೧. ಗುಣಿತಾಕ್ಷರ ಎಂದರೇನು?
, ಸಂಯುಕಾಕರ ಎಂದರೇನು? ಉದಾಹರಣೆ ನೀಡಿ.
. ದೇರ, ಮತ್ತು ಅನ್ಯ ದೇಶ, ಪದಗಳನ್ನು ಪಟ್ಟಿ ಮಾಡಿ.
', ಕನ್ನಡದಲ್ಲಿರುವ ಯಾವುದಾದರು ಇದು ತದ್ಭವ ಪದಗಳನ್ನು ಪಟ್ಟಿ ಮಾಡಿ.
Answers
Answer:
ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕನ್ನಡ ವರ್ಣಮಾಲೆಯ ಬಗ್ಗೆ ತಿಳಿದುಕೊಂಡ ನಂತರ ಕಲಿಯಬೇಕಾದ ಲಿಪಿ ರಚನೆಯ ಪ್ರಮುಖ ಭಾಗವೆಂದರೆ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳದ್ದು. ಇವುಗಳ ಬಗ್ಗೆ ವಿವರವಾಗಿ ತಿಳಿಯೋಣ.
ನೀವು ಕಾಗುಣಿತ ಎಂಬ ಪದವನ್ನು ಕೇಳಿದ್ದೀರಿ. ವರ್ಣಮಾಲೆಯಲ್ಲಿ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ಬೇರೆಬೇರೆ ಸ್ವರಗಳನ್ನು ಸೇರಿಸಿ ಬೇರೆಬೇರೆ ಅಕ್ಷರಗಳನ್ನು ಪಡೆಯಬಹುದು. ಈ ಪ್ರಕ್ರಿಯೆ ಕ್ ಅಕ್ಷರದಿಂದ ಆರಂಭವಾಗುವುದರಿಂದ ಇವುಗಳಿಗೆ ಕಾಗುಣಿತ ಎಂಬ ಹೆಸರು ಬಂದಿದೆ. ಇದನ್ನು ಅನೇಕ ಕಡೆ 'ಬಳ್ಳಿ' ಎಂದೂ ಕರೆಯುತ್ತಾರೆ. ಇದು ಸೂಕ್ತವೂ ಹೌದು. ಏಕೆಂದರೆ ಕ್ ಇಂದ ಳ್ ವರೆಗಿನ 34 ಅಕ್ಷರಗಳಿಗೆ ವಿವಿಧ ಸ್ವರಗಳನ್ನು ಸೇರಿಸುತ್ತಾ ಹೋದಂತೆ ಅಕ್ಷರಗಳ ಸಂಖ್ಯೆ ಬಳ್ಳಿಯಂತೆ ಬೆಳೆಯುತ್ತಾ ಹೋಗುತ್ತದೆ. ಇವನ್ನೇ ಗುಣಿತಾಕ್ಷರವೆಂದು ಹೇಳಲಾಗುತ್ತದೆ.
ಗುಣಿತಾಕ್ಷರಗಳು
"ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."
[ವ್ಯಂಜನ + ಸ್ವರ = ಗುಣಿತಾಕ್ಷರ]
ಉದಾಹರಣೆಗೆ:- ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.
ಕ್ + ಅ = ಕ
ಕ್ + ಆ = ಕಾ
ಕ್ + ಇ = ಕಿ
ಕ್ + ಈ = ಕೀ
ಕ್ + ಋ = ಕೃ
ಕ್ + ಎ = ಕೆ
ಕ್ + ಏ = ಕೇ
ಕ್ + ಐ = ಕೈ
ಕ್ + ಒ = ಕೊ
ಕ್ + ಓ = ಕೋ
ಕ್ + ಔ = ಕೌ
ಕ್ + ಅ0 = ಕಂ
ಕ್ + ಅಃ = ಕಃ
ಈ ಗುಣಿತಾಕ್ಷರಗಳನ್ನು ಆಧಾರವಾಗಿಟ್ಟುಕೊಂಡು ಬೇರೆ ಅಕ್ಷರಗಳಿಗೆ ಗುಣಿತಾಕ್ಷರಗಳನ್ನು ಬರೆಯುವುದನ್ನು ಅಭ್ಯಾಸಮಾಡಿ.
ಒಂದು ಪದವನ್ನು ಉದಾಹರಣೆಯಾಗಿ ತೆಗೆದುಕೊಂಡು ವ್ಯಂಜನ ಮತ್ತು ಸ್ವರಗಳಾಗಿ ವಿಂಗಡಿಸುವ ಬಗ್ಗೆ ತಿಳಿಯೋಣ.
ಮೈಸೂರು ಎಂಬ ಪದವನ್ನು ವ್ಯಂಜನ ಮತ್ತು ಸ್ವರಗಳಾಗಿ ಕೆಳಕಂಡಂತೆ ಬಿಡಿಸಿ ಬರೆಯಬಹುದು.
ಮೈಸೂರು = ಮ್ + ಐ + ಸ್ + ಊ + ರ್ + ಉ
ಮೈ ಸೂ ರು
(ಮ್+ಐ, ಸ್+ಊ, ರ್+ಉ)
ಈ ಮೇಲಿನಂತೆ ಒತ್ತಕ್ಷರವಿಲ್ಲದ ಪದಗಳನ್ನು ಬರೆದುಕೊಂಡು ವ್ಯಂಜನ ಮತ್ತು ಸ್ವರಗಳಾಗಿ ವಿಂಗಡಿಸಿರಿ.
ನಿಮಗೆ ಗುಣಿತಾಕ್ಷರಗಳ ಪರಿಚಯವಾಯಿತಲ್ಲವೆ? ಇನ್ನು ಮುಂದಿನ ಭಾಗದಲ್ಲಿ ಸಂಯುಕ್ತಾಕ್ಷರಗಳ ಬಗ್ಗೆ ತಿಳಿಯೋಣ.....
Answer:
" ವ್ಯಂಜನಗಳಿಗೆ ಸ್ವರಗಳು ಹಾಗೂ ಯೋಗವಾಹಕಗಳು ಸೇರಿ ಆಗುವ ಅಕ್ಷರಗಳಿಗೆ "ಗುಣಿತಾಕ್ಷರ ಎನ್ನುವರು