India Languages, asked by jagadish83138313, 6 months ago

ಕೃತಿಕಾರರ ಪರಿಚಯ ಶಿವರಾಮ ಕಾರಂತರು​

Answers

Answered by Anonymous
2

Explanation:

ಶಿವರಾಮ ಕಾರಂತ

(ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ

ಕೃತಿ:

★ಕವನ ಸಂಕಲನಗಳು

★ರಾಷ್ಟ್ರಗೀತ ಸುಧಾಕರ

★ಸೀಳ್ಗವನಗಳು

ಕಾದಂಬರಿಗಳು:

★ಅದೇ ಊರು, ಅದೆ ಮರ

★ಅಳಿದ ಮೇಲೆ

★ಅಂಟಿದ ಅಪರಂಜಿ

★ಆಳ, ನಿರಾಳ

★ಇದ್ದರೂ ಚಿಂತೆ

★ಇನ್ನೊಂದೇ ದಾರಿ

★ಇಳೆಯೆಂಬ

★ಉಕ್ಕಿದ ನೊರೆ

★ಒಡಹುಟ್ಟಿದವರು

ಪ್ರಶಸ್ತಿ:

★ಜ್ಞಾನಪೀಠ ಪ್ರಶಸ್ತಿ

★ಪದ್ಮಭೂಷಣ ಪ್ರಶಸ್ತಿ

★ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್

★ರಾವ್ ಬಹದೂರ್ ಪ್ರಶಸ್ತಿ (೧೯೩೦ ರಲ್ಲಿ)

★ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

★ಪಂಪ ಪ್ರಶಸ್ತಿ

Similar questions