ಸ್ವತಂತ್ರ ಭರತದಲ್ಲಿ ಚುನಾವಣೆ ಪಬಂಧ
Answers
Answer:
ಸ್ವಾತಂತ್ರ್ಯ ಬಂದಾಗಿನಿಂದಲೂ, ಭಾರತದಲ್ಲಿನ ಚುನಾವಣೆಗಳು ತಮ್ಮ ವಿಕಸನದಲ್ಲಿ ಸುದೀರ್ಘವಾದ ಹಾದಿಯನ್ನು ಸವೆಸಿವೆಯಾದರೂ, ಅಷ್ಟು ಸಮಯವೂ ಚುನಾವಣೆಗಳು ಸ್ವತಂತ್ರ ಭಾರತದ ಒಂದು ಗಮನಾರ್ಹವಾದ ಸಾಂಸ್ಕೃತಿಕ ಅಂಶವೆನಿಸಿಕೊಂಡಿವೆ.
2004ರಲ್ಲಿ ನಡೆದ ಭಾರತೀಯ ಚುನಾವಣೆಗಳು 670 ದಶಲಕ್ಷಕ್ಕೂ ಹೆಚ್ಚಿನ ಜನರಿರುವ ಮತದಾರ ಸಮುದಾಯವೊಂದನ್ನು ಒಳಗೊಂಡಿದ್ದವು; ಇದು ಮುಂದಿನ ಅತಿದೊಡ್ಡ ಸ್ಥಾನವನ್ನು ಹೊಂದಿರುವ ಯುರೋಪಿನ ಸಂಸತ್ ಚುನಾವಣೆಗಳಿಗೆ ಹೋಲಿಸಿದಾಗ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನದು ಎನಿಸಿಕೊಂಡಿತ್ತು. ಅಷ್ಟೇ ಅಲ್ಲ, 1989ರ ವೆಚ್ಚಗಳಿಗೆ ಹೋಲಿಸಿದಾಗ ಈ ಅವಧಿಯ ಘೋಷಿತ ಖರ್ಚುವೆಚ್ಚವು ಮೂರುಪಟ್ಟು ಹೆಚ್ಚಾಗಿ, ಅದು ಬಹುಮಟ್ಟಿಗೆ 300 ದಶಲಕ್ಷ $ನಷ್ಟು ಪ್ರಮಾಣವನ್ನು ತಲುಪಿತ್ತು ಮತ್ತು ಈ ಚುನಾವಣೆಯಲ್ಲಿ 1 ದಶಲಕ್ಷಕ್ಕೂ ಹೆಚ್ಚಿನ ವಿದ್ಯುನ್ಮಾನ ಮತದಾನ ಯಂತ್ರಗಳು ಬಳಸಲ್ಪಟ್ಟವು.[೧] 2009ರಲ್ಲಿ ನಡೆದ ಚುನಾವಣೆಗಳು ಇನ್ನೂ ದೊಡ್ಡದಾದ ಮತದಾರ ಸಮುದಾಯವನ್ನು ಒಳಗೊಂಡಿದ್ದು, ಮತದಾರರ ಸಂಖ್ಯೆಯು 714 ದಶಲಕ್ಷವನ್ನು[೨] (EU ಮತ್ತು US ಚುನಾವಣೆಗಳೆರಡನ್ನೂ ಸಂಯೋಜಿಸಿದಾಗ[೩] ಆಗುವುದಕ್ಕಿಂತ ದೊಡ್ಡದು) ಮುಟ್ಟಿತ್ತು.
ಚುನಾವಣೆಗಳು ಹಲವಾರು ಹಂತಗಳಲ್ಲಿ ನಡೆಸಲ್ಪಡಬೇಕು ಎಂಬುದನ್ನು ಬೃಹತ್ ಮತದಾರ ಸಮುದಾಯದ ಗಾತ್ರವು ಸೂಚಿಸುತ್ತದೆ (2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಾಲ್ಕು ಹಂತಗಳಿದ್ದರೆ, 2009ರಲ್ಲಿ ಐದು ಹಂತಗಳಿದ್ದವು). ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ 'ಮಾದರಿ ನೀತಿಸಂಹಿತೆ'ಯನ್ನು ಜಾರಿಗೆ ತರುವ ಭಾರತದ ಚುನಾವಣಾ ಆಯೋಗದಿಂದ ಚುನಾವಣೆ ದಿನಾಂಕಗಳು ಪ್ರಕಟಣೆಯಾಗುವುದರಿಂದ ಮೊದಲ್ಗೊಂಡು, ಫಲಿತಾಂಶಗಳ ಪ್ರಕಟಣೆ, ಯಶಸ್ವೀ ಉಮೇದುವಾರರ ಪಟ್ಟಿಯನ್ನು ರಾಜ್ಯ ಅಥವಾ ಕೇಂದ್ರದ ಕಾರ್ಯಕಾರಿ ಮುಖ್ಯಸ್ಥರಿಗೆ ಸಲ್ಲಿಸುವುದರವರೆಗಿನ ಹಲವಾರು ಹಂತ-ಹಂತದ ಪ್ರಕ್ರಿಯೆಗಳನ್ನು ಇದು ಒಳಗೊಂಡಿರುತ್ತದೆ. ಫಲಿತಾಂಶಗಳ ಸಲ್ಲಿಕೆಯು ಚುನಾವಣೆ ಪ್ರಕ್ರಿಯೆಯು ಕೊನೆಗೊಂಡಿದ್ದನ್ನು ಗುರುತು ಮಾಡುತ್ತದೆ, ಹಾಗೂ ತನ್ಮೂಲಕ ಹೊಸ ಸರ್ಕಾರದ ರಚನೆಗಾಗಿ ದಾರಿಮಾಡಿಕೊಡುತ್ತದೆ.