ಗಾದೆಗಳನು ವಿಸ್ತರಿಸಿ ಬರೆಯಿರಿ
ಹಣಕ್ಕಿಂತ ಗುಣ ಮುಖ್ಯ
Answers
Answered by
0
ಹಣಕ್ಕಿಂತ ಗುಣ ಮುಖ್ಯ
ಚನ್ನವೀರ ಕಣವಿಯವರು ’ಗೆಳೆತನವೆ ಇಹಲೋಕಕಿರುವ ಅಮೃತ, ಅದನುಳಿದರೇನಿಹುದು-ಜೀವನ್ಮೃತ’ ಎಂದು ಗೆಳೆತನದ ಮಹತ್ವವನ್ನು ತಿಳಿಸಿದ್ದಾರೆ. ಆದರೆ ಎಂತಹವರ ಗೆಳೆತನ ಮಾಡಬೇಕೆಂಬುದನ್ನು ಆಲೋಚಿಸಿ ನಿರ್ಧರಿಸಬೇಕು. ಸರ್ವಜ್ಞ ಕವಿ ನಾವು ಎಂತಹವರ ಗೆಳೆತನ ಮಾಡಬೇಕು ಎಂಬುದನ್ನು ಕುರಿತು ’ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದುರ್ಜನರ ಕೂಡ ಒಡನಾಟ ಕೆಸರೊಳಗೆ ಮುಳ್ಳುತುಳಿದಂತೆ’ ಎಂದು ಹೇಳಿದ್ದಾನೆ.
ಜೀವನದ ಎಲ್ಲಾ ಸುಖ-ದುಃಖಗಳನ್ನು ಹಂಚಿಕೊಳ್ಳಲು ನಮಗೆ ಒಳ್ಳೆಯ ಗೆಳೆಯರು ಬೇಕು. ನಾವು ಸಂತೋಷವಾಗಿದ್ದಾಗ ಮಾತ್ರ ನಮ್ಮ ಜೊತೆ ಇದ್ದು, ನಮಗೆ ಕಷ್ಟ ಬಂದಾಗ ಹತ್ತಿರ ಸುಳಿಯದ ಗೆಳೆಯರು ನಿಜವಾದ ಗೆಳೆಯರಲ್ಲ. ಪ್ರಾಣ ಕೊಡಲೂ ಸಿದ್ಧರಾದ ಗೆಳೆಯರಾಗಬೇಕು. ನಮ್ಮ ತಪ್ಪುಗಳನ್ನು ತಿದ್ದಿ ನಡೆಸುವುದರ ಜೊತೆಗೆ, ಯಾವುದೇ ಕಷ್ಟ ಬಂದರೂ ಜೊತೆಯಲ್ಲಿದ್ದು ಧೈರ್ಯ ತುಂಬಬೇಕು. ಆದ್ದರಿಂದ ಗೆಳೆತನ ಮಾಡುವ ಮೊದಲು ಆ ವ್ಯಕ್ತಿಯ ಗುಣವನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ’ಅಲ್ಪರ ಸಂಗ; ಅಭಿಮಾನ ಭಂಗ’ ಎಂಬಂತಾಗುತ್ತದೆ. ಎಂಬುದು ಈ ಗಾದೆಯ ಆಶಯವಾಗಿದೆ
Be Brainly
Similar questions