Social Sciences, asked by praemkumarchavan1998, 7 months ago

ಗುಪ್ತರ ರಾಜ್ಯದಾನಿ ಯಾವುದು​

Answers

Answered by parvy3740
3

ಗುಪ್ತ ಸಾಮ್ರಾಜ್ಯ ಕ್ರಿ.ಶ. ೨೮೦ ರಿಂದ ೫೫೦ರವರೆಗೆ ಉತ್ತರ ಭಾರತವನ್ನು ಆವರಿಸಿದ್ದ ಒಂದು ಪ್ರಾಚೀನ ಸಾಮ್ರಾಜ್ಯ. ಇದನ್ನು ಶ್ರೀ ಗುಪ್ತ ಸ್ಥಾಪಿಸಿದನು. ಪಾಟಲಿಪುತ್ರ ಇದರ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯ ಸರಿಸುಮಾರು ಕ್ರಿ.ಶ. ೩೨೦ ರಿಂದ ೫೫೦ ರ ವರೆಗೆ ಉತ್ತುಂಗದಲ್ಲಿತ್ತು ಮತ್ತು ಭಾರತೀಯ ಉಪಖಂಡದ ಬಹಳಷ್ಟನ್ನು ಆವರಿಸಿತ್ತು. ಗುಪ್ತರ ನಾಯಕತ್ವದಡಿಯಲ್ಲಿ ಸೃಷ್ಟಿಯಾದ ಶಾಂತಿ ಮತ್ತು ಸಮೃದ್ಧಿಯು ವೈಜ್ಞಾನಿಕ ಮತ್ತು ಕಲಾತ್ಮಕ ಪ್ರಯತ್ನಗಳ ಅನ್ವೇಷಣೆಯನ್ನು ಸಾಧ್ಯವಾಗಿಸಿತು. ಈ ಅವಧಿಯನ್ನು ಭಾರತದ ಸುವರ್ಣ ಯುಗವೆಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಹಿಂದೂ ಸಂಸ್ಕೃತಿಯೆಂದು ಪರಿಚಿತವಿರುವ ಘಟಕಗಳನ್ನು ಸ್ಫಟಿಕೀಕರಿಸಿದ ವಿಜ್ಞಾನ, ತಂತ್ರಜ್ಞಾನ, ಕಲೆ, ತತ್ತ್ವಜಿಜ್ಞಾಸೆ, ಸಾಹಿತ್ಯ, ತರ್ಕಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಧರ್ಮ, ಮತ್ತು ತತ್ತ್ವಶಾಸ್ತ್ರದಲ್ಲಿನ ವ್ಯಾಪಕ ಆವಿಷ್ಕಾರಗಳು ಮತ್ತು ಪರಿಶೋಧನೆಗಳಿಂದ ಗುರುತಿಸಲ್ಪಟ್ಟಿತು. ಮೊದಲನೇ ಚಂದ್ರಗುಪ್ತ, ಸಮುದ್ರಗುಪ್ತ, ಮತ್ತು ಎರಡನೇ ಚಂದ್ರಗುಪ್ತ ಗುಪ್ತ ಸಾಮ್ರಾಜ್ಯದ ಅತ್ಯಂತ ಗಮನಾರ್ಹ ರಾಜರಾಗಿದ್ದರು. ಕ್ರಿ.ಶ. ೪ನೇ ಶತಮಾನದ ಸಂಸ್ಕೃತ ಕವಿ ಕಾಳಿದಾಸನು ಶಕರು, ಹುಣರು, ಕಾಂಬೋಜರು, ಪಶ್ಚಿಮ ಹಾಗೂ ಪೂರ್ವ ಆಮೂ ದರ್ಯಾ ಕಣಿವೆಗಳಲ್ಲಿ ಸ್ಥಿತವಾಗಿದ್ದ ಬುಡಕಟ್ಟುಗಳು, ಕಿನ್ನರರು, ಕಿರಾತರು ಇತ್ಯಾದಿ ರಾಜ್ಯಗಳು ಸೇರಿದಂತೆ ಭಾರತದ ಒಳಗೆ ಮತ್ತು ಹೊರಗೆ ಸುಮಾರು ಇಪ್ಪತ್ತೊಂದು ರಾಜ್ಯಗಳನ್ನು ವಶಪಡಿಸಿಕೊಂಡರು ಎಂದು ಗುಪ್ತರನ್ನು ಹೊಣೆಮಾಡುತ್ತಾನೆ.

ಎರಡನೇ ಚಂದ್ರಗುಪ್ತನ ಆಳ್ವಿಕೆಯಲ್ಲಿ ಆದ ದೊಡ್ಡ ಸಾಂಸ್ಕೃತಿಕ ಬೆಳವಣಿಗೆಗಳು ಈ ಕಾಲದ ಉನ್ನತ ಬಿಂದುಗಳಾಗಿವೆ. ಮಹಾಭಾರತ ಮತ್ತು ರಾಮಾಯಣದಂತಹ ಎಲ್ಲ ಸಾಹಿತ್ಯಿಕ ಮೂಲಗಳನ್ನು ಈ ಕಾಲದಲ್ಲಿ ಅಧಿಕೃತಗೊಳಿಸಲಾಯಿತು. ಗುಪ್ತರ ಕಾಲವು ಅನೇಕ ವಿದ್ವತ್ಪೂರ್ಣ ಕ್ಷೇತ್ರಗಳಲ್ಲಿ ಮಹಾನ್ ಪ್ರಗತಿಗಳನ್ನು ಮಾಡಿದ ಕಾಳಿದಾಸ, ಆರ್ಯಭಟ, ವರಾಹಮಿಹಿರ, ವಿಷ್ಣುಶರ್ಮ ಮತ್ತು ವಾತ್ಸಾಯನರಂತಹ ವಿದ್ವಾಂಸರನ್ನು ಎದುರಿಗೆ ತಂದಿತು. ಗುಪ್ತ ಯುಗದ ಅವಧಿಯಲ್ಲಿ ವಿಜ್ಞಾನ ಮತ್ತು ರಾಜಕೀಯ ಆಡಳಿತ ಹೊಸ ಎತ್ತರಗಳನ್ನು ಮುಟ್ಟಿತು. ಬಲವಾದ ವ್ಯಾಪಾರ ಸಂಬಂಧಗಳು ಕೂಡ ಪ್ರದೇಶವನ್ನು ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದವು ಮತ್ತು ಪ್ರದೇಶವನ್ನು ಹತ್ತಿರದ ರಾಜ್ಯಗಳು ಮತ್ತು ಬರ್ಮಾ, ಶ್ರೀಲಂಕಾ ಹಾಗೂ ಆಗ್ನೇಯ ಏಷ್ಯಾದಲ್ಲಿನ ಪ್ರದೇಶಗಳ ಮೇಲೆ ಪ್ರಭಾವ ಬೀರುವ ಕೇಂದ್ರ ಕಾರ್ಯಸ್ಥಾನವಾಗಿ ಸ್ಥಾಪಿಸಿತು. ಅತ್ಯಂತ ಮುಂಚಿನ ಲಭ್ಯ ಭಾರತೀಯ ಮಹಾಕಾವ್ಯಗಳನ್ನೂ ಸುಮಾರು ಈ ಕಾಲದಲ್ಲಿ ಲಿಖಿತ ಪಠ್ಯಗಳಾಗಿ ಬರೆದಿಡಲಾಯಿತು ಎಂದು ಭಾವಿಸಲಾಗಿದೆ.

ತಮ್ಮ ಸ್ವಂತ ಹಳೆಯ ಸಾಮಂತರಿಂದ ಉಂಟಾದ ಪ್ರಾಂತ್ಯ ಹಾಗೂ ಸಾಮ್ರಾಜ್ಯಶಾಹಿ ಅಧಿಕಾರದ ಗಣನೀಯ ನಷ್ಟ ಮತ್ತು ಮಧ್ಯ ಏಷ್ಯಾದ ಹೂಣರ ಧಾಳಿಗಳಿಂದ ಈ ಸಾಮ್ರಾಜ್ಯ ಕ್ರಮೇಣ ಕ್ಷೀಣಿಸಿತು. ೬ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಪತನದ ನಂತರ, ಭಾರತವು ಮತ್ತೆ ಅಸಂಖ್ಯಾತ ಪ್ರಾದೇಶಿಕ ರಾಜ್ಯಗಳಿಂದ ಆಳಲ್ಪಟ್ಟಿತು. ಸಾಮ್ರಾಜ್ಯದ ವಿಭಜನೆಯ ನಂತರ ಗುಪ್ತ ವಂಶದ ಒಂದು ಗೌಣ ಕುಲವು ಮಗಧವನ್ನು ಆಳುವುದನ್ನು ಮುಂದುವರಿಸಿತು. ಈ ಗುಪ್ತರನ್ನು ಅಂತಿಮವಾಗಿ ವರ್ಧನ ರಾಜನಾದ ಹರ್ಷನು ಹೊರಗಟ್ಟಿದನು, ಮತ್ತು ತನ್ನ ಸಾಮ್ರಾಜ್ಯವನ್ನು ೭ನೇ ಶತಮಾನದ ಪೂರ್ವಾರ್ಧದಲ್ಲಿ ಸ್ಥಾಪಿಸಿದನು.ಮೂಲ

ಮುಖ್ಯ ಲೇಖನ: ಗುಪ್ತ ರಾಜವಂಶದ ಮೂಲ

ಗುಪ್ತ ಸಾಮ್ರಾಜ್ಯ

ಕ್ರಿ.ಶ. 320 – ಕ್ರಿ.ಶ. 550

ChandraguptaIIOnHorse.jpg Head of a Buddha statue, India, Mathura, Gupta period, 4th-5th century AD, sandstone - Linden-Museum - Stuttgart, Germany - DSC03810.jpg

ಶ್ರೀ ಗುಪ್ತ (240 – 280)

ಘಟೋತ್ಕಚ (280 – 319)

ಮೊದಲನೇ ಚಂದ್ರಗುಪ್ತ (320 – 335)

ಕಚಗುಪ್ತ (335)

ಸಮುದ್ರಗುಪ್ತ (335 – 380)

ರಾಮಗುಪ್ತ  

ಎರಡನೇ ಚಂದ್ರಗುಪ್ತ (380 – 413/415)

ಮೊದಲನೇ ಕುಮಾರಗುಪ್ತ (415 – 455)

ಸ್ಕಂದಗುಪ್ತ (455 - 467)

ಪುರುಗುಪ್ತ (467 – 473)

ಎರಡನೇ ಕುಮಾರಗುಪ್ತ (473 - 476)

ಬುಧಗುಪ್ತ (476 – 495)

ನರಸಿಂಹಗುಪ್ತ (495 – ?)

(ಭಾನುಗುಪ್ತ) (ಸುಮಾರು 510)

ವೈನ್ಯಗುಪ್ತ (ಸುಮಾರು 507)

ಮೂರನೇ ಕುಮಾರಗುಪ್ತ (ಸುಮಾರು 530)

ವಿಷ್ಣುಗುಪ್ತ (540 - 550)

 IF HELPS, PLEASE MARK AS BRAINLEST AND SUPPORT ME..........

THANK YOU VERY MUCH

Similar questions