India Languages, asked by Ruchitha98, 6 months ago

ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದ ಸಾರಾ೦ಶ​

Answers

Answered by Anonymous
10

Answer:

ಈ ಚರಣದಲ್ಲಿ ಕವಿ ಕಾಲದ ಗತಿಯನ್ನು ವೇಗವನ್ನು ಚಿತ್ರಿಸಿದ್ದಾರೆ. ಕಾಲದ ಹಕ್ಕಿಯು ಅಗಣಿತ ಇರುಳುಗಳನ್ನು ಕಳೆದು, ಅಪರಿಮಿತ ದಿನಗಳನ್ನು ಬೆಳಗುತ್ತಾ ಸುತ್ತಮುತ್ತ, ಮೇಲೆ-ಕೆಳಗೆ, ಹೀಗೆ ವಿಶ್ವವ್ಯಾಪಿಯೂ ಅನಂತವೂ ಆಗಿ (ಗಾವುದ ಗಾವುದ) ಮುಂದೆ ಮುಂದೆ ಸಾಗುತ್ತಿರುತ್ತದೆ. ಯಾರ, ಯಾವ ನಿಯಂತ್ರಣಕ್ಕೂ ಸಿಕ್ಕದೆ ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಕಾಲ ಸಾಗಿರುತ್ತದೆ. ಹೀಗೆಯೇ ದಿನರಾತ್ರಿಗಳು ಕಳೆಯುತ್ತವೆ. ಕಾಲದ ಹಕ್ಕಿ ನಿರಂತರವಾಗಿ ಹಾರುತ್ತಿರುತ್ತದೆ.

ಈ ಚರಣದಲ್ಲಿ ಕವಿ ಹಕ್ಕಿಯ ಕತ್ತಲು (ಕರಿ) ಬೆಳಕು(ನೆರೆ) ಎಂಬ ಪುಚ್ಚ(ಹಕ್ಕಿಯ ಹಿಂಬದಿಯಲ್ಲಿರುವ ಬಾಲದಂತ ಗರಿಗಳ ಗುಚ್ಚ)ವನ್ನು ಹೊಂದಿದೆ. ವರ್ತಮಾನವೆಂಬ ಬಿಳಿಬಣ್ಣದ, ಹೊಳಪಿನ ಗರಿಯು ಕಾಲದ ಹಕ್ಕಿಯಲ್ಲಿ ಗರಿಗರಿಯಾಗಿ ಕಂಗೊಳಿಸುತ್ತಿದೆ! ವರ್ತಮಾನವಾದ್ದರಿಂದ ಅದು ಬೆಳಕಿನಲ್ಲಿದೆ. ಎಂದೇ ಬಿಳಿ-ಹೊಳೆ ಬಣ್ಣ. ವರ್ತಮಾನಕ್ಕೆ ‘ಹೊಳೆ’ವ ಬಣ್ಣ. ವರ್ತಮಾನವು, ಹರಿಯುತ್ತಿರುವ (ಕಾಲದ) ಹೊಳೆಯೂ ಹೌದು. ಕೆನ್ನನಬಣ್ಣದ ಸೂರ್ಯಾಸ್ತ ಮತ್ತು ಹೊನ್ನಿನ ಬಣ್ಣದ ಸೂರ್ಯೋದಯ ಅದರ ಎರಡು ರೆಕ್ಕೆಗಳಾಗಿವೆ. ಇಲ್ಲಿ ಕಾಲದ ಹಕ್ಕಿಯ ಅನಂತ-ವಿಶಾಲ ರೂಪದ ಭವ್ಯತೆ ವ್ಯಕ್ತವಾಗಿದೆ.

ಭಾವಾರ್ಥ: ಕಾಲದ ಹಕ್ಕಿಯ ಬಣ್ಣ ನೀಲಮೇಘಮಂಡಲಸದೃಶವಾದುದು. ನೀಲಿ ಅಂದರೆ ವೈಶಾಲ್ಯ. ನೀಲಮೇಘಮಂಡಲದಂತೆ ಸಮಬಣ್ಣವೂ ಹೌದು. ಕಾಲದ ದೃಷ್ಟಿ ತರತಮರಹಿತ. ಕಾಲದ ಹಕ್ಕಿಯು ನೀಲಮೇಘಮಂಡಲದಂತೆ ಅಗಾಧ-ವ್ಯಾಪಕ-ವಿಶಾಲ. ಎಷ್ಟೆಂದರೆ, ಆಕಾಶಕ್ಕೆ ರೆಕ್ಕೆಗಳು ಮೂಡಿ ಅಕಾಶವೇ ಹಾರುತ್ತ ಸಾಗಿದಂತೆ! ಕಾಲದ ಹಕ್ಕಿಯ ‘ಹಾರಾಟ’ (ಶ್ಲೇಷೆ ಗಮನಿಸಿರಿ) ಅಂಥದು! ಅನಾದಿಯೆಂಬ ಮುಗಿಲಿಗೆ ಮೂಡಿದ ರೆಕ್ಕೆಗಳೊಡನೆ, ಅನಂತವೆಂಬ ನೀಲಮೇಘಮಂಡಲದಲ್ಲಿ, ದಿನ-ಮಾಸ-ವರ್ಷ....ಯುಗ....ಮನ್ವಂತರ....ಕಲ್ಪ....ಗಳೆಂಬ ನಕ್ಷತ್ರಗಳ ಮಾಲೆ ಧರಿಸಿ, ದಿನ-ರಾತ್ರಿಗಳೆಂಬ ಸೂರ್ಯ-ಚಂದ್ರರನ್ನು ಕಣ್ಣುಗಳಾಗಿ ಹೊಂದಿ, ನೋಡುತ್ತ, ತೋರುತ್ತ, ತೋರಿಸುತ್ತ ಕಾಲದ ಹಕ್ಕಿಯು ಹಾರುತ್ತಿದೆ.

Explanation:

Similar questions