Math, asked by vkumar14205, 1 year ago

ಪ್ರಥಮ ಮಹಾಯುದ್ಧದ ಪರಿಣಾಮಗಳು
ಕಾರಣ

Answers

Answered by eknathabadiger65
2

Answer:

ಒಂದನೆಯ ಮಹಾಯುದ್ಧಕ್ಕೆ ಅನೇಕ ಕಾರಣಗಳನ್ನು ಕೊಡುವುದು ಸಾಧ್ಯ. ಆಸ್ಟ್ರಿಯ-ಹಂಗೆರಿಗೂ ಸರ್ಬಿಯಕ್ಕೂ ನಡುವಣ ವಿರಸದಿಂದಾಗಿ ಆರಂಭವಾದ ಈ ಯುದ್ಧಕ್ಕೆ ಇದೇ ತತ್ಕ್ಷಣದ ಕಾರಣವಾದರೂ ಇಷ್ಟರಿಂದಲೇ ವಿಶ್ವದ ಅನೇಕ ರಾಷ್ಟ್ರಗಳು ಯುದ್ಧದ ಸುಳಿಯೊಳಕ್ಕೆ ಸಿಲುಕಿದುವೆನ್ನಲಾಗುವುದಿಲ್ಲ. ಇದರ ಹಿಂದೆ ಎರಡು ಮಹಾಬಣಗಳೇ ನಿರ್ಮಾಣವಾಗಿ ಬಲು ಹಿಂದಿನಿಂದಲೂ ಅವು ತಂತಮ್ಮಲ್ಲೆ ಮಸೆದಾಟಕ್ಕೆ ಆರಂಭಿಸಿದ್ದುವು. ದೀರ್ಘಕಾಲದ ಸ್ಪರ್ಧೆ, ಅಸೂಯೆ ಮತ್ತು ದ್ವೇಷಗಳ ಫಲವೇ ಒಂದನೆಯ ಮಹಾಯುದ್ಧ.

ಯುದ್ಧದ ದೀರ್ಘಕಾಲಿಕ ಕಾರಣಗಳಲ್ಲಿ ಬಹಳ ಮುಖ್ಯವಾದದ್ದೆಂದರೆ 1870ರ ಅನಂತರ ಯುರೋಪಿನಲ್ಲಿ ಬಲಿಷ್ಠವಾದ ಮಹಾರಾಷ್ಟ್ರಗಳ ಮದೋನ್ಮತ್ತತೆ ಮತ್ತು ಆಕ್ರಮಣ ಮನೋಭಾವ. 1871ರಲ್ಲಿ ಜರ್ಮನ್ ಸಾಮ್ರಾಜ್ಯದ ನಿರ್ಮಾಣವಾದಾಗಲೇ ಒಂದನೆಯ ಮಹಾಯುದ್ಧದ ಮೊದಲ ಭೇರೀನಾದವಾಯಿತೆನ್ನಬೇಕು. ಉತ್ತರ ಮಧ್ಯ ಯುರೋಪಿನಲ್ಲಿ ಈ ಮಹಾಶಕ್ತಿಯ ನಿರ್ಮಾಣವಾದೊಡನೆಯೇ ಇದರ ನೆರೆಹೊರೆಯ ರಾಷ್ಟ್ರಗಳಾದ ಫ್ರಾನ್ಸ್‌, ರಷ್ಯ, ಆಸ್ಟ್ರಿಯ-ಹಂಗರಿಗಳ ಗಡಿ ರೇಖೆಗಳುದ್ದಕ್ಕೂ ಬಿಸಿ ತಟ್ಟಿತು.

1871ರಲ್ಲಿ ಜರ್ಮಿನಿಯ ಛಾನ್ಸಲರ್ ಆದ ರಾಜಕುಮಾರ ಆಟೋ ಫಾನ್ ಬಿಸ್óಮಾರ್ಕ್ ಮಹಾ ಪ್ರತಿಭಾವಂತ (ನೋಡಿ: ಬಿಸ್óಮಾರ್ಕ್, ಆಟೋ ಫಾನ್). ಆತನಿಗೆ ನೆರೆರಾಷ್ಟ್ರಗಳೊಂದಿಗೆ ಯುದ್ಧಮಾಡುವ ಇಚ್ಛೆಯಿರಲಿಲ್ಲ. ರಷ್ಯ, ಆಸ್ಟ್ರಿಯ, ಬ್ರಿಟನ್ ಮತ್ತು ಇಟಲಿಗಳು ಜರ್ಮನಿಯ ವಿರುದ್ಧ ಒಂದಾಗುವಂತೆ ಮಾಡುವ ಉದ್ದೇಶದಿಂದ ಅವುಗಳ ಸ್ನೇಹ ಬಯಸಿದ. ಆದರೆ ಇಂಥ ಸ್ನೇಹದ ಒಡಂಬಡಿಕೆಗಳು ವಿಷಮ ಪರಿಸ್ಥಿತಿಯ ಸೂಚನೆಗಳೆಂದೇ ಹೇಳಬೇಕು. ಫ್ರಾನ್ಸಿಗೆ ಸೇರಿದ್ದ ಆಲ್ಸೇಸ್ ಮತ್ತು ಪುರ್ವ ಲೊರೀನ್ ಪ್ರದೇಶಗಳನ್ನು ಜರ್ಮನಿ ವಶಪಡಿಸಿಕೊಂಡಿದ್ದರಿಂದ (1871) ಫ್ರಾನ್ಸಿಗೆ ಮುಖಭಂಗವಾಗಿತ್ತು. ಈ ಪ್ರದೇಶಗಳಲ್ಲಿರುವ ಬಹುಮಂದಿ ಜರ್ಮನ್ ಜನಾಂಗದವರೆಂಬುದೂ ಸ್ವರಕ್ಷಣೆಯ ದೃಷ್ಟಿಯಿಂದ ಇದು ಜರ್ಮನಿಗೆ ಸೇರಬೇಕೆಂಬುದೂ ಈ ಆಕ್ರಮಣಕ್ಕೆ ಕಾರಣ. ಫ್ರಾನ್ಸ್‌ ಒಂಟಿ ಯಾಗಿದ್ದರೂ ಸುಮ್ಮನಿರಲಿಲ್ಲ. ತನ್ನ ಭದ್ರತೆಗಾಗಿ ಅದು ಇತರ ರಾಷ್ಟ್ರಗಳ ಸ್ನೇಹಕ್ಕಾಗಿ ಕೈಚಾಚಿತು. ಬಿಸ್óಮಾರ್ಕ್ ನ ಅನಂತರ 1894ರಲ್ಲಿ, ಫ್ರಾನ್ಸ್‌-ರಷ್ಯಗಳ ನಡುವೆ ಮೈತ್ರಿ ಏರ್ಪಟ್ಟಾಗ ಜರ್ಮನ್ ವಿರುದ್ಧ ಪಕ್ಷ ಬಲಗೊಂಡಿತೆನ್ನಬಹುದು. ಬಲಿಷ್ಠ ಜರ್ಮನಿಯಿಂದ ನೆರೆಹೊರೆಯ ರಾಷ್ಟ್ರಗಳ ನೆಮ್ಮದಿ ಭಂಗವಾಗಿದ್ದದೂ ನಿಜ. ಯುರೋಪಿನ ಪ್ರತಿಯೊಂದು ರಾಷ್ಟ್ರವೂ ಶಸ್ತ್ರಾಸ್ತ್ರ ಸಂಗ್ರಹಣೆಗೆ ತೊಡಗಿತು. ಇದರಿಂದ ರಾಷ್ಟ್ರಗಳ ನಡುವೆ ಭೀತಿ ಹೆಚ್ಚಲು ಕಾರಣವಾಯಿತೇ ಹೊರತು ಭದ್ರತೆ ಬೆಳೆಯಲಿಲ್ಲ. ಪ್ರತಿಯೊಂದು ರಾಷ್ಟ್ರವೂ ತನ್ನ ತರುಣರನ್ನು ಜಮಾಯಿಸಿ ಅವರಿಗೆ ಖಾಕಿ ತೊಡಿಸಿ ಕವಾಯತು ಮಾಡಿಸುತ್ತಿತ್ತು. ಯುದ್ಧ ಈಗಲೋ ಆಗಲೋ ಎಂಬ ಭಾವನೆ 19ನೆಯ ಶತಮಾನದ ಅಂತ್ಯದ ವೇಳೆಗೆ ಉದ್ಭವವಾಗಿತ್ತು.

ಇದೇ ಕಾಲಕ್ಕೆ ಯುರೋಪಿನ ಆರ್ಥಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಆಗಿದ್ದ ಬದಲಾವಣೆಗಳು ಅಗಾಧ. ಸಾರ್ವತ್ರಿಕ ವಿದ್ಯಾಭ್ಯಾಸ, ಪತ್ರಿಕಾ ಪ್ರಸಾರ ಮತ್ತು ಸಂಚಾರಸೌಲಭ್ಯ ವಿಸ್ತರಣೆಗಳಿಂದ ಜನರಲ್ಲಿ ರಾಷ್ಟ್ರಾಭಿಮಾನ ಬೆಳೆದಿತ್ತು. ಕೈಗಾರಿಕಾ ಕ್ರಾಂತಿಯ (ನೋಡಿ) ಫಲವಾಗಿ ಸಂಪತ್ತಿನ ಹೆಚ್ಚಳವೂ ಕಾರ್ಮಿಕರ ಬಲವೂ ಹೆಚ್ಚಿದ್ದುವು. ನೂತನವಾಗಿ ನಿರ್ಮಿತವಾದ ನಗರಗಳಿಂದ ಉದ್ಭವವಾದ ಸಮಸ್ಯೆಗಳೂ ಅನೇಕ. ಇವೆಲ್ಲ ಕಾರಣಗಳಿಂದಾಗಿ ಅಲ್ಲಿನ ಜನಜೀವನದಲ್ಲೂ ಒಂದು ಬಗೆಯ ನೆಮ್ಮದಿ ಭಂಗವೂ ಅಲ್ಲೋಲಕಲ್ಲೋಲವೂ ಆಗಿದ್ದುವು.

ಆಗ ಯುರೋಪಿನ ಯಾವ ರಾಷ್ಟ್ರವೇ ಆಗಲಿ ನೆರೆ ರಾಜ್ಯಗಳನ್ನು ಗೆದ್ದು ಯುರೋಪಿನ ಸಾರ್ವಭೌಮತ್ವ ಸ್ಥಾಪಿಸಬೇಕೆಂಬ ಇಚ್ಛೆ ಹೊಂದಿತ್ತೆನ್ನಲು ಆಧಾರಗಳಿಲ್ಲ. ಆದರೆ ಅಲ್ಲಿನ ಜನರಲ್ಲಿ ರಾಷ್ಟ್ರಾಭಿಮಾನ ಬೆಳೆದಿದ್ದುದಂತೂ ನಿಜ. ಇದರಿಂದಾಗಿ ರಾಷ್ಟ್ರಗಳ ನಡುವೆ ಪರಸ್ಪರ ಕೊಡು-ಕೊಳ್ಳುವ ಮನೋಭಾವ ಬೆಳೆಯಲವಕಾಶವಾಗಲಿಲ್ಲ. ಮೈತ್ರಿಯ ಧೋರಣೆಯಿಂದ ತಮ್ಮ ಅಭಿಮಾನಕ್ಕೆ ಕುಂದಾದೀತೇನೋ-ಎಂಬುದೇ ಅವುಗಳ ಅಂಜಿಕೆ.

ಯುದ್ಧ ಪುರ್ವದ ಐರೋಪ್ಯ ರಾಷ್ಟ್ರಗಳ ಆರ್ಥಿಕ ಸಾಮ್ರಾಜ್ಯವಾದವನ್ನು ಈ ದೃಷ್ಟಿಯಿಂದ ನೋಡುವುದು ಅವಶ್ಯ. ವಸಾಹತುಗಳಿಂದ ತಮಗೆ ಲಾಭವೆಂಬುದನ್ನರಿತ ಐರೋಪ್ಯ ರಾಷ್ಟ್ರಗಳು ಇವುಗಳ ಸಂಪಾದನೆಗಾಗಿ 1881ರಿಂದ ಮುಂದೆ ತಂತಮ್ಮಲ್ಲೇ ಸ್ಪರ್ಧಿಸಿದುವೆಂಬುದು ನಿಜವಾದರೂ ಈ ಸ್ಪರ್ಧೆಯ ಹಿಂದೆ ಅವುಗಳ ಅಭಿಮಾನವೂ ಇತ್ತು. ಅವುಗಳಿಗೆ ಯುರೋಪಿನಲ್ಲಿ ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ವಸಾಹತುಗಳು ಸಾಧನಗಳಾದುವು. ಯುರೋಪಿನ ರಾಷ್ಟ್ರಗಳಿಗೆ ತಂತಮ್ಮ ವ್ಯಾಜ್ಯಗಳ ಪರಿಹಾರಕ್ಕೆ ಪಣವಾಗಿ ವಸಾಹತುಗಳು ಒದಗಿಬಂದುವು. ಇವಿಲ್ಲದಿದ್ದರೆ ಐರೋಪ್ಯ ರಾಷ್ಟ್ರಗಳ ನಡುವೆಯೇ ಪರಸ್ಪರ ಆಕ್ರಮಣ ಪ್ರಬಲವಾಗಿ 1914ಕ್ಕೂ ಮುಂಚೆಯೇ ಯುದ್ಧ ಸಂಭವಿಸಬಹುದಾಗಿತ್ತು. ಅಂತೂ ವಸಾಹತುಗಳ ಸ್ಪರ್ಧೆಯೂ ಐರೋಪ್ಯ ರಾಷ್ಟ್ರಗಳಲ್ಲಿ ಎರಡು ಬಣಗಳು ವೃದ್ಧಿಯಾಗಲು ಒಂದು ಮುಖ್ಯ ಕಾರಣ.

Similar questions