Sociology, asked by nandeshakattimani671, 8 months ago

ಆಳಾಗಬಲ್ಲವನ ಅರಸನಾಗಬಲ್ಲನು ಗಾದೆ ಮಾತಿನ ವಿಸ್ತರಣೆ ​

Answers

Answered by suggulachandravarshi
6

Answer:

ಅರಸನು ಅರವತ್ತನಾಲ್ಕು ವಿದ್ಯೆಗಳಲ್ಲಿ ಪ್ರವೀಣಾಗಿರಬೇಕು. ಆಳಿನಂತೆ ಕೆಲಸ ವಿರ್ವಹಿಸುವುದು ಅದರಲ್ಲಿ ಒಂದು. ಒಂದು ರಾಜನು ಸಾಮಾನ್ಯ ಜನರ ಕಷ್ಟ ಸುಖವನ್ನು ಅರ್ಥೈಯಿಸಿಕೊಳ್ಳಬೇಕಾದರೆ ಅವರಲ್ಲಿ ಒಬ್ಬನಾಗಿ ಅವನಿಗೆ ಅನುಭವ ಇರಬೇಕು. ಕೆಲಸದವನಾಗಿದ್ದು ಕಷ್ಟಗಳನ್ನು ಕಂಡರೆ, ಅನುಭವಿಸಿದರೆ ಮಾತ್ರ ಅವನು ಒಳ್ಳೆಯ ರಾಜನಾಗಬಲ್ಲ. ಸುಖದ ಸುಪ್ಪತ್ತಿಗೆಯಲ್ಲೇ ಇದ್ದು, ಬಡವರಿಗೆ ಸಹಾಯ ಮಾಡಬಹುದು. ಆದರೆ, ಇದರಿಂದ ನಿಜವಾಗಿಯೂ ಅವರಿಗೆ ಒಳಿತಾಗುತ್ತದೆಯೇ ಇಲ್ಲವೇ ಎನ್ನುವುದು ಅರಸ ತನ್ನ ಅನುಭವಗಳಿಂದ ಮಾತ್ರ ಹೇಳಬಹುದು. ಜನಪ್ರಿಯ ರಾಜನಾಗಬೇಕಾದರೆ ಅವನು ಖಂಡಿತಾ ಮೊದಲು ಸಾಮಾನ್ಯ ಜನರಂತೆ ಜೀವನ ಮಾಡಬೇಕು,

ಅದೇ ಧ್ಯೇಯದ ಮೇಲೆ ಇಂಗ್ಲೆಂಡಿನ ರಾಜಮನೆತನದ ಪ್ರತಿಯೊಂದು ಮಗನು ತಮ್ಮ ಶಕ್ತಿಗೆ ಅನುಸಾರವವಾಗಿ ಸೈನ್ಯದಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಶಾಸನವಿದೆ, ಸೈನ್ಯದಲ್ಲೂ ಸಾಮಾನ್ಯ ಸೈನಿಕನಂತೆ ಇರಬೇಕು. ಅವನಿಗೆ ಬೇರೆಯಾವ ಸವಲತ್ತುಗಳಿರಬಾರದು ಎನ್ನುವುದು ವಿಶೇಷ ಅಂಶ.

ನಮ್ಮ ದೇಶದ ಏಣಿನ ರಾಜಕಾರಣಿಗಳಿಗೂ ಈ ವ್ಯವಸ್ಥೆ ಇದ್ದಾರೆ ನಮ್ಮ ದೇಶದ ವರಿಸ್ಥಿಥಿ ತುಂಬ ಬದಲಾಗಬಹುದು ಎನ್ನುವು ನನ್ನ ಅಭಿಪ್ರಾಯ.

Similar questions