India Languages, asked by BossDJ, 6 months ago

ಸ್ವಚ್ಛ ಭಾರತ ಪ್ರಬಂಧ ​

Answers

Answered by Anonymous
6

ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ.ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ [ನರೇಂದ್ರ ಮೋದಿ|ನರೇಂದ್ರ ಮೋದಿಯವರು] ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು

ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿ­ಯಂದು ದೇಶದ ಪ್ರಧಾನಿ ನರೇಂದ್ರ ಮೋದಿ­ಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛ ಭಾರತ ಅಭಿಯಾನ­ಕ್ಕೆ ಚಾಲನೆ­ ನೀಡುವ ಮೂಲಕ ದೇಶದ ಜನ­ರಲ್ಲಿ ರೋಮಾಂಚನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊಡೆದಿವೆ.

ಮೋದಿಯವರು ಸಾರ್ವ­ಜನಿಕರಿಗೆ ತಮ್ಮ ಪ್ರದೇಶ­­ಗಳನ್ನು ಸ್ವಚ್ಛವಾಗಿ­ಟ್ಟುಕೊಳ್ಳಲು ಕರೆ ಜೊತೆ ಅಂಬಾನಿ, ಸಚಿನ್‌ ತೆಂಡೂಲ್ಕರ್‌­ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶ­ವನ್ನು ಸ್ವಚ್ಛ­ಗೊಳಿ­ಸುವುದು ಹಾಗೂ ಇನ್ನಿತ­ರ­ರಿಗೂ ಅದೇ ರೀತಿ ಮಾಡು­ವಂತೆ ಕರೆ ನೀಡುವ ಮೂಲಕ ಅಭಿ­ಯಾನಕ್ಕೆ ಕೈಜೋಡಿಸಲು ಆಹ್ವಾನಿ­ಸಿದ್ದು, ಇದಕ್ಕೆ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನವು ಇನ್ನಷ್ಟು ಚುರುಕುಗೊಂಡಿದೆ.

ಹೆಚ್ಚಿನವರು ಸಾರ್ವ­ಜನಿಕ­­ವಾಗಿಯೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತ­ಪಡಿ­ಸುತ್ತಿದ್ದಾರೆ. ಸ್ವತಃ ಪ್ರಧಾನಿ­ಯವರ ಒತ್ತಾಸೆ, ಇತರ ಪ್ರಮುಖರ ಹಾಗೂ ಸರ್ಕಾ­ರೇತರ ಸಂಸ್ಥೆ­ಗಳ ಬೆಂಬಲ, ಸಾರ್ವಜನಿಕರ ಸಹ­ಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛ­ತೆಯ ವಿಷಯದ ಕುರಿತ ಪ್ರಚಾರ.

ಇದು ನಿಮಗೆ ಸಹಾಯವಾಗಬಹುದು.

Answered by yuvikamd18
1

Answer:

ಸ್ವಚ ಭಾರತ ಅಭಿಯಾನ

ಸ್ವಚ ಭಾರತ ಅಭಿಯಾನವು ಒಂದು ಬೃಹತ್ ಸಮೂಹ ಚಳುವಳಿ ಆಗಿದೆ ಇದು ೨೦೧೯ ನೇ ಇಸವಿಯ ಹೊತ್ತಿಗೆ ಭಾರತವನ್ನು ಸ್ವಚ ಭಾರತವನ್ನಾಗಿಸುವ ಗುರಿಹೊಂದಿದೆ.ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಯಾವಾಗಲು ಸ್ವಚತೆಯ ಬಗ್ಗೆ ಒತ್ತು ನೀಡುತ್ತಿದರು. ಸ್ವಚತೆ ಇಂದ ಜೀವನದಲ್ಲಿ ಅರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎಂದು ನುಡಿಯುತ್ತಿದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು ೨೦೧೪ ರ ಅಕ್ಟೋಬರ್ ೨ ರಂದು ಸ್ವಚ ಭಾರತ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿತು.ಈ ಧ್ಯೇಯವು ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿರುತ್ತದೆ. ನಗರದಲ್ಲಿ ನಗರಾಭಿವೃದ್ಧಿ ಸಚಿವಾಲಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಕಾರ್ಯ ಗತಗೊಳಿಸುವ ಹೊಣೆಹೊತ್ತಿದೆ

ನಗರ ಪ್ರದೇಶದ ಸ್ವಚ್ಛ ಭಾರತ ಅಭಿಯಾನ :

ಪ್ರತಿ ಪಟ್ಟಣವನ್ನು ಗಮನದಲ್ಲಿ ಇಟ್ಟುಕೊಂಡು 2.5 ಲಕ್ಷ ಸಾಮೂಹಿಕ ಶೌಚಾಲಯಗಳು , 2.6 ಲಕ್ಷ ಸಾರ್ವಜನಿಕ ಶೌಚಾಲಯಗಳು ಹಾಗೂ ಘನ ತ್ಯಾಜ್ಯ ನಿರ್ವಹಣೆ ಸೌಲಭ್ಯ , 1.04 ಕೋಟಿ ಕುಟುಂಬಗಳಿಗೆ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ , ಸಮುದಾಯ ಶೌಚಾಲಯಗಳನ್ನು ಪ್ರತಿಮನೆಯಲ್ಲಿ ನಿರ್ಮಿಸಲು ಕಷ್ಟ ವಾಗಿರುವಂತಹ ವಸತಿ ಪ್ರದೇಶಗಳಲ್ಲಿ ನಿರ್ಮಿಸಲಾಗುವುದು.ಸಾರ್ವಜನಿಕ ಶೌಚಾಲಯಗಳನ್ನು ಸಹ ಪ್ರವಾಸಿ ಸ್ಥಳಗಳು, ಮಾರುಕಟ್ಟೆಗಳು , ಬಸ್ ನಿಲ್ದಾಣಗಳಲ್ಲಿ , ರೈಲು ನಿಲ್ದಾಣಗಳು , ಇತ್ಯಾದಿ ಮಾಹಿತಿ ಗೊತ್ತುಪಡಿಸಿದ ಸ್ಥಳಗಳಲ್ಲಿ ನಿರ್ಮಿಸಲಾಗುವುದು. ಸುಮಾರು 4.401 ಪಟ್ಟಣಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ನಡೆಸುವ ಯೋಜನೆ ಆಗಿದೆ. ಸುಮಾರು ೬೨,009 ಕೋಟಿ ರೂಪಯಿ ವೆಚ್ಹ ಆಗುವ ಸಾಧ್ಯತೆ ಇದೆ.ಕೇಂದ್ರವು ರೂ 14.623 ಕೋಟಿ ಒದಗಿಸುವ ಸಾಧ್ಯತೆ ಇದೆ.ರೂ 14.623 ಕೋಟಿ ಕೇಂದ್ರದ ಪಾಲಿನಲ್ಲಿ ರೂ 7.366 ಕೋಟಿ ಯನ್ನು,ಭಾರಿ ತ್ಯಾಜ್ಯ ವಿಲೇವಾರಿಗೆ, ಮನೆಯ ಶೌಚಾಲಯಗಳಿಗೆ ರೂ 4.165 ಕೋಟಿ, ಸಾರ್ವಜನಿಕ ಜಾಗೃತಿಗೆ1,828 ಕೋಟಿ ಮತ್ತು ಸಮುದಾಯ ಶೌಚಾಲಯಗಳಿಗೆ ರೂ 655 ಕೋಟಿ .ಖರ್ಚು ಮಾಡಲಾಗುವುದು. ಈ ಯೊಜನೆಯು ಬಯಲು ಮಲವಿಸರ್ಜನೆಯನ್ನು ನಿಲ್ಲಿಸುವುದು, ಅನಾರೋಗ್ಯಕರ ಶೌಚಾಲಯಗಳ ಪರಿವರ್ತನೆ ಒಳಗೊಂಡಿದೆ.ಮಲಹೊರುವ ಪದ್ಧತಿ ಯನಿರ್ಮೂಲನೆ, ಘನ ತ್ಯಾಜ್ಯ ನಿರ್ವಹನೆ ಮತ್ತು ಆರೋಗ್ಯಕರ ನೈರ್ಮಲ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಒಂದು ವರ್ತನೆಯ ಬದಲಾವಣೆ ತರುವ ಉದ್ದೇಶ ಹೊಂದಿದೆ.

ಗ್ರಾಮೀಣ ಪ್ರದೇಶದ ಸ್ವಚ್ಛ ಭಾರತ ಅಭಿಯಾನ :

ನಿರ್ಮಲ ಭಾರತ ಅಭಿಯಾನವನ್ನು ಸ್ವಚ ಭಾರತ ಅಭಿಯಾನ ( ಗ್ರಾಮೀಣ ) ಎಂದು ಮರುರೂಪು ಮಾಡಲಾಗಿದೆ . ಐದು ವರ್ಷಗಳಲ್ಲಿ ಭಾರತವನ್ನು ಒಂದು ಬಯಲು ಮಲವಿಸರ್ಜನೆ ರಹಿತ ದೇಶವನ್ನಾಗಿ ಮಾಡಲು ಉದ್ದೇಶಿಸಿದೆ. ಒಂದು ಲಕ್ಷ ಮೂವತ್ತು ನಾಲ್ಕು ಸಾವಿರ ಕೋಟಿ ರೂಪಾಯಿ ಅನ್ನು ದೇಶದಲ್ಲಿ ಸುಮಾರು 11 ಕೋಟಿ 11 ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಖರ್ಚು ಮಾಡಲಾಗುವುದು . ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ತ್ಯಾಜ್ಯವನ್ನು ಜೈವಿಕ ಗೊಬ್ಬರ ಮತ್ತು ಶಕ್ತಿಯ ವಿವಿಧ ರೂಪಗಳ ರೂಪಗಳಲ್ಲಿ ಪರಿವರ್ತಿಸಲು ಯೋಜಿಲಾಗಿದೆ. ದೇಶದಲ್ಲಿನ ಪ್ರತಿಯೊಂದು ಗ್ರಾಮ ಪಂಚಾಯತಿ, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಗಳಲ್ಲಿ ತ್ವರಿತ ಗತಿ ಇಂದ ನಡೆಸಲು ಉದ್ದೆಶಿಸಿದೆ.ಈ ಪ್ರಯತ್ನದಲ್ಲಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಹೆಚ್ಚಿನ ವಿಭಾಗಗಳಲ್ಲಿ ಸೆಳೆದುಕೊಂಡು ನಡೆಸುವ ಆಲೋಚನೆ ಮಾಡಲಾಗಿದೆ .

ಕಾರ್ಯಾಚರಣೆಯ ಭಾಗವಾಗಿ ಗ್ರಾಮೀಣ ಮನೆಗಳ ಶೌಚಾಲಯ ಘಟಕದ ವೆಚ್ಚ ನಿಬಂಧನೆಯನ್ನು ರೂ 12,000 ಗೆ ರೂ 10,000 ರಿಂದ ಹೆಚ್ಚಿಸಲಾಗಿದೆ ಇದರಿಂದ ನೀರಿನ ಲಭ್ಯತೆಯನ್ನು ಒದಗಿಸಲು ಅನುಕೂಲವಾಗುತ್ತದೆ.ಇಂತಹ ಶೌಚಾಲಯಗಳ ನಿರ್ಮಾಣದಲ್ಲಿ ಕೇಂದ್ರ ಪಾಲು ರೂ 9,೦೦೦ ಮತ್ತು ರಾಜ್ಯದ ಪಾಲು ರೂ 3,000 ಆಗಿರುತ್ತದೆ.ಈಶಾನ್ಯ ರಾಜ್ಯಗಳು , ಜಮ್ಮು ಮತ್ತು ಕಾಶ್ಮೀರ ಮತ್ತು ವಿಶೇಷ ಪ್ರದೇಶ ಗಳ ಅಡಿಯಲ್ಲಿ ಬರುವ ರಾಜ್ಯಗಳಿಗೆ ಕೇಂದ್ರದ ಪಾಲು ರೂ.10,800 ಮತ್ತು ರಾಜ್ಯದ ಪಾಲು ರೂ 1,200 ಆಗಿರುತ್ತದೆ ಅಲ್ಲದೆ ಇತರ ಮೂಲಗಳಿಂದ ಹೆಚ್ಚುವರಿ ಕೊಡುಗೆಗಳ ಅನುಮತಿಇರುತ್ತದೆ.

Explanation:

please mark me as brainliest ☺️

Similar questions