೧ ಉತ್ತಮ ಕೈಬರಹದ ಲಕ್ಷಣಗಳನ್ನು ಪಟ್ಟಿ ಮಾಡಿ
Answers
ಸ್ಫುಟವಾದ, ಸುಂದರವಾದ ಕೈ ಬರಹ, ತಾನೇ ಒಂದು ಶಿಫಾರಸು ಪತ್ರ. ಅದು ತನ್ನ ಬರಹಗಾರರ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಒಂದು ಸದಾಭಿಪ್ರಾಯ ಮೂಡಿಸುತ್ತದೆ. ತನ್ನ ಬರಹಗಾರರಿಗೆ ಅನೇಕ ಸದಾವಕಾಶ ಒದಗಿಸಿಕೊಡುತ್ತದೆ. ಅವರ ಶೈಕ್ಷಣಿಕ, ಔದ್ಯೋಗಿಕ ಮತ್ತಿತ್ತರ ಯಶಸ್ಸಿಗೆ ತನ್ನ ಪಾಲಿನ ಕೊಡುಗೆಯನ್ನು ನೀಡುತ್ತದೆ. ಅಲ್ಲದೆ, ಕೈಬರಹಕ್ಕೆ ತನ್ನದೇ ಆದ ಬಹಳಷ್ಟು ಇತರ ವೈಶಿಷ್ಠ್ಯಗಳು ಇವೆ. ಕಂಪ್ಯೂಟರ್ ಮತ್ತಿತ್ತರ ವಿದ್ಯುನ್ಮಾನ ಉಪಕರಣಗಳು ಕೈಬರಹವನ್ನು ಬದಿಗೆ ಸರಿಸಿದ್ದರೂ, ಅದರ ಸ್ಥಾನವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳಲು ಅವಕ್ಕೆ ಸಾಧ್ಯವಾಗಿಲ್ಲ. ಕೈಬರಹದ ಅನನ್ಯತೆಯೇ ಅಂತಹುದು.
ಕೈಬರಹದ ಮಹತ್ವ
ಕೈಬರಹವು ಬರೆದವರ ವ್ಯಕ್ತಿತ್ವದ ಬಿಂಬವೂ ಹೌದು. ಓರ್ವ ವ್ಯಕ್ತಿಯ ವಿಶೇಷ ಸ್ವಭಾವವನ್ನು ಅರಿಯಲು ಆತನ ಕೈಬರಹವನ್ನು ವಿಶ್ಲೇಷಿಸುವ ವಿಜ್ಞಾನವು ಅರಿಸ್ಟಾಟಲ್‌ನ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಇಂದಿಗೂ ಇಂತಹ ವಿಶ್ಲೇಷಣೆಯನ್ನು ಅಪರಾಧಗಳಿಗೆ ಸಂಬಂಧಪಟ್ಟ ತನಿಖೆಯಲ್ಲಿ, ವ್ಯಕ್ತಿಯ ಆರೋಗ್ಯದ ಬಗ್ಗೆ ಅರಿಯಲು ಇತ್ಯಾದಿ ಹಲವು ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. 'ಹಸ್ತಾಕ್ಷರ ಸಾಮುದ್ರಿಕ'ದಿಂದ ವ್ಯಕ್ತಿಯ ಸೃಜನಶೀಲತೆ, ಅಭಿವ್ಯಕ್ತಿಯ ರೀತಿ, ಕೆಲಸ ನಿರ್ವಹಿಸುವ ಪರಿ, ಸಂಘಟನಾ ಸಾಮರ್ಥ್ಯ- ಇವೇ ಮುಂತಾದ ಹಲವಾರು ಗುಣ ವಿಶೇಷಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ. ಆದುದರಿಂದಲೇ ಒಂದು ಕೆಲಸವನ್ನು ಮಾಡುವಾಗ ಅದರ ಸಣ್ಣ-ಪುಟ್ಟ ವಿವರಗಳಿಗೂ ವಿಶೇಷವಾದ ಗಮನವನ್ನು ನೀಡುವವರನ್ನು ಇಂಗ್ಲಿಷ್‌ನಲ್ಲಿ 'one who dots his i's and crosses his t's'ಎಂದು ಬಣ್ಣಿಸುವ ನುಡಿಗಟ್ಟಿದೆ. ಅಂದರೆ, ಇಂಗ್ಲಿಷ್‌ನಲ್ಲಿ ಯಾರು 'ಐ' ಅಕ್ಷರಕ್ಕೆ ಅಂದವಾದ ಬೊಟ್ಟನ್ನಿಟ್ಟು, 'ಟಿ' ಅಕ್ಷರಕ್ಕೆ ನಾಜೂಕಾಗಿ ಅಡ್ಡಗೆರೆ ಹಾಕಿ ಬರೆಯುತ್ತಾರೋ, ಅಂಥವರು ತಮ್ಮ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುವ ಸ್ವಭಾವದವರು ಎಂದು ವಿಶ್ಲೇಷಿಸಲಾಗುತ್ತದೆ.
ಈ ಕಾರಣದಿಂದಲೇ ಬಹುತೇಕ ಶೈಕ್ಷಣಿಕ ಸಂಸ್ಥೆಗಳು ಮತ್ತು ಇನ್ನಿತರ ಔದ್ಯೋಗಿಕ ಸಂಸ್ಥೆಗಳು, ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ ಅರ್ಜಿಯನ್ನು ತಮ್ಮ ಕೈ ಬರಹದಿಂದಲೇ ಬರೆಯತಕ್ಕದ್ದು ಎಂಬ ನಿಯಮವನ್ನು ವಿಧಿಸುತ್ತಾರೆ. ಆದುದರಿಂದ ಉತ್ತಮ ಕೈಬರಹವು ಉದ್ಯೋಗ ಗಳಿಸಲು ಸಹಾಯಕ.
ನಾವು ಕೆಲಸ ಮಾಡುವ ಸ್ಥಳದಲ್ಲಿಯೂ ನಮ್ಮ ಕೈಬರಹದ ಟಿಪ್ಪಣಿ, ಸಂದೇಶ ಇತ್ಯಾದಿಗಳನ್ನು ನಮ್ಮ ಮೇಲಾಧಿಕಾರಿಗಳು, ಸಹೋದ್ಯೋಗಿಗಳು ಅಥವಾ ಗ್ರಾಹಕರು ಸುಲಭವಾಗಿ ಓದಲು ಸಾಧ್ಯವಿಲ್ಲವಾದರೆ ಅದಯ ಅನೇಕ ಸಮಸ್ಯೆಗಳನ್ನು ತಂದೊಡ್ಡಬಹುದು. ಆದುದರಿಂದ ನಮ್ಮ ಕೆಲಸವನ್ನು ಚೆನ್ನಾಗಿ ನಿರ್ವಹಿಸಿ ಒಳ್ಳೆಯ ಹೆಸರನ್ನು ಸಂಪಾದಿಸಲೂ ಕೂಡ ನಮ್ಮ ಕೈಬರಹ ಉತ್ತಮವಿರಬೇಕಾಗುತ್ತದೆ
bro or sister ನೀವು ಕನ್ನಡದವರೇ ಹಾಗಿದ್ದರೆ ನನ್ನನು brainlist ಅಂತ mark ಮಾಡಿ......