ಟೇಟ್ ಗ್ರಂಥಾಲಯದ ನಿದೇ೯ಶಕ , ಹೀಗೆ ಒಟ್ಟಾರೆ ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿ ೨೬ ಡಿಸಂಬರ್ ೧೯೩೧ ರಂದು ಈ ಮಹಾನಚೇತನ ಜಗತ್ತನ್ನು ಅಗಲಿತು .

ಡಾ.ಎಸ್.ಆರ್.ರಂಗನಾಥನ್: ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನರವರ ಪೂಣ೯ ಹೆಸರು ಶಿಯ್ಯಾಳಿ ರಾಮಾಮೃತ ರಂಗನಾಥನ್ ಇವರು ೧೨ ಆಗಸ್ಟ ೧೮೯೨ ರಲ್ಲಿ ತಮಿಳುನಾಡಿನ ತಂಜಾವುರ ಜಿಲ್ಲೆಯ ಶಿಯ್ಯಾಳಿ ಎಂಬ ಗ್ರಾಮದಲ್ಲಿ ಜನಿಸಿದರು ತಂದೆ ರಾಮಾಮೃತ ಅಯ್ಯಾರ ತಾಯಿ ಸೀತಾಲಕ್ಷ್ಮಿ ಮಗನಾಗಿ ಜನಿಸಿದ ರಂಗನಾಥನರವರು ಮುಂದೆ ಭಾರತೀಯ ಗ್ರಂಥಾಲಯ ಪಿತಾಮಹರಾಗುತ್ತಾರೆಂದು ಯಾರು ಅಂದು ಕೂಂಡಿರಲಿಲ್ಲ.

ಡಾ.ಎಸ್.ಆರ್.ರಂಗನಾಥನರವರು ಮೂಲತಹ ತಮ್ಮನ್ನು ಗುರುತಿಸಿಕೂಂಡಿದ್ದು. ಒಬ್ಬ ಗಣಿತ ಪ್ರಾಧ್ಯಾಪಕರಾಗಿ ನಂತರದ  ದಿನಗಳಲ್ಲಿ ಶೈಕ್ಷಣಿಕ ವಿದ್ಯಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದರು. ಈ ಸೇವೆಯ ಅವರನ್ನು ಗ್ರಂಥಾಲಯಗಳ ಬಗ್ಗೆ ಚಿಂತೆ ಮಾಡುವಂತೆ ಮಾಡಿ ಮುಂದೆ ಗ್ರಂಥಾಲಯ ವಿಜ್ಞಾನಕ್ಕೆ ಮಹತ್ತರ ಕೂಡುಗೆ ನೀಡುವಂತೆ ಮಾಡಿತು.

ಡಾ.ಎಸ್.ಆರ್.ರಂಗನಾಥನರವರು ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಮತ್ತು ನೀಡಿದ ಕೂಡುಗೆಗಳನ್ನು ಪರಿಗಣಿಸಿ ಅನೇಕ ರಾಷ್ಟೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿ ಬಿರುದುಗಳು ಬಂದಿವೆ. ದೆಹಲಿ ವಿಶ್ವವಿದ್ಯಾಲಯವು ೧೯೪೮ ರಲ್ಲಿ ಪಿಟ್ಸ್ ಬಗ೯ ವಿಶ್ವವಿದ್ಯಾಲಯ ೧೯೬೪ ರಲ್ಲಿ ಇವರಿಗೆ ಡಿಲಿಟ್ ಪದವಿ ನೀಡಿ ಗೌರವಿಸಿದೆ. ೧೯೩೫ ರಲ್ಲಿ ಅಂದಿನ ಬ್ರಿಟಿಷ್ ಸಕಾ೯ರವು ಇವರಿಗೆ ರಾವ್ ಸಾಹೇಬ್ ಎಂಬ ಬಿರುದು ನೀಡಿತ್ತು. ೧೯೫೭ ರಲ್ಲಿ ಭಾರತ ಸರಕಾರ ಪದ್ಮಶ್ರೀಯನ್ನು ನೀಡಿ ಗೌರವಿಸಿದೆ. ೧೯೭೦ ರಲ್ಲಿ ಅಮೇರಿಕಾದ ಮಾಗ೯ರೆಟ್ ಮಾನ್ ಪಾರಿತೋಷಕ ಪಡೆದ ಪ್ರಥಮ ಭಾರತೀಯರು ಹೌದು. ಅಮೇರಿಕಾದ ಮಾಕ೯ಟೈನ್ ಸೊಸೈಟಿ ಗ್ರ್ಯಾಂಡ್ ನೈಟ್ ದಿ ಪೀಸ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ ಇನ್ನು ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

Explanation:

Similar questions