World Languages, asked by mmpkerur, 1 year ago

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಗಾದೆ ಮಾತು ವಿವರಣೆ ಹತ್ತು ಹನ್ನೆರಡು ವಾಕ್ಯ​

Answers

Answered by tejasmprasanna94
19

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ದೂರದಿಂದ ನೋಡಿದಾಗ ಯಾವುದೇ ವಸ್ತುವಿನ ಅಥವ ಸನ್ನಿವೇಶದ ಅರ್ಥವಾಗುವುದಿಲ್ಲ. ದೂರದಿಂದ ನೋಡಿದರೆ ಬೆಟ್ಟ ನುಣ್ಣಗೆ , ಸಮತಟ್ಟಾಗಿರುವಂತೆ ಕಾಣುತ್ತದೆ. ಆದರೆ ಹತ್ತಿರ ಹೋಗಿ ನೋಡಿದಾಗಲೆ ಅದರಲ್ಲಿರುವ ಗುಡ್ಡಗಳು, ಮರಗಿಡಗಳು, ಮುಳ್ಳುಗಳು ಎಲ್ಲ ಕಣ್ಣಿಗೆ ಕಾಣುವುದು. ಹಾಗೇ ಸಮಾಜದಲ್ಲಿ ನಮ್ಮ ಸುತ್ತ ಮುತ್ತ ಇರುವವರು, ನಮ್ಮ ನೆಂಟರಿಷ್ಟರು ಹಸನ್ಮುಖರಾಗಿ ಇರುವುದನ್ನು ನೋಡಿ ಅವರಿಗೆ ಯಾವುದೇ ಕಷ್ಟ್ಗಗಳಿಲ್ಲ, ಬರಿ ಸುಖ ಸಂತೋಷಗಳೆ ಎಂದು ಯೋಚಿಸುವುದು ಸರಿಯಲ್ಲ. ಏಕೆಂದರೆ ಅವರಿಗಿರುವ ಕಷ್ಟ ನಮಗೆ ಗೊತ್ತಿರುವುದಿಲ್ಲ.ಆದ್ದರಿಂದ ತನಗೆ ಬಂದ ಕಷ್ಟಗಲನ್ನು ನಗುನಗುತ್ತ ಎದುರಿಸಬೇಕು, ಪ್ರಪಂಚದಲ್ಲಿ ಎಲ್ಲರಿಗು ಕಷ್ಟಬರುತ್ತದೆ ಎಂಬ ಅಂಶವನ್ನು ನೆನಪಿನಲ್ಲಿಡಬೇಕು.ಅದು ಬಿಟ್ಟು ತನಗೇ ಎಲ್ಲ ಕಷ್ಟಗಳನ್ನು ಕೊಟ್ಟಿದ್ದಾನೆ ಎಂದು ಯೋಚಿಸುವುದು ತಪ್ಪು ಎಂದು ಈ ಗಾದೆ ಹೇಳುತ್ತದೆಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಗಾದೆಯಿದೆ- ’ಎಲ್ಲರ ಮನೆಯ ದೋಸೆಯೂ ತೂತೆ’ಯಾರ ಮನೆಯಲ್ಲಿ ದೋಸೆ ಹುಯ್ದರೂ ತೂತು ಇದ್ದೇ ಇರುತ್ತದೆ. ಈ ಮಾತು ನೆನಪಿನಲ್ಲಿ ಇಟ್ಟೂಕೊಂಡರೆ ಜೀವನ ಹಗುರವಾಗುತ್ತದೆ. ಅದುಬಿಟ್ಟು ನನ್ನ ಮನೆಯಲ್ಲಿ ಮಾತ್ರ ಕಷ್ಟ ಬಂದಿದೆ ಎಂದು ಚಿಂತೆ ಮಾಡುತ್ತ ಕುಳಿತಿರುವುದು ತಪ್ಪು.ಕಾವಲಿಯಲ್ಲೇ ತೂತುಬೀಳದಂತೆ ನೋಡಿಕೊಳ್ಳಬೇಕು.

I hope it helps you .Pls mark as Brainlist

Similar questions