English, asked by mdoddaiahmdoddaiah39, 8 months ago

ದೇಶ ಸುತ್ತಿ ನೋಡು ಕೋಶ ಓದಿ ನೋಡು.​

Answers

Answered by akshu14319
38

Answer:

ಅಂದರೆ ನಾವು ಅಭ್ಯಾಸ ಮಧಿದ್ದಸ್ಟ್ಟ ನಮ್ ಜೀವನದಲ್ಲಿ ಮುಂದ್ದೆ ಬರುತ್ತೇವೆ.

Explanation:

ದೇಶ ಸುತ್ತು ಕೋಶ ಓದು ಎನ್ನುವುದು ನಮ್ಮ ನಾಡಿನ ಹಿರಿಯರು ರೂಪಿಸಿದ ನಾಣ್ಣುಡಿ. ಈ ಮಾತು ನಮ್ಮ ದೇಶದ ಭವ್ಯ ಪರಂಪರೆಯನ್ನು ಸೂಚಿಸುತ್ತದೆ. ಯಾಕೆಂದರೆ ದೇಶ ಸುತ್ತುವುದು ಎಂದರೆ ಪ್ರವಾಸ ಮಾಡುವುದು; ಕೋಶ ಓದು ಎಂದರೆ ಪುಸ್ತಕಗಳನ್ನು ಓದುವುದು.

ದೇಶ ಸುತ್ತಿ ಕೋಶ ಓದುವ ಬಗ್ಗೆ ನಮ್ಮ ಹಿರಿಯರು ತಮ್ಮ ಅನುಭವದಿಂದಲೇ ಬರೆದಿದ್ದಾರೆ. ಕೋಶ ಓದಿ ಅಪಾರ eನವನ್ನು ಸಂಪಾದಿಸಿದ ಶಂಕಾರಾಚಾರ್ಯರು ಭಾರತದ ನಾಲ್ಕೂ ಮೂಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಪೀಠಗಳನ್ನು ಸ್ಥಾಪಿಸಿದರು; ಹಾಗೆಯೇ ನಮ್ಮ ತಂದೆಯ ಊರಿನ ಒಬ್ಬರು ಸುಮಾರು ೬೦ ಸಲ ಕಾಶಿಗೆ ನಡೆದುಕೊಂಡೇ ಹೋಗಿ ಬಂದಿದ್ದರು; ಅವರ ಜೋಳಿಗೆಯಲ್ಲಿ ಯಾವಾಗಲೂ ಕನ್ನಡದ ಅತ್ಯುತ್ತಮ ಪುಸ್ತಕಗಳು ಇರುತ್ತಿದ್ದವು. ಹೀಗೆ ನಮ್ಮ ಪರಂಪರೆಯಲ್ಲಿ ದೇಶ ಸುತ್ತುವ ಮತ್ತು ಕೋಶ ಓದುವ ಕಾಯಕ ಎಂದಿನಿಂದಲೂ ನಡೆದುಕೊಂಡು ಬಂದಿದೆ.

ಇಂದು ಪ್ರವಾಸ ಮಾಡುವುದು ಒಂದು ದೊಡ್ಡ ಹವ್ಯಾಸವಾಗಿದೆ.. ವಿದೇಶೀಯರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಬರುತ್ತಿದ್ದಾರೆ. ಭಾರತೀಯರೂ ಈಗ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹೀಗೆ ಪ್ರವಾಸ ಮಾಡುವುದು ಅಂದರೆ ದೇಶ ಸುತ್ತುವುದರಿಂದ ನಮ್ಮ ಅನುಭವ ಹೆಚ್ಚುತ್ತದೆ, ತಿಳಿವಳಿಕೆ ವಿಸ್ತರಿಸುತ್ತದೆ. ಅದರಲ್ಲೂ ಯುವಕರು ಹೆಚ್ಚೆಚ್ಚು ದೇಶ ಸುತ್ತಿದರೆ ಅವರ ವೃತ್ತಿಜೀವನಕ್ಕೆ ತುಂಬಾ ಅನುಕೂಲ.

ಹಾಗೆಯೇ ಕೋಶ ಓದುವುದೂ ನಮಗೆ ತುಂಬಾ ಅಗತ್ಯವಾದ ಹವ್ಯಾಸ. ಕೋಶ ಎಂದರೆ ಕೇವಲ ನಿಘಂಟುಗಳಲ್ಲ; ಬಗೆಬಗೆಯ ವಿಷಯಗಳ ಮೇಲೆ ಬಂದಿರುವ ಹಲವು ಪುಸ್ತಕಗಳನ್ನು ನಾವು ಓದಬೇಕು. ನಮಗೆ ಆಸಕ್ತಿ ಇರುವ ಪುಸ್ತಕಗಳನ್ನು ಓದುವುದು ಮಾತ್ರವಲ್ಲ; ಜಗತ್ತಿನಲ್ಲಿ ನಡೆಯುವ ಬೇರೆ ಬೇರೆ ವಿದ್ಯಮಾನಗಳ ಕುರಿತ ಹೊಸ ಪುಸ್ತಕಗಳನ್ನೂ ಹುಡುಕಿ ಓದಬೇಕು. ಪುಸ್ತಕಗಳು ಮಾತ್ರವಲ್ಲ, ಮ್ಯಾಗಜಿನ್‌ಗಳು, ವೃತ್ತಪತ್ರಿಕೆಗಳು, ಕಾದಂಬರಿಗಳು, ಕಥಾಪುಸ್ತಕಗಳು, – ಎಲ್ಲವನ್ನೂ ನಾವು ಓದಿದರೆ ನಾವು ಈ ಜಗತ್ತು ಹೇಗಿತ್ತು, ಈಗ ಹೇಗಾಗಿದೆ ಎಂಬುದನ್ನು ವಾಸ್ತವವಾಗಿ ಕಲ್ಪಿಸಿಕೊಳ್ಳಬಹುದು.

ಕೇವಲ ಪುಸ್ತಕಗಳನ್ನೇ ಓದಿದರೂ ದೇಶ ಸುತ್ತಿದ ಅನುಭವ ಆಗುತ್ತದೆ ಎಂಬುದು ಸ್ವಲ್ಪ ನಿಜ. ಆದರೆ ಪುಸ್ತಕ ಓದುವ ಹಾಗೂ ದೇಶ ಸುತ್ತುವ ಕೆಲಸಗಳನ್ನು ನಾವು ಯಾವಾಗಲೂ ಮಾಡುತ್ತಿರಬೇಕು. ಆಗಲೇ ನಾವು ನಮ್ಮ ಬದುಕನ್ನು ಸುಂದರವಾಗಿ ಇಟ್ಟುಕೊಳ್ಳಬಹುದು.

Answered by lingarajue3gmailcom
21

Explanation:

ಗಾದೆಗಳು ಜಾನಪದ ಜೀವನದ ನುಡಿಮುತ್ತುಗಳು ಆಗಿವೆ

ಈ ಜೀವನದ ಮೌಲ್ಯವನ್ನು ಹೆಚ್ಚಿಸುತ್ತವೆ

ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಎಂಬ ಮಾಹಿತಿಯೂ ಇದೆ ಏನೆಂದರೆ ದೇಶ ಸುತ್ತು ನೋಡು ಕೋಶ ಓದಿ ನೋಡು ಎಂಬ ಗಾದೆ ಇದರ ಗಾದೆಗಳು 100 ಮಾತುಗಳನ್ನು ತಿಳಿಸುವ ಒಂದು ಸಣ್ಣ ವಿಸ್ತರಣೆ ಮುಖ್ಯಪಾತ್ರವೊಂದರಲ್ಲಿ ಒಂದು ದೇಶ ಸುತ್ತಿ ನೋಡು ಕೋಶ ಓದಿ ನೋಡು

ದೇಶ ಸುತ್ತು ಹೋದರ ಅರ್ಥ ಆತನಿಗೆ ಲೋಕಜ್ಞಾನ ಬಹಳ ಮುಖ್ಯ ಆದಕಾರಣ ಇಡೀ ಪ್ರಪಂಚವೇ ದ್ಯಂತ ಸುತ್ತಿ ಅದರಲ್ಲಿ ಪ್ರಪಂಚದಲ್ಲಿ ಅಡಗಿರುವ ವಿಷಯವನ್ನು ತಿಳಿಯುವುದರ ಮೂಲಕ ಅಥವಾ ದೇಶದ ದೇಶದಲ್ಲಿರುವ ವಿಚಾರಗಳನ್ನು ತಿಳಿಯುವ ಮೂಲಕ ಅದರ ಆಚಾರ-ವಿಚಾರ ನೀತಿ ಪದ್ಧತಿ ಇವೆಲ್ಲವನ್ನು ತಿಳಿಯಬಹುದು ದೇಶ ಸುತ್ತುವುದು ಬಹಳ ಅಸಾಧ್ಯ ಮಾತು ಆದರೆ ಅದನ್ನು ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಪುಸ್ತಕಗಳನ್ನು ಓದುವ ಮೂಲಕ ಅದರಲ್ಲಿ ಅಡಗಿರುವ ಅನೇಕ ವಿಷಯಗಳನ್ನು ತಿಳಿದು ನಮಗೆ ಲೋಕಜ್ಞಾನ ತಿಳಿಯಬಹುದು ಹೇಗೆ ಸ್ವಾಮಿ ವಿವೇಕಾನಂದ ಅವರ ಜೀವನವನ್ನು ಇಡೀ ದೇಶವನ್ನೆಲ್ಲಾ ಸುದ್ದಿಯಾಗಿ ಹೇಳಿದ್ದಾರೆ ಅದೇ ರೀತಿ ಕೋಶ ಓದು ಎಂಬುದರ ಅರ್ಥ ಇಂಗ್ಲಿಷ್ನಲ್ಲಿ ಹೇಳುವುದಾದರೆ today is a reader but tomorrow you will be a leader

ಇಂದು ಓದುವ ವ್ಯಕ್ತಿಯಾಗಿರಬಹುದು ಅಥವಾ ತಿಳಿಸುವ ವ್ಯಕ್ತಿಯಾಗಿರಬಹುದು ಆದರೆ ಮುಂದೊಂದು ದಿನ ಈ ಜಗತ್ತನ್ನು ಹಾಡುವ ವ್ಯಕ್ತಿಯಾಗಬಹುದು ಹಾಕಿರುವ ಇನ್ನೊಂದು ಅರ್ಥವೇನೆಂದರೆ

ಒಂದು ಉತ್ತಮ ಪುಸ್ತಕ 100 ಸ್ನೇಹಿತರಿಗೆ ಸಮಾನ ಆದರೆ ಒಬ್ಬ ಹುತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ ಇದನ್ನು ಇಂಗ್ಲಿಷ್ನಲ್ಲಿ ಅಬ್ದುಲ್ ಕಲಾಂರವರು ಹೇಳಿರುವುದೇನೆಂದರೆ one best book is equal to hundred good friends but one good friend is equal to a library

ಹೀಗೆ ಮುಂದೆ ಹೋಗುತ್ತಿದ್ದರೆ ಈ ಗಾದೆಗಳು ಅದರ ಮಾತುಗಳನ್ನು ಬಿಚ್ಚಿಡುತ್ತದೆ ಇರುತ್ತದೆ ಆದರೆ ಇವುಗಳನ್ನು ವರ್ಣಿಸಲು ಅದರಲ್ಲಿಯೂ ದೇಶ ಸುತ್ತು ಕೋಶ ಓದು ಗಾದೆ ಮುಗಿಯಲಾರದ ಒಂದು ಪದ ಅಥವಾ ಸಾಲು ಎಂಬ ಬಹುದು ಆದರೆ ಪ್ರಪಂಚದ ಪುಸ್ತಕಗಳಲ್ಲಿ ಅಡಗಿರುವ ವಿಷಯವನ್ನು ನೇರವಾಗಿ ಕಣ್ಣಿನ ದೃಷ್ಟಿಯಿಂದ ನೋಡಿದ ಅನುಭವ ಪಡೆಯುವುದರ ಮೂಲಕ ನಾವು ಈ ಗಾದೆ ವಿಸ್ತರಣೆ ಸಣ್ಣದಾಗಿ ಹೇಳಬಹುದು ದೇಶ ಸುತ್ತಿ ಕೋಶ ಓದು ಆದರೆ ದೇಶವನ್ನು ಸುತ್ತುವುದು ಬಹಳ ನಾವು ತಿಳಿಯಬೇಕು ಆದರೆ ಪುಸ್ತಕದಲ್ಲಿ ವಿಷಯಗಳು ನಮ್ಮ ದೇಶದ ಬಗ್ಗೆ ಹೀಗೆ ಮುಂದೆ ನಡೆ ಮುಂದೆ ನಡೆಯುವುದು ಎಂಬುದರ ಬಗ್ಗೆ ಕೂಡ ತಿಳಿಯಬಹುದು

ನನ್ನ ಅಭಿಪ್ರಾಯದ ಪ್ರಕಾರ ನಿಮಗೆ ಉತ್ತರ ಸರಿಯಾಗಿರಬಹುದು

mark me as a brand list brain lis

Similar questions