ಕನ್ನಡದ ಬಗ್ಗೆ ಅಭಿಮಾನ ಗೌರವ ಮತ್ತು ಪ್ರೀತಿ
Answers
Answer:
ಕೆಯನ್ನು ನಾವು ಇಲ್ಲಿ ನೋಡುತ್ತೇವೆ ☺. ಇಲ್ಲಿ ಸಾಮಾನ್ಯವಾಗಿ ಮಕ್ಕಳಿಗೆ ಇಂಗ್ಲೀಷ್ ನಲ್ಲಿ ಹೆಚ್ಚು ಮಾತಾನಾಡಿಸುತ್ತಾರೆ, ಕಾರಣ ಇಷ್ಟೇ- ನಾಳೆ ಶಾಲೆಗೆ ಸೇರಿದಾಗ ಬೇರೆ ರಾಜ್ಯದ ಅಷ್ಟೇ ಅಲ್ಲದೇ ಬೇರೆ ಬೇರೆ ದೇಶದ ಮಕ್ಕಳೊಡನೆ ಕಲಿಯಬೇಕು. ಆದರೂ ನನ್ನ ಮಗನಿಗೆ ಇನ್ನೂ ಇಂಗ್ಲೀಷ್ ನ ಪರಿಚಯ ಮಾಡಿಸಿಲ್ಲ..ಕನ್ನಡ ಹಾಡು,ಪದ್ಯಗಳ ಕಾರ್ಟೂನ್ ಗಳನ್ನೇ ತೋರಿಸಿ ಬೆಳೆಸುತ್ತಿದ್ದೇವೆ. ಹೇಗಿದ್ದರೂ ಹೊರಗೆ ಆಟ ಆಡಲು ಹೋದಾಗ, ಮುಂದೆ ಶಾಲೆಗೆ ಹೋದಾಗ ಕಲಿಯಲೇಬೇಕಲ್ಲ..ನನ್ನ ಮಾತೃ ಭಾಷೆ ಕನ್ನಡದ ಮೇಲಿನ ಅಪಾರವಾದ ಗೌರವ ಪ್ರೇಮ ನನ್ನ ಅಪ್ಪ ನನಗೆ ಕೊಟ್ಟ ಬಳುವಳಿ! ಅವರ ಕನ್ನಡದ ಮೇಲಿನ ಪ್ರೀತಿ, ಗೌರವ ಅವರು ಕನ್ನಡದಲ್ಲೇ ಸಹಿ ಹಾಕುತ್ತಿದ್ದ ರೀತಿಯೇ ವಿವರಿಸುತ್ತಿತ್ತು. ಅವರು ಸರ್ಕಾರಿ ಕಚೇರಿಯಲ್ಲಿ ಪ್ರತಿವರ್ಷವೂ ಸ್ವಾತಂತ್ರ್ಯ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದ ರೀತಿ; ಇವೆಲ್ಲವೂ ನನ್ನಲ್ಲೂ ಆ ಭಾಷಪ್ರೇಮವನ್ನು ಚಿಗುರಿಸಿತ್ತು. ನಮ್ಮ ಮನೆ ಎಷ್ಟು ಕನ್ನಡಮಯವಾಗಿತ್ತು ಎಂದರೆ ನಾನು ಇಂಜಿನಿಯರಿಂಗ್ ಪದವಿಯ 5ನೇ ಸೆಮಿಸ್ಟರ್ ವರೆಗೂ ಕನ್ನಡ ದಿನಪತ್ರಿಕೆಗಳು ಮಾತ್ರ ತರಿಸುತ್ತಿದ್ದರು. ಆ ಸೆಮಿಸ್ಟರ್ ನಂತರ ಮಲ್ಟಿ ನ್ಯಾಷನಲ್ ಕಂಪನಿಗಳ ಸಂದರ್ಶನದ ತಯಾರಿಗಳಿಗೆ ಇಂಗ್ಲೀಷ್ ದಿನಪತ್ರಿಕೆಗಳು ಅಗತ್ಯವಿದೆ ಎಂದು ಹೇಳಿದ ಮೇಲೆ ನಮ್ಮ ಮನೆಯ ಅಂಗಳದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ದಿನಪತ್ರಿಕೆಗಳು ತರಿಸಲಾಗಿತ್ತು. ಆ ದಿನಗಳಿಂದ ಬೆಳೆದಿದ್ದ ನನ್ನ ಮಾತೃ ಭಾಷೆ ಕನ್ನಡದ ಮೇಲಿನ ಪ್ರೀತಿಯೇ ಇಂದು ಕನ್ನಡದಲ್ಲಿ ಬ್ಲಾಗ್ ಬರೆಯಲು ಉತ್ತೇಜನ ನೀಡಿತು. ಈ ಬಗೆಗಿನ ಕನ್ನಡದ ಒಲವು ಒಂದು ಕಾರಣವಾದರೆ ಮಾತೃಭಾಷೆಯನ್ನು ಕಲಿತರೆ ಅದರಿಂದಾಗುವ ಲಾಭಗಳು ಕೂಡ ಮಾತೃಭಾಷೆಗೆ ಕೊಡುವ ಆದ್ಯತೆಯನ್ನು ಹೆಚ್ಚಿಸಿದೆ. ಲಾಭಗಳೇನು ಗೊತ್ತೆ? ಬೌದ್ಧಿಕ ಅಭಿವೃದ್ಧಿಮಾತೃ ಭಾಷೆಯಲ್ಲಿ ಕಲಿತರೆ ಯಾವುದೇ ವಿಚಾರ ಬೇಗ ಗ್ರಹಿಸಲು ಸಾಧ್ಯವಾಗುತ್ತದೆ. ಮಾತೃಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವವರಲ್ಲಿ ಅರಿವಿನ ಬೆಳವಣಿಗೆ ಮತ್ತು ಬೌದ್ಧಿಕ ಬೆಳವಣಿಗೆಯು ತುಲನಾತ್ಮಕವಾಗಿ ವೇಗವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ವಿದ್ಯಾರ್ಥಿಯ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ, ಅವರ ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಮಾಧ್ಯಮದಲ್ಲಿ ಕಲಿಸುವವರಿಗಿಂತ ಅವನ ಅಥವಾ ಅವಳ ಶೈಕ್ಷಣಿಕ ಯಶಸ್ಸಿನ ಪ್ರಮಾಣ ಹೆಚ್ಚಾಗಿದೆ ಎಂದು ಸಹ ಗಮನಿಸಲಾಗಿದೆ.ನಮ್ಮ ಸಂಸ್ಕೃತಿಯೊಂದಿಗೆ ಉತ್ತಮ ಸಂಪರ್ಕನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡಲು ಭಾಷೆಗಳು ಪ್ರಮುಖ ಮಾರ್ಗವಾಗಿದೆ. ಆಗಾಗ್ಗೆ ಒಂದು ಭಾಷೆಯ ನೇರ ಭಾಷಾಂತರವು ಮೂಲ ಭಾಷೆಯಲ್ಲಿರುವಂತೆಯೇ ಅದೇ ಸಾರವನ್ನು ಹೊಂದಿರುವುದಿಲ್ಲ. ಹೀಗಾಗಿ, ಒಂದು ಸಂಸ್ಕೃತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಭಾಷೆಯನ್ನು ತಿಳಿದುಕೊಳ್ಳುವುದು. ನಮ್ಮ ಸಂಸ್ಕೃತಿ ಮತ್ತು ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಮಾತೃಭಾಷೆ ನಮಗೆ ಸಹಾಯ ಮಾಡುತ್ತದೆ.ಎರಡನೇ ಭಾಷಾ ಕಲಿಕೆಒಬ್ಬರು ತಮ್ಮ ಮಾತೃಭಾಷೆಯನ್ನು ಕಲಿಕೆ ಒಳ್ಳೆಯ ಗುಣಮಟ್ಟದಲ್ಲಿದ್ದರೆ ಇತರ ಭಾಷೆಗಳನ್ನು ಕಲಿಯುವುದು ಇನ್ನೂ ಸುಲಭವಾಗುತ್ತೆ ಎಂದು ಅಧ್ಯಯನ ಹೇಳುತ್ತಿದೆ. ತಮ್ಮ ಮಾತೃಭಾಷೆಯಲ್ಲಿ ಗ್ರಹಿಸಿದರೆ, ಕಲಿಯುವವರಗೆ ಹೊಸ ಭಾಷೆಯನ್ನು ಕರಗತ ಮಾಡಿಕೊಳ್ಳುವುದು ಸುಲಭ. ಮಾತೃಭಾಷೆಯನ್ನು ಬಲವಾಗಿ ಕಲಿತರೆ, ಇದರ ಫಲವಾಗಿ ಪರಿಕಲ್ಪನೆಗಳ ಬಲವಾದ ಗ್ರಹಿಕೆಯಾಗುತ್ತದೆ. ಜೊತೆಯಲ್ಲಿ ‘ಭಾಷೆ’ಯಾಗಿ ಕಲಿಸಲಾಗುವ ಇನ್ನೊಂದು ‘ಪರಭಾಷೆ’ಗೂ ಈ ಪರಿಕಲ್ಪನೆಗಳನ್ನು ವರ್ಗಾಯಿಸುವಲ್ಲಿ, ಪರಿವರ್ತಿಸುವಲ್ಲಿ ಮಕ್ಕಳು ಯಶಸ್ವಿಯಾಗುತ್ತಾರೆ.ಹೆಮ್ಮೆನಮ್ಮ ಮಾತೃಭಾಷೆಯನ್ನು ಚೆನ್ನಾಗಿ ತಿಳಿದುಕೊಳ್ಳುವುದು ಹೆಮ್ಮೆಯ ವಿಷಯ. ಇದು ಒಬ್ಬರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯ ಮನಸ್ಸಿನಲ್ಲಿ ಜಾಗೃತಿ ಮೂಡಿಸುತ್ತದೆ ಮತ್ತು ಅವರ ಸಾಂಸ್ಕೃತಿಕ ಗುರುತನ್ನು ಉತ್ತಮ ರೀತಿಯಲ್ಲಿ ಸಂಪರ್ಕಿಸಲು ಸಹಾಯ ಮಾಡುತ್ತದೆ.ವ್ಯಕ್ತಿಯ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವಲ್ಲಿ ಮಾತೃಭಾಷೆಯು ಭಾರಿ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಮಾತೃಭಾಷೆಯು ಮಗು ಜನಿಸಿದ ನಂತರ ಕೇಳಲು ಪ್ರಾರಂಭಿಸುವ ಭಾಷೆಯಾಗಿದೆ ಆದ್ದರಿಂದ, ಇದು ನಮ್ಮ ಭಾವನೆಗಳು ಮತ್ತು ಆಲೋಚನೆಗಳಿಗೆ ಒಂದು ನಿರ್ದಿಷ್ಟ ಆಕಾರವನ್ನು ಒದಗಿಸಲು ಸಹಾಯ ಮಾಡುತ್ತದೆ. ವಿಮರ್ಶಾತ್ಮಕ ಚಿಂತನೆ, ಎರಡನೆಯ ಭಾಷೆಯನ್ನು ಕಲಿಯುವ ಕೌಶಲ್ಯ ಮತ್ತು ಸಾಕ್ಷರತೆಯ ಕೌಶಲ್ಯಗಳಂತಹ ಇತರ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ನಿಮ್ಮ ಮಾತೃಭಾಷೆಯನ್ನು ಕಲಿಯವುದು ಬಹುಮುಖ್ಯವಾಗಿದೆ. ಹೀಗಾಗಿ, ಮಾತೃಭಾಷೆಯ ಕಲಿಕೆಯನ್ನು ಪರಿಣಾಮಕಾರಿ ಸಾಧನವಾಗಿ ಬಳಸಬಹುದು ಎಂದು ಹೇಳಬಹುದು. ಇನ್ಫೊಸಿಸ್ ಫೌಂಡೇಶನ್ ನ ಮುಖ್ಯಸ್ಥೆ ಶ್ರೀಮತಿ ಸುಧಾ ಮೂರ್ತಿಯವರು ಹೇಳುವಂತೆ"THERE’S NOTHING SHAMEFUL IN KNOWING ONE’S NATIVE LANGUAGE. IT IS, IN FACT, MY RIGHT AND MY PRIVILEGE. I ONLY SPEAK IN ENGLISH WHEN SOMEBODY CAN’T UNDERSTAND KANNADA." "ಒಬ್ಬರ ಭಾಷೆಯನ್ನು ತಿಳಿದುಕೊಳ್ಳುವುದರಲ್ಲಿ ನಾಚಿಕೆಗೇಡಿನ ಏನೂ ಇಲ್ಲ.ಇದು ನಿಜಕ್ಕೂ ನನ್ನ ಹಕ್ಕು ಮತ್ತು ನನ್ನ ಸವಲತ್ತು.ಯಾರಾದರೂ ಕನ್ನಡವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಮಾತ್ರ ನಾನು ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ." ಕನ್ನಡ ನಾಡು- ನುಡಿ ಬಗ್ಗೆ ಅಭಿಮಾನ ನವೆಂಬರ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ವರ್ಷ ಪೂರ್ತಿ ಕನ್ನಡ ನಾಡು - ನುಡಿ - ಸಂಸ್ಕೃತಿ ಉಳಿಸುವ , ಬೆಳೆಸುವ ಕಾರ್ಯ ನಡೆಯುತ್ತಿರಲಿ. "ಎಲ್ಲಾದರೂ ಇರು ..ಎಂತಾದರು ಇರು.. ಎಂದೆದಿಗೂ ನೀ ಕನ್ನಡವಾಗಿರು "ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಪ್ರಪಂಚದ ಯಾವ ಮೂಲೆಯಲ್ಲಿದ್ದರು ನಾವು ಕನ್ನಡಿಗರು, ಕನ್ನಡವೇ ನಮ್ಮ ಮಾತೃಭಾಷೆ ಎಂಬ ಸತ್ಯ ನಾವು ಮರೆಯಬಾರದು . ನಮ್ಮ ಮಾತೃಭಾಷೆ ಬಗ್ಗೆ ಅಪಾರ ಪ್ರೀತಿ,ಗೌರವ ತೋರಿಸೋಣ .ನಮ್ಮ ಮಾತೃಭಾಷೆ ಬಗ್ಗೆ ಹೆಮ್ಮೆ ಪಡೋಣ .ನಮ್ಮ ಮಾತೃಭಾಷೆ ಉಳಿಸೋಣ ಮತ್ತು ಬೆಳೆಸೋಣ ! DISCLAIMER:The opinions expressed in this post are the personal views of the author. They do not necessarily reflect the views of Momspresso.com. Any omissions or errors are the author's and Momspresso does not assume any liability or responsibility for them.
Explanation: