India Languages, asked by penchalar8, 9 months ago

ಮಹಾತ್ಮ ಗಾಂಧೀಜಿ ಕುರಿತು ಕಿರು ಟಿಪ್ಪಣಿ ಬರೆಯಿರಿ​

Answers

Answered by Anonymous
16

❥ಮಹಾತ್ಮ ಗಾಂಧೀಜಿ ಯವರ ಪೂರ್ಣ ಹೆಸರು ಮೋಹನದಾಸ ಕರಮಚಂದ್ರ ಗಾಂಧಿ ಇವರು 2 ಅಕ್ಟೌಬರ 1869 ಗುಜರಾತ ರಾಜ್ಯದ ಪೋರ ಬಂದರಿನಲ್ಲಿ ಜನಿಸಿದರು ತಂದೆ ಕರಮಚಂದ್ರ ತಾಯಿ ಪುತಲೀಬಾಯಿ ಗಾಂಧಿ ಎಂಬುದು ಮನೆತನದ ಹೆಸರು ಪ್ರಾಥಮಿಕ ಶಿಕ್ಷಣವನ್ನು ಪೋರ ಬಂದರಿನಲ್ಲಿ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ರಾಜಕೋಟ ಮತ್ತು ಭಾವನಗರದಲ್ಲಿ ಕಲಿತರು.

ಇವರು ಶಾಲೆಯಲ್ಲಿ ಓದುತ್ತಿರುವಾಗ ಒಮ್ಮೆ ತಪಾಸಣಾಧಿಕಾರಿಗಳು ಪರೀಕ್ಷೆ ಮಾಡಲೆಂದು ಬಂದರು ಮಕ್ಕಳಿಗೆ ಇಂಗ್ಲೀಷನಲ್ಲಿ ಒಂದು ಉಕ್ತಲೇಖನ ಬರೆಸಿದರು ಅದರ ನಡುವೆ ಕಟ್ಲೆ ಎಂಬ ಪದ ಬಂದಿತು ಅಲ್ಲೇ ಇದ್ದ ತರಗತಿಯ ಉಪಾಧ್ಯಯರಿಗೆ ಗಾಂಧೀಜಿ ಆ ಪದದ ಕಾಗುಣಿತವನ್ನು ಸರಿಯಾಗಿ ಬರೆದಿಲ್ಲಿದ್ದು ಕಾಣೀಸಿತು ಅಷ್ಟು ಜಾಣನಾದ ವಿದ್ಯಾರ್ಥಿ ಬಂದು ಪದವನ್ನು ತಪ್ಪಾಗಿ ಬರೆಯಬಾರದು ಎಂಬ ಆತಂಕ ಅವರಿಗೆ ಉಂಟಾಯಿತು ಗಾಂಧೀಜಿನು ಹತ್ತಿರ ನಿಂತು ಸನ್ನೆ ಮಾಡಿ ಪಕ್ಕದ ವಿದ್ಯಾರ್ಥಿ ಬರೆಯುತ್ತಿರುವದನ್ನು ನೋಡಿ ತಿದ್ದಿಕೊಳ್ಳಲು ಸೂಚಿಸಿದರು ಆದರೆ ಗಾಂಧೀಜಿ ತಮ್ಮ ಪಕ್ಕದ ಹುಡುಗನ ಪುಸ್ತಕ ನೋಡಿ ನಕಲು ಮಾಡಲು ಒಪ್ಪಲಿಲ್ಲ ಹಾಗೆ ಮಾಡುವುದು ತುಂಬಾ ದೊಡ್ಡ ತಪ್ಪು ಎಂದು ಅವರಿಗೆ ಅನಿಸಿತ್ತು ಉಪಾಧ್ಯಾಯರಿಗೆ ಇವರ ವರ್ತನೆಯಿಂದ ಮೊದಲು ಪೆಟ್ಟಾಯಿತು ಆಮೇಲೆ ಅಭಿಮಾನವೆನಿಸಿತು. ಆದರೆ ಗಾಂಧೀಜಿಗೆ ಮಾತ್ರ ಅವರ ಬಗೆಗೆ ಗೌರವಯಳ್ಳಷ್ಟು ಕಡಿಮೆಯಾಗಲಿಲ್ಲ.

ಗಾಂಧೀಜಿ ತಾನು ನೋಡಿದ ಸತ್ಯ ಹರಿಶ್ಚಂದ್ರ ನಾಟಕ ಓದಿದ ಶ್ರವಣನ ಪಿತೃಭಕ್ತಿ ತಾಯಿಯಿಂದ ಕೇಳಿ ತಿಳಿದ ಪುರಾಣ ಪುಣ್ಯ ಕಥೆಗಳಿಂದ ತುಂಬಾ ಪ್ರಭಾವಿತರಾಗಿ ತಾನು ಸತ್ಸಸಂದರೂ ಆಗಿರಲು ಸಂಕಲ್ಪ ಮಾಡಿದರು. ಆ ಸಮಯದಲ್ಲಿ ಬಾಲ್ಯ ವಿವಾಹ ಪದ್ದತಿಯ ಪ್ರಕಾರ ಅವರ ಹಿರಿಯರು ಅವರಿಗೆ ಕಸ್ತೂರಬಾ ಅವರೊಡನೆ ವಿವಾಹ ಮಾಡಿದರು.

ಗಾಂಧೀಜಿ 1888 ರಲ್ಲಿ ಬ್ಯಾರಿಸ್ಟರ ವಿದ್ಯಾಭ್ಯಾಸಕ್ಕಾಗಿ ಇಂಗ್ಲೀಷಗೆ ಹೋಗಿ 10-6-91 ರಿಗೆ ಭ್ಯಾರಿಸ್ಟರ ಪದವಿ ಬಂದಿತು ನಂತರ ವಕೀಲ ವೃತ್ತಿ ಆರಂಭಿಸಿದರು. 1893ಕ್ಕೆ ದಕ್ಷಿಣ ಆಫ್ರೀಕಾಕ್ಕೆ ಗಾಂಧೀಜಿ ಬಂದರ,ಅಲ್ಲಿಯ ವರ್ಣನೀತಿಯ ಕಪ್ಪು- ಸುಖ ನೋಡಿಮೂಲ ಭಾರತೀಯರು ಅಲ್ಲಿ ಅನುಭವವಿದೆ ಯಾತನೆ ನೋಡಿ ನ್ಯಾಯ ದೊರಕಿಸಿ ಕೊಟ್ಟರು. ಗಾಂಧೀಜಯನ್ನು ಸುಭಾಷ ಚಂದ್ರ ಬೋಸರು ರಾಷ್ಟ್ತ್ರಪಿತ ಎಂದು ಕರೆದರೆ. ಸರ್ದಾರ ವಲ್ಲಭಭಾಯಿ ಪಟೇಲರು ಬಾಪು ಎಂದು ಕರೆದರು ಗಾಧೀಜಿಯವರ ಎರಡು ಮೂಲ ಮಂತ್ರಗಳು ಸತ್ಯ ಮತ್ತು ಅಹಿಂಸೆ ದಕ್ಷಿಣ ಆಫ್ರೀಕಾದಲ್ಲಿ ಗಾಂಧೀಜಿಯವರಿಗೆ ಕೈಸರ್-ಐ-ಹಿಂದ್ ಜುಲೋ ವಾಕ್ ಮೆಡಲ್ ಮೋಮರ್ ವಾಕ್ ಮೆಡಲ್ ಪ್ರಶಸ್ತಿಗಳು ಸಂಧವು ಸುಧಿರ್ಘವರ್ಷಗಳ ನಂತರ ಭಾರತಕ್ಕೆ 1915 ಮರಳಿದರು.

ಅಹಮದಾಬಾದಿನಲ್ಲಿ ಸತ್ಯಾಗ್ರಹ ಆಶ್ರಮವನ್ನು ಗಾಂಧೀಜಿ 25-5-1915ಕ್ಕೆ ಸ್ಥಾಪಿಸಿದರು. ಸತ್ಯಾಗ್ರಹ ಎಂಬ ಪದವನ್ನು ಮದನ್ ಲಾಲ್ ಗಾಂಧಿಜಿ ಸೂಚಿಸಿದರು. ಭಾರತವು ಸ್ವಾತಂತ್ರ್ಯದಲ್ಲಿರುವದನ್ನು ಕಂಡು ಕೊರಗತೊಡಗಿದರು. ಭಾರತವು ಸ್ವಾತಂತ್ರ್ಯ ಪಡೆಯುವದೆ ಮದ್ದು ಎಂದರಿತರು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಭಾರತೀಯ ರಾಜಕಾರಣಕ್ಕೆ ತಿರುಗಿದರು.

ಕಾಂಗ್ರೇಸ್ ಗಾಂಧೀಜಿಯ ನಾಯಕತ್ವದಲ್ಲಿ ಸುಮಾರು ಮೂರುದಶಕಗಳ ಕಾಲ ಪ್ರಬಲ ಹೋರಾಟ ನಡೆಸಿದರು 1920-22 ಅಸಹಕಾರ ಚಳುವಳಿ 1930 ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದರು. 1942ರಲ್ಲಿ ಬ್ರಿಟಿಷ್ರೆ ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ನಡೆಸಿದರು. ಇಂತಹ ಸಂದರ್ಭಗಳಲ್ಲ್ಳಿ ಸೆರೆಮನೆವಾಸ ಅನುಭವಿಸಿದರು.

ಯಂಗ್ ಇಂಡಿಯಾ ಹರಿಜನ ಪತ್ರಿಕೆಯನ್ನು ಪ್ರಾರಂಭಿಸಿದರು. ಇವರ ಕಾರ್ಯದರ್ಶಿಯಾಗಿ ಪ್ಯಾರೇಲಾಲ್ ನಯ್ಯರ್ ಆಗಿದ್ದರು ಗಾಂಧೀಜಿಯವರು ಗೈಡಟು ಹೆತ್ತಿ ಕೀ ಟು ಹೆಲ್ತ್ ಆರೋಗ್ಯ ಕುರಿತು ಪುಸ್ತಕ ಬರೆದರು ಇವರು ಮೂಲ ಶಿಕ್ಷಣ ಪದ್ದತಿಯನ್ನು ಹುಟ್ಟಿಹಾಕಿದರು. ದುಡಿಯುವ ಕೈಗಳಿಗೆ ಕೆಲಸ ನೀಡಲು ಕರೆಕೊಟ್ಟರು ಪ್ರತಿಯೊಬ್ಬರು ದುಡಿದು ತಿನ್ನುವ ಕರೆ ನೀಡಿದರು. ಗಾಂಧೀಜಿಯವರ ಆತ್ಮಕಥೆ ಹಿಂದ್ ಸ್ವರಾಜ್ (ಇಂಡಿಯನ್ ಹೋಮ) ಸಸ್ಯಹಾರಿ ಕುರಿತು ದಿ ಮಾರಲ್ ಬೇಸಿಸ್ ಆಫ್ ವೆಜಿಟೇಬಲ್ ಕೃತಿ ಇವರ ರಾಜಕೀಯ ಗರುಗಳು ಗೋಪಾಲಕೃಷ್ಣ ಗೋಖಲೆ ಆಗಿದ್ದರು. ಇವರನ್ನು ರವೀಂದ್ರನಾಥ ಠಾಕೊರರು ಮಹಾತ್ಮಾಗಾಂಧಿ ಎಂದು ಕರೆದರು. ಅಂದಿನಿಂದ ಇವರು ಮಾಹಾತ್ಮಾಗಾಂಧಿ ಎಂದು ಜಗತ್ ಪ್ರಸಿದ್ದಿ ಯಾದರು 1947 ಅಗಸ್ಟ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಆದರೆ ರಾಷ್ಟ್ತ್ರ ಭಾರತ ಮತ್ತು ಪಾಕಿಸ್ತಾನ ಇಬ್ಬಾಗವಾ ಯಿತು ಅದನ್ನು ವಿರೋಧಿ ಸಿದರು ಗಾಂದೀಜಿಯವರು ಹಿಂದೂ ಮುಸಲ್ಮಾನರ ನಡುವೆ ಸಾಮರಸ್ಪ ದವನ್ನುಂಟು ಮಾಡಲು ಶ್ರಮಿಸಿದರು. ಕೊನೆಗೆ ಶಾಂತಿ ಸ್ಥಾಪಿಸಲಾಯಿತು 1948 ಜನೆವರಿ 30 ರಂದು ಶುಕ್ರವಾರ ಪ್ರಾಥನಾ ಸಭೆಗೆ ಹೋಗುತ್ತಿದ್ದಾಗ ನಾಥೂ ರಾಂ ವಿನಾಯಕ ಗೋಡ್ಸೆ ಎದೆಗೆ ಗುಂಡು ಹಾರಿಸಿ ದನು. ಹೇರಾಮ್ ಎಂದು ಪ್ರಾಣಬಿಟ್ಟರು ಗಾಂಧೀಜಿ ಒಬ್ಬ ವ್ಯಕ್ತಿಯಾಗಿರದೆ ಒಂದು ಮಹಾನ್ ಶಕ್ತಿಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ತರಲು ಹಾಗೂ ರಾಮರಾಜ್ಯ ಸ್ಥಾಪಿಸಲು ತಮ್ಮ ತನು ಮನ ಧನಗಳನ್ನು ಅರ್ಪಿಸಿದರು. ಗಾಂಧೀಜಿಯ ಅಂತ್ಯ ಸಂಸ್ಕಾರ ದೆಹಲಿ ಮಹಾರಾಜ ಘಾಟದಲ್ಲಿ ಆಯಿತು. ಕಟನ್ ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಲಾಕನಲ್ಲಿ ಚಿತಾಭಸ್ಮ ಇರಿಸಿದರು. ನಂತರ ಅಲಹಾಬಾದಿನ ತ್ರೀವೇಣಿ ಸಂಗಮದಲ್ಲಿ ಚಿತಾಭಸ್ಮವನ್ನು ವಿಸರ್ಜಿಸಲಾಯಿತು. ಶರಾವತಿ ನದಿಗೆ ಮಹಾತ್ಮಾಗಾಂಧೀ ಜಲ ವಿದ್ಯುತ್ ಕೇಂದ್ರ ನಿರ್ಮಾಣಿಸಲಾಯಿತು. ನೆಲ್ಸನ್ ಮಂಡೆಲಾ ನೊಬೆಲ್ ಪ್ರಶಸ್ತಿ ವಿಜೇತ ದಕ್ಷಿಣ ಆಫ್ರೀಕಾದ ಗಾಂಧಿ ಎಂದು ಕರೆದರೆ ಕರ್ನಾಟಕ ಗಾಂಧಿ ಎಂದು ಹರ್ಡೆಕರ ಮಂಜಪ್ಪನವರಿಗೂ ಕರೆಯುತ್ತಾರೆ. ಆಧುನಿಕ ಗಾಂಧೀ ಎಂದು ಅಣ್ಣಾ ಹಜಾರೆಯವರನ್ನು ಸಹ ಕರೆಯುತ್ತಾರೆ.

ಒಮ್ಮೆ ನದಿ ಮೇಲೆ ದಾಟುತ್ತಿದ್ದಾಗ ಓರ್ವ ಅಜ್ಜಿ ಅರ್ದ ಬಟ್ಟೆ ಒಗೆದು ಅದನ್ನು ಒಣಗಿಸಿ ಅರ್ಧ ಬಟ್ಟೆ ಸುತ್ತಿಕೊಂಡು ಅರ್ಧ ಒಗೆಯುವದನ್ನು ಕಣ್ಣಾರೆ ಕಂಡು ಕೇವಲ ಒಂದೇ ಪಂಜೆನು ಮೇಲೆರುತ್ತೇನೆ ಒಂದೇ ಹೊತ್ತು ಊಟ ಮಾಡುತ್ತೇನೆ ಹಾಗೂ ಪ್ರತಿ ಸೋಮವಾರ ಮೌನ ಆಚರಣೆ ಮಾಡುತ್ತೇನೆ ಎಂದು ಪಣ ತೊಟ್ಟರು ಅದರಂತೆ ನಡೆದರು.

Similar questions