India Languages, asked by Mithun3023, 10 months ago

ದೂರದರ್ಶನ ಪ್ರಬಂಧ .........​

Answers

Answered by gcveerabhadrappagvva
29

Answer:

ದೃಶ್ಯಗಳನ್ನೂ ಧ್ವನಿಗಳನ್ನೂ ಜಂಟಿಯಾಗಿ ಪ್ರಸಾರ ಮಾಡುವ ದೂರದರ್ಶನವೆಂಬ ಮಾಯಾಪೆಟ್ಟಿಗೆಯ ಆವಿಷ್ಕಾರವಾದದ್ದು ಇಪ್ಪತ್ತನೆಯ ಶತಮಾನದಲ್ಲಿ. ದೂರದರ್ಶನದ ಆವಿಷ್ಕಾರದ ಮೊದಲ ಹೆಜ್ಜೆಗಳನ್ನು 1920ರ ದಶಕದಷ್ಟು ಹಿಂದೆ ಗುರುತಿಸಬಹುದು. ಸ್ಕಾಟ್ಲೆಂಡಿನ ಜಾನ್ ಲೋಗಿ ಬೆಯರ್ಡ್ ಎಂಬ ಯುವ ತಂತ್ರಜ್ಞಾನಿ ಶಬ್ದಗಳನ್ನು ಕೊಂಡೊಯ್ಯುವ ರೆಡಿಯೋ ಮೂಲಕ ಚಿತ್ರಗಳನ್ನು ಕಳುಹಿಸುವ ಸಾಧ್ಯತೆ ಬಗ್ಗೆ 1924ರಲ್ಲಿ ಪ್ರಯೋಗಗಳನ್ನು ಆರಂಭಿಸಿದ. ತಿರುಗುವ ತೂತುಗಳಿರುವ ತಟ್ಟೆಯೊಂದನ್ನು ಬಳಸಿಕೊಂಡು ಇವನು ಪ್ರಯೋಗ ಆರಂಭಿಸಿದ. ಇದರಲ್ಲಿ ಚಿತ್ರವನ್ನು ದಾಖಲಿಸಿ ಪ್ರಸಾರ ಮಾಡುವುದು ಸಾಧ್ಯ ಎಂದು ಕಂಡುಬಂದಾಗ 1925ರಲ್ಲಿ ಟೆಲಿಷನ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿದ. ಬಿಬಿಸಿ ಇವನ ತಂತ್ರಜ್ಞಾನವನ್ನು ಒಪ್ಪಿಕೊಂಡಿತು.. 1926ರಲ್ಲಿ ಈತನ ದೂರದರ್ಶನ ಪ್ರಸಾರ ಮಾಡಲು ಬಿಬಿಸಿ ಮುಂದಾಯಿತು. ಇದು ಮೊತ್ತ ಮೊದಲ ತಂತಿರಹಿತ ದೂರದರ್ಶನ ಪ್ರಸಾರ ವ್ಯವಸ್ಥೆಯಾಗಿತ್ತು. 1929ರಲ್ಲಿ ಲಂಡನ್ನಿನಿಂದ ನ್ಯೂಯಾರ್ಕಿಗೆ ಪ್ರಪಥಮ ದೂರದರ್ಶನ ಪ್ರಸಾರ ಮಾಡಲಾಯಿತು. 1920ರ ದಶಕದ ಆರಂಭದಲ್ಲೇ ಚಲಿಸುವ ಚಿತ್ರಗಳಿಗೆ ಧ್ವನಿ ಸಂಯೋಜನೆ ಮಾಡುವ ಪ್ರಯೋಗಗಳು ನಡೆದಿದ್ದವು. 1923ರಷ್ಟು ಹಿಂದೆಯೇ ಡಾ.ವ್ಲಾಡಿಮಿರ್ ಜ್ವೋರಿಕಿನ್ ಎಂಬ ವಿಜ್ಞಾನಿ ಐಕನೋಸ್ಕೋಪ್ ಎನ್ನುವ ವಿದ್ಯುತ್ ಟೆಲಿವಿಷನ್ ಟ್ಯೂಬ್ ಕಂಡುಹಿಡಿದಿದ್ದ. ಇದರಿಂದ ಟೆಲಿವಿಷನ್ ಸೆಟ್ ಅಥವಾ ದೂರದರ್ಶನ ಪೆಟ್ಟಿಗೆಯ ತಯಾರಿಕೆಗೆ ಹಾದಿ ಸುಗಮವಾಯಿತು. ಇದಾದ ಎರಡು ವರ್ಷಗಳ ನಂತರ ಅಮೇರಿಕದಲ್ಲಿ ಜೆನ್‍ಕಿನ್ಸ್‍ನೀಸ್ ಎಂಬುವವನು ದೂರದರ್ಶನ ಪೆಟ್ಟಿಗೆಗಳ ತಯಾರಿಕೆಗೆ ತಳಹದಿ ಹಾಕಿದ. ಬ್ರಿಟೀಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ 1936ರಲ್ಲಿ ಸಾರ್ವಜನಿಕರಿಗೆ ದೂರದರ್ಶನ ಪ್ರಸಾರ ಪ್ರಾರಂಭ ಮಾಡಿತು. ಇದಕ್ಕೂ ಮೊದಲೆ, 1930ರಲ್ಲಿ ನ್ಯೂಯಾಕಿನಲ್ಲಿ ನ್ಯಾಷನಲ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ ದೂರದರ್ಶನ ಪ್ರಯೋಗಗಳನ್ನು ಆರಂಭಿಸಿತ್ತು. ನಂತರ ಜರ್ಮನಿ, ಫ್ರಾನ್ಸ್ ದೂರದರ್ಶನ ಪ್ರಯೋಗಗಳಲ್ಲಿ ಸೇರಿಕೊಂಡವು. ಎರಟನೆಯ ಮಹಾಯುದ್ಧ ಶುರುವಾದದ್ದೇ ನಾಜಿ ಪಕ್ಷದ ಸಮ್ಮೇಳನಗಳು ದೂರದರ್ಶನದಲ್ಲಿ ಪ್ರಸಾರಗೊಂಡವು. 1936ರಲ್ಲಿ ಬರ್ಲಿನ್‍ನಲ್ಲಿ ನಡೆದ ಒಲಂಪಿಕ್ಸ್ ಪಂದ್ಯಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಆ ವೇಳೆಗೆ ವಿಶ್ವದಲ್ಲಿ ಸುಮಾರು ಇಪ್ಪತ್ತು ಸಾವಿರ ದೂರದರ್ಶನ ಸೆಟ್‍ಗಳಿದ್ದವು. 1944ರಲ್ಲಿ ಬಿಬಿಸಿ ತನ್ನ ಎರಡನೇ ಟಿವಿ ಚಾನಲ್ ಪ್ರಾರಂಭಿಸಿತು. ಈ ವಾಹಿನಿ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದೂರದರ್ಶನ ಕಾರ್ಯಕ್ರಮಗಳ ವಿನಿಮಯವೂ ಪ್ರಾರಂಭವಾಯಿತು. ಟೆಲಿವಿಷನ್ ಎನ್ನುವುದು ಕಪ್ಪು ಮತ್ತು ಬಿಳಿ ಅಥವಾ ಬಣ್ಣದಲ್ಲಿ ಹಾಗೂ ಎರಡು ಅಥವಾ ಮೂರು ಆಯಾಮಗಳಲ್ಲಿ ಮತ್ತು ಧ್ವನಿಗಳಲ್ಲಿ ಚಲಿಸುವ ಚಿತ್ರಗಳನ್ನು ವರ್ಗಾಯಿಸಲು ಬಳಸಲಾಗುವ ದೂರಸಂವಹನ ಮಾಧ್ಯಮವಾಗಿದೆ. ಈ ಪದವು ಟೆಲೆವಿಷನ್ ಸೆಟ್ ಅಥವಾ ಟೆಲೆವಿಷನ್ ಪ್ರಸಾರದ ಮಾಧ್ಯಮವನ್ನು ಉಲ್ಲೇಖಿಸುತ್ತದೆ. ಟೆಲಿವಿಷನ್ ಎನ್ನುವುದು ಜಾಹೀರಾತು, ಮನರಂಜನೆ, ಕ್ರೀಡೆ ಮತ್ತು ಸುದ್ದಿಗಾಗಿ ಬಳಸುವ ಒಂದು ಸಮೂಹ ಮಾಧ್ಯಮವಾಗಿದೆ. ದೂರದರ್ಶನವನ್ನು ಕಂಡುಹಿಡಿದವರಾರು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಸ್ವಲ್ಪ ಕಷ್ಟಾನೇ. 19ನೇ ಶತಮಾನದ ಉತ್ತರಾರ್ಧದಲ್ಲಿ ಒಂದೆರಡು ವಿಜ್ಞಾನಿಗಳು ಪ್ರಮುಖ ಸಂಶೋಧನೆಗಳನ್ನು ಮಾಡಿದರು. 1920ರ ದಶಕದಲ್ಲಿ ಜಪಾನ್, ಬ್ರಿಟನ್, ಜರ್ಮನಿ, ಅಮೇರಿಕಾ ಮತ್ತು ರಷ್ಯಾದಿಂದ 50ಕ್ಕಿಂತ ಹೆಚ್ಚಿನ ಸಂಶೋಧಕರು ಟೆಲೆವಿಷನ್‍ಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಅವುಗಳಲ್ಲಿ ಹಲವು ಪ್ರದರ್ಶನಗಳು ಬಹಳ ಭರವಸೆ ನೀಡಿದೆ. ಸ್ಕಾಟೀಷ್ ಇಂಜಿನೀಯರ್ ಜಾನ್ ಲೋಗಿ ಬೈರ್ಡ್ ಎಂಬಾತ ವಿಶ್ವದಲ್ಲೇ ಮೊದಲ ಬಾರಿಗೆ ಯಾಂತ್ರಿಕ ದೂರದರ್ಶನವನ್ನು ನಿರ್ಮಿಸಿ, ಪ್ರದರ್ಶಿಸಿದರು. ಕಪ್ಪು ಮತ್ತು ಬಿಳಿ ಬಣ್ಣದ ದೂರದರ್ಶನದ ಏಕರೂಪದ ಮಾನದಂಡಗಳು 1967ರಲ್ಲಿ ಕಾಣಿಸಿಕೊಂಡವು. ಇಪ್ಪತ್ತನೆ ಶತಮಾನದ ಅತ್ಯಂತ ಪ್ರಮುಖ ಆವಿಷ್ಕಾರಗಳಲ್ಲಿ ಇದು ಒಂದಾಗಿದ್ದು, ಮನರಂಜನೆ ಮತ್ತು ಶಿಕ್ಷಣವನ್ನು ನೀಡುವ ಉತ್ತಮ ಮತ್ತು ಆರೋಗ್ಯಕರ ಸಂವಹನ ಮಾಧ್ಯಮಾಗಿದೆ

Explanation:

plz mark me as brianlist plz

Similar questions