India Languages, asked by jyotipoojari38, 9 months ago

ಕನ್ನಡ ವರ್ಣಮಾಲೆ ಎಷ್ಟು?

Answers

Answered by tamanna610
19

Answer:

49

Explanation:

there are 49 letters divided into 3 groups

Answered by doverani
34

Answer:

ನಮಸ್ಕಾರ

Explanation:

ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಸ್ವರಗಳು -೧೩

ವ್ಯಂಜನಗಳು -೩೪

ಯೋಗವಾಹಗಳು-೦೨

ಸ್ವರ ಸಂಪಾದಿಸಿ

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.

ಸ್ವರಗಳ ವಿಧ ಸಂಪಾದಿಸಿ

ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರಗಳು.

ಹೃಸ್ವ ಸ್ವರ ಸಂಪಾದಿಸಿ

ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು.

ದೀರ್ಘ ಸಂಪಾದಿಸಿ

ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.

ವ್ಯಂಜನ ಸಂಪಾದಿಸಿ

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ

ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು)

ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ)

ವರ್ಗೀಯ ವ್ಯಂಜನ ಸಂಪಾದಿಸಿ

ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,

ಕ-ವರ್ಗ, = ಕ, ಖ, ಗ, ಘ, ಙ.

ಚ-ವರ್ಗ, = ಚ, ಛ, ಜ, ಝ, ಞ.

ಟ-ವರ್ಗ ,= ಟ, ಠ, ಡ, ಢ, ಣ.

ತ-ವರ್ಗ, = ತ, ಥ, ದ, ಧ, ನ.

ಪ-ವರ್ಗ,= ಪ, ಫ, ಬ, ಭ, ಮ.

ಅವರ್ಗೀಯ ವ್ಯಂಜನ ಸಂಪಾದಿಸಿ

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.

ಕನ್ನಡ ಒತ್ತಕ್ಷರಗಳು ಸಂಪಾದಿಸಿ

ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ:

ಕ್ಕ ಖ್ಖ ಗ್ಗ ಘ್ಘ ಙ್ಙ

ಚ್ಚ ಛ್ಛ ಜ್ಜ ಝ್ಝ ಞ್ಞ

ಟ್ಟ ಠ್ಠ ಡ್ಡ ಢ್ಢ ಣ್ಣ

ತ್ತ ಥ್ಥ ದ್ದ ಧ್ಧ ನ್ನ

ಪ್ಪ ಫ್ಫ ಬ್ಬ ಭ್ಭ ಮ್ಮ

ಯ್ಯ ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ

ಯೋಗವಾಹಗಳು ಸಂಪಾದಿಸಿ

ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ.

ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ ೠ ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು.

ಹಳೆಗನ್ನಡದ ಮೂರು ಅಕ್ಷರಗಳಾದ ಱ, ೞ ಮತ್ತು ನ್(ನ್, ಇದಕ್ಕೆ ಯೂನಿಕೋಡ್ ಇಲ್ಲ) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು.

ಇಂಗ್ಲಿಷ್‌ನ F ಮತ್ತು Z ಅಕ್ಷರಗಳಿಗೆ ಫ಼ ಮತ್ತು ಜ಼ (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ

Similar questions