India Languages, asked by divya8776, 10 months ago

೨. 'ರಾಮಾಶ್ವಮೇಧ' ಕೃತಿಯಲ್ಲಿ ಮುದ್ದಣ ಪರೋಕ್ಷವಾಗಿ ತನ್ನ ಬಾಳಿನ ಕತೆಯನ್ನು
ಬಿಚ್ಚಿಟ್ಟಿದ್ದಾನೆ ಎಂಬುದನ್ನು `ಸಪ್ತಾಕ್ಷರಿ ಮಂತ್ರ' ಪಾಠದ ಆಧಾರದಿಂದ ಸಮರ್ಥಿಸಿ
E​

Answers

Answered by nandanigupta7
0

Answer:

please let me know if you need anything....English please.....

Answered by indrammas1983
0

Explanation:

ಉತ್ತರ: ರಾಮಾಶ್ವಮೇಧ ಕಥೆಯನ್ನು ಹೇಳ ಹೊರಡುವ ಕವಿ ಕಾವ್ಯದ ಮಧ್ಯದಳ್ಳಿ ತಮ್ಮ ಜೀವನದ ವಾಸ್ತವತೆಯನ್ನ ಬಿಚ್ಚಿಡುವುದು ಒಂದು

ವೈಶಿಷ್ಟ್ಯವೇ ಸರಿ. ಇದು ಮುದ್ದಣ ಮನೋರಮೆಯರ ಸಲ್ಲಾಪವೆಂದೇ ಖ್ಯಾತಿ ಪಡೆದಿದೆ. ಕಾವ್ಯ ಧರ್ಮದೊಳಗೆ ಜೀವನ ಧರ್ಮವನ್ನು ಬೆರೆಸಿ ಹೇಳುವ ಕವಿಯ

ಕಲೆಗಾರಿಕೆಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ.

ಎಷ್ಟೇ ಕಷ್ಟಗಳಿದ್ದರೂ ಮನಸನ್ನೇ ¸ ಸುಡುವ ಚಿಂತೆಯಿದ್ದರೂ ನವಿರಾದ ಹಾಸ್ಯ ಅವುಗಳನ್ನು ¸ ಸ್ವಲ್ಪಕಾಲ ಮರೆಯುವಂತೇ ಮಾಡುತ್ತದೆ.

‘ಶ್ರೀರಾಮಾಶ್ವಮೇಧ’ ಕೃತಿಯಲ್ಲಿ ಮಡದಿ ಮನೋರಮೆ (ನಿಜನಾಮ ಕಮಲಾಬಾಯಿ) ಯೊಡನೆ ¸ಸಂವಾದದಲ್ಲಿ ನಿರತನಾದಾಗ ವ್ಯಕ್ತವಾಗುವ ಮಾತುಗಳು

ಮುದ್ದಣನ ಕಷ್ಟ ಜೀವನದ ಪ್ರತೀಕವೇ ಆಗಿವೆ. ಪಕೃತ ಗದ್ಯಬಾಗದಲ್ಲಿ ‘¸ ಸಪ್ತಾಕ್ಷರಿ ಮಂತ್ರದ’ ಸ್ರೇಷ್ಟತೆ ನೆಪದೊಂದಿಗೆ ತನ್ನ ಹಾಗೂ ಅಂದಿನ ಕವಿಗಳ

ದಾರಿದ್ರ‍್ಯವನ್ನು ಪರೋಕ್ಷವಾಗಿ ಮುದ್ದಣ ವ್ಯಕ್ತಪಡಿಸಿದ್ದಾನೆ. ಹೊರನೋಟಕ್ಕ ಕುತೂಹಲಕಾರಿಯೂ ಹಾಸ್ಯಮಯವೂ ಆಗಿದ್ದರೆ ಒಳಗೆ ದಾರುಣ ವ್ಯಥೆಯ ಕಥೆ

ಯಲ್ಲಿ ಅಡಗಿರುವುದನ್ನು ಇಲ್ಲಿ ಕಾಣಬಹುದು.

Similar questions