ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
Answers
Explanation:
ವಿಸ್ತರ್ಣೆ ಆಗಿದ್ರೆ ಅದರ pattern:
- ಗಾದೆ ಬಗ್ಗೆ introduction.(Ex: ಗಾದೆ ಜನಪದರ ಅನುಭವದ ನುಡಿಯಾಗ್ಗಿದ್ದು ಜನಸಾಮಾನ್ಯರ ಬದುಕಿಗೆ ಮಾರ್ಗದರ್ಶಿಯಾಗಿವೆ.
- ಗಾದೆ ಅರ್ಥ (ಕುಂಬಾರ ತುಂಬಾ ಸಮಯದಿಂದ ಕಷ್ಟದಿಂದ ಮಣ್ಣು ಹದ ಮಾಡಿ ಮಡಿಕೆ ಮಾಡ್ತಾನೆ ದೊಣ್ಣೆ ಒಂದು ನಿಮಿಷದಲ್ಲಿ ಹೊಡೆದು ಹಾಕ್ಕುತ್ತೆ.
- ಉದಾಹರಣೆ Explanation.( ಒಬ್ಬ ವ್ಯೆಕ್ತಿ ಕಷ್ಟದಿಂದ ಹೆಸರು ಮಾಡಿರುತ್ತಾನೆ ಆದರೆ ಅವನ ಒಂದು ಸಣ್ಣ ತಪ್ಪು ಕೂಡ ಎಲ್ಲವನ್ನು ವ್ಯೆರ್ಥ ಮಾಡುತ್ತದೆ)
- Related ಗಾದೆಗಳು.(Sudden ಅಗಿ ನೆನಪಾಗುತ್ತಿಲ್ಲ)
- Conclusion. ( ನಾವು ಕಷ್ಟದಿಂದ ಪಡೆದು ದ್ದನ್ನು ಕಾಪಾಡಿಕೊಳ್ಳದಿದ್ದರೆ ನಮ್ಮ ಎಲ್ಲಾ ಶ್ರಮ ನೀರಲ್ಲಿ ಹೋಮ).
plz brailiest mark madi.
Answer:
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಇದೊಂದು ಅತ್ಯಂತ ಖ್ಯಾತಿಯನ್ನು ಪಡೆದಿರುವ ಗಾದೆಮಾತು. ಪ್ರತಿಯೊಂದು ಗಾದೆಗೂ ವಾಚ್ಯಾರ್ಥ ಹಾಗೂ ಗೂಡಾರ್ಥ ಇದೆ. ವಾfಯಾರ್ಥವೆಂದರೆ ಗಾದೆಯನ್ನು ಓದಿದಾಗ ತಿಳಿಯುವ ಅರ್ಥ ಹಾಗೂ ಗೂಡಾರ್ಥವೆಂದರೆ ಅದರೊಳಗಿನ ಸಾರವೆಂದು ಹೇಳಬಹುದು. ಈ ಗಾದೆಯನ್ನು ಓದಿದ ತಕ್ಷಣ ತಿಳಿಯುವುದೇನೆಂದರೆ ಕುಂಬಾರನಿಗೆ ಮಡಕೆಯನ್ನು ಮಾಡಲು ಸಾಕಷ್ಟು ಸಮಯ ಬೇಕು. ಆದರೆ ಅದೇ ಒಂದು ದೊಣ್ಣೆಯು ಕೇವಲ ಒಂದು ನಿಮಿಷದಲ್ಲಿ ಅದನ್ನು ಒಡೆದು ಬುಡುತ್ತದೆ. ಈ ಗಾದೆಯ ಗೂಡಾರ್ಥವೆಂದರೆ ಜನರ ಮನದಲ್ಲಿ ವಿಶ್ವಾಸವನ್ನು ಗಳಿಸಲು ಅಥವಾ ಏನಾದರೂ ಸಂಪಾದಿಸಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಆದರೆ ಒಬ್ಬರ ವಿಶ್ವಾಸ ಮುರಿಯಲು ಯಾವುದಾದರೂ ಒಂದು ಘಟನೆ ಸಾಕು. ಅಂದರೆ ಒಬ್ಬರ ದ್ರಷ್ಟಿಯ ಮುಂದೆ ಮೇಲೇರಲು ಬಹಳಷ್ಟು ಕಷ್ಟವಾಗುತ್ತದೆ. ಆದರೆ ಅವರ ದ್ರಷ್ಟಿಯ ಮುಂದೆ ಕೆಳ ಬೀಳಲು ಕೆಲ ಕ್ಷಣಗಳು ಸಾಕು. ಉದಾಹರಣೆಗೆ ಒಬ್ಬ ಹುಡುಗನಿದ್ದ ಆತನ ಹೆಸರು ಸಚಿನ್. ಆತನು ಉತ್ತಮ ಚಿತ್ರಗಾರನಾಗಿದ್ದ. ಇಡೀ ಶಾಲೆಯಲ್ಲಿ ಆತನ ಚಿತ್ರಗಳ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಹೀಗಿರಲು ಒಂದು ದಿನ ಅವನು ರೋಹಿತ್ ನ ಬಳಿ ಬಣ್ಣದ ಪೆನ್ಸಿಲುಗಳನ್ನು ನೋಡಿದ. ಅದು ತನ್ನ ಬಳಿ ಇದ್ದರೆ ಚೆನ್ನಾಗಿ ಚಿತ್ರ ಬಿಡಿಸಬಹುದು ಎಂದು ಆಲೋಚಿಸಿ ಅವನ ಬಳಿ ಇದ್ದ ಬಣ್ಣದ ಪೆನನ್ಸಿಲುಗಳನ್ನು ಕದಿಯುತ್ತಾನೆ ಹಾಗೂ ಈ ವಿಷಯ ಎಲ್ಲರಿಗೂ ತಿಳಿಯುತ್ತದೆ. ಅಧ್ಯಾಪಕರು ಅವನಿಗೆ ಶಿಕ್ಷೆಯನ್ನು ಕೊಡುತ್ತಾರೆ. ಸಚಿನ್ ತಂದೆಯ ಬಳಿ ಬಂದು ನಡೆದ ವಿಷಯವನ್ನು ಹೇಳುತ್ತಾನೆ. ಆಗ ತಂದೆಯು ಆತನ ಬಳಿ ನಿನ್ನ ಬಳಿಯಿರುವ ಉತ್ತಮವಾದ ಚಿತ್ರವನ್ನು ತರಲು ಹೇಳುತ್ತಾರೆ ಹಾಗೂ ಸಚಿನ್ ಅದನ್ನು ತಂದ ಬಳಿಕ ಆ ಸುಂದರವಾದ ಚಿತ್ರದ ಮೇಲೆ ಕಪ್ಪಿನ ಚುಕ್ಕೆಯನ್ನು ಹಾಕುತ್ತಾರೆ. ಆಗ ಮಗನು ಯಾಕೆ ಈ ರೀತಿಯಾಗಿ ಮಾಡಿದ್ದೀರಿ ಎಂದು ಕೇಳಲು ನಿನಗೆ ಈ ಇಡೀ ಚಿತ್ರ ಬಿಡಿಸಲು ಎಷ್ಟೊಂದು ಸಮಯ ಬೇಕಾಯಿತು. ಆದರೆ ನೀನು ಮಾಡಿದ ಒಂದು ಕಳ್ಳತನ ನಿನ್ನ ಜೀವನದಲ್ಲಿ ಇದೇ ರೀತಿ ಕಪ್ಪು ಚುಕ್ಕೆಯಾಗಿದೆ. ಕುಂಬಾಅರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಮಾತಿದೆ. ಅದೇ ರೀತಿ ನಿನ್ನ ಖ್ಯಾತಿಯು ಕಳ್ಳತನದಿಂದಾಗಿ ಮಸುಕಾಗಿ ಹೋಯಿತು ಎಂದಾಗ ಮಗನಿಗೆ ತನ್ನ ತಪ್ಪಿನ ಮನವರಿಕೆಯಾಯಿತು