India Languages, asked by varsharaghu20, 8 months ago

'ಅಯ್ಯೋ, ನನಗೆ ವೇಳೆ ಸಾಲದು' ಎಂದು ಕೊರಗುವವರು ಬಹಳ ಮಂದಿ ಇದ್ದಾರೆ. ವೇಳೆ ಎನ್ನುವುದು ಬಂಡವಾಳ ಹೂಡಿಕೆಯಿದ್ದಂತೆ. ಯಾರು ಇರುವ ಸಮಯವನ್ನು ಸರಿಯಾಗಿ, ಸಮರ್ಪಕವಾಗಿ ನಿರ್ವಹಿಸಬಲ್ಲರೋ ಅವರು ಜೀವನವನ್ನು ಚೆನ್ನಾಗಿ ನಿರ್ವಹಿಸಬಲ್ಲರು. 'ಹೊತ್ತೇ ಮುತ್ತು' ಎಂದು ಬಲ್ಲವರು ಹೇಳುತ್ತಾರೆ. ಆದ್ದರಿಂದ ಸಮಯ ಪ್ರಜ್ಞೆ ಇದ್ದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಯಾರಲ್ಲಿ ಜೀವನದ ಬಗ್ಗೆ ಸ್ಪಷ್ಟವಾದ ಗುರಿಯಿರುವುದಿಲ್ಲವೋ ಅಂತಹವರು ಸಮಯವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುತ್ತಾರೆ.

ಸಮಯದ ಅಪವ್ಯಯಕ್ಕೆ ಹೆಚ್ಚಾಗಿ ಆಲಸ್ಯವೇ ಕಾರಣವಾಗಿರುತ್ತದೆ. ತಡವಾಗಿ ಎದ್ದು ಗಡಿಬಿಡಿಯಲ್ಲಿ ಹೊರಟು ಶಾಲೆಗೆ ಅಥವಾ ಕಾಲೇಜಿಗೆ ಓಡುವುದರಿಂದ ಬೆಳಿಗ್ಗೆ ಬೇಗ ಏಳಲಾಗದೆ ಸರಿಯಾದ ಸಮಯಕ್ಕೆ ಪರೀಕ್ಷಾ ಸ್ಥಳವನ್ನು ಸೇರಲಾಗುವುದಿಲ್ಲ. ಅಷ್ಟೇ ಅಲ್ಲದೆ ಆ ಗಡಿಬಿಡಿಯಲ್ಲಿ ಓದಿದ್ದೆಲ್ಲಾ ಮರೆತುಹೋಗಬಹುದು. ಇದಕ್ಕೆ ಮದ್ದೆಂದರೆ ವೇಳಾಪಟ್ಟಿಯೊಂದನ್ನು ತಯಾರಿಸಿಕೊಂಡು ಅದನ್ನು ಅನುಸರಿಸುವುದು. ಇದರಿಂದ ಯಾವ ಕೆಲಸವನ್ನು ಯಾವಾಗ ಮಾಡಬೇಕೆಂಬುದು ತಿಳಿಯುವುದಲ್ಲದೆ ಸಮಯವನ್ನು ಸರಿಯಾಗಿ ಬಳಸಿಕೊಂಡು ಬದುಕಿನಲ್ಲಿ ನಾವು ಇಟ್ಟುಕೊಂಡ ಗುರಿಯನ್ನು ಕೂಡ ಸಮರ್ಥವಾಗಿ ತಲುಪಲು ಸಾಧ್ಯವಾಗುತ್ತದೆ.

ಪ್ರಶ್ನೆಗಳು:

೧. ಯಶಸ್ಸನ್ನು ಹೇಗೆ ಪಡೆಯಬಹುದು?

೨. ಸಮಯದ ಬಗ್ಗೆ ಬಲ್ಲವರು ಏನೆಂದು ಹೇಳಿದ್ದಾರೆ?

೩. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ತಡವಾಗಿ ಎದ್ದರೆ ಏನಾಗುತ್ತದೆ?

೪. ವೇಳೆಯನ್ನು ಬಂಡವಾಳ ಹೂಡಿಕೆಗೆ ಏಕೆ ಹೋಲಿಸಿದ್ದಾರೆ?

Answers

Answered by piyush031662
1

Answer:

बहुत सारे लोग हैं जो कहते हैं, 'ओह, मैं इसे बर्दाश्त नहीं कर सकता।' अगर निवेश है। जो जीवन को पर्याप्त रूप से, ठीक से और पर्याप्त रूप से संभाल सके। 'समय में चूमो,' बुद्धिमान व्यक्ति कहते हैं। तो जो लोग समय के प्रति सचेत हैं, उनके लिए सफलता आ रही है।जिनके पास जीवन का कोई स्पष्ट लक्ष्य नहीं है, वे अटारी में समय बर्बाद कर रहे हैंआलस्य अक्सर समय के अवमूल्यन का कारण होता है। देर से उठना और स्कूल या कॉलेज के लिए दौड़ना सुबह जल्दी नहीं उठना और सही समय पर परीक्षा स्थल पर पहुंचना नहीं है। और वह सब उपद्रव भुलाया जा सकता है। केवल नकारात्मक पक्ष यह है कि आपको एक शेड्यूल बनाना होगा और उसका पालन करना होगा। इससे हमें न केवल यह जानने में मदद मिलेगी कि काम कब करना है, बल्कि हमें अपने समय का सही उपयोग करके अपने लिए निर्धारित लक्ष्य तक पहुंचने में भी मदद मिलेगी।प्रशन:

. आप सफलता कैसे पा सकते हैं?

. बुद्धिमानों ने समय के बारे में क्या कहा?

. क्या होगा अगर छात्र परीक्षा के दौरान देर से उठते हैं?

. समय निवेश की तुलना क्यों करता है?

Similar questions