ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
೧. ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.
Answers
Answered by
1
Explanation:
ಅತಿಆಸೆ ಗತಿ ಕೇಡು,
ಹೊಳೆಗೆ ಸುರಿದರೂ ಅಳೆದು ಸುರಿಯಬೇಕು,
ಕೈ ಕೆಸರಾದರೆ ಬಾಯಿ ಮೊಸರು.
ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು
ಮಣ್ಣಿನಿಂದ ಮಣ್ಣಿಗೆ (English: from mud to the mud)
ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
Answered by
10
Answer:
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.
ಸತ್ಯ ಸದಾ ಜೀವಂತವಾದುದು; ಸುಳ್ಳು ಎಂದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸತ್ಯ ಶಾಶ್ವತವಾದದ್ದು ಆ ದೃಷ್ಟಿಯಿಂದಲೇ ನಮ್ಮ ರಾಷ್ಟೀಯ ಲಾಂಛನದಲ್ಲಿ (ಅಶೋಕ ಚಕ್ರ) ಸತ್ಯಮೇವ ಜಯತೆ' ಎಂಬ ಬರಹ ಕಲ್ಪಂತಾರಸ್ಥಾಯಿಯಾಗಿ ರಾರಾಜಿಸುತ್ತದೆ. 'ಸತ್ಯಕ್ಕೆ ಜಯ' ಸತ್ಯವಂತರಿಗೆ ಎಂದಿದ್ದರು ಜಯವಿದ್ದೇ ಇದೆ ಎಂದು ಎಲ್ಲ ಧರ್ಮಗಳಿಂದ ತಿಳಿದು ಬಂದಿದೆ. ಸತ್ಯ ಹರಿಶ್ಚಂದ್ರ ಶಾಶ್ವತವಾದ ಕೀರ್ತಿಯನ್ನು ಪಡೆದನು. ಗಾಂಧೀಜಿ, ಸ್ವಾಮಿ ವಿವೇಕಾನಂದ ಮೊದಲಾದ ಮಹಾತ್ಮರು ಸತ್ಯ ಜೀವನವನ್ನು ನಡೆಸಿದರು. ಸತ್ಯವನ್ನೇ ನುಡಿಯಿರಿ. ಪ್ರಿಯವಾದದ್ದನ್ನೇ ಹೇಳಿರಿ ಎಂಬ ನೀತಿ ವಾಕ್ಯವು ಸತ್ಯ ನಿತ್ಯವೆಂಬುವುದನ್ನು ಸಾರುತ್ತದೆ.
ಸುಳ್ಳಿಗೆ ಸುಖವಿಲ್ಲ. ಸುಳ್ಳಿನ ಒಡನಾಟ ಕೆಸರೊಳಗೆ ಮುಳ್ಳು ತುಳಿದಂತೆ. ಸುಳ್ಳು ಹೇಳಿ ಆ ಸುಳ್ಳು ಬಯಲಾದಾಗ ಮನುಷ್ಯ ತನ್ನ ಗೌರವ ಅಂತಸ್ತು ನಂಬಿಕೆ ಕಳೆದು ಕೊಳ್ಳುವುದರ ಜೊತೆಗೆ ಮಾನಸಿಕವಾಗಿ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ. ಸುಳ್ಳು ಒಂದು ಬಲೇ ಇದ್ದ ಹಾಗೆ ಅದರಲ್ಲಿ ಸಿಕ್ಕಿಬಿದ್ದರೆ ಹೊರಬರುವುದು ಕಷ್ಟ ಆದುದರಿಂದ ಸುಳ್ಳಿನ ದಾಸರಾಗಿ ಜೀವನವನ್ನು ಹಾಳುಮಾಡಿಕೊಳ್ಳುವ ಬದಲು ಸತ್ಯವೆಂಬ ಬೆಳಕಿನ ಹಾದಿಯಲ್ಲಿ ನಡೆದು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಸತ್ಯವೇ ಬೆಳಕು ಸುಳ್ಳೇ ಕಟ್ಟಲು. ಸುಳ್ಳಿಗೆ ಸುಖವಿಲ್ಲ ಎಂಬ ಮಾತನ್ನು ಇಂದಿಗೂ ಮರೆಯಬಾರದು.
ಧನ್ಯವಾದಗಳು!
Similar questions
Social Sciences,
6 months ago
Math,
1 year ago
Math,
1 year ago
Chemistry,
1 year ago
Math,
1 year ago