India Languages, asked by varsharaghu20, 7 months ago

ಇಲ್ಲ, ನನಗೆ ಖಂಡಿತ ಇಲ್ಲ

ಆ ಸ್ವರ್ಗ ಲೋಕದ ಬಯಕೆ;

ನಿಜ ಹೇಳಬೇಕೆಂದರೆ

ಕಿಚ್ಚು ಹಚ್ಚಲೇ ಬೇಕು ಆ ಸ್ವರ್ಗಕ್ಕೆ.

ಅಲ್ಲಿ ನಮ್ಮ ಪುರಾಣಗಳ ಪ್ರಕಾರ

ಹಸಿವಾಗುವುದೇ ಇಲ್ಲ;

ಬಾಯಾರಿಕೆಯೂ ಇಲ್ಲ.

ಇಂಥ ಹಸಿವಿರದ, ತೃಷೆಯಿರದ

ಬದುಕು, ಬದುಕೇ ಅಲ್ಲ.

ಮೇಲಿನ ಆ ಸ್ವರ್ಗದಲ್ಲಿ

ದೇವತೆಗಳು ಕಣ್ಣು ಮಿಟುಕಿಸುವುದಿಲ್ಲ.

ಬಿಟ್ಟ ಕಣ್ಣು ಬಿಟ್ಟಂತೆಯೇ ಇರುವ

ಯಾರನ್ನಾದರೂ ನೋಡುವುದು

ನಿಜವಾಗಿಯೂ ಸಂತೋಷವಲ್ಲ.

ಹೊಟ್ಟೆ ತುಂಬಿದವರ ಆಸ್ವರ್ಗದಲ್ಲಿ

ಹೊಟ್ಟೆ ಕಿಚ್ಚಿಗೂ ಕೂಡ ಬರಗಾಲವಿಲ್ಲ.

ಪುರಾಣಗಳ ಪ್ರಕಾರ, ಸದಾ ಅಭದ್ರ

ಸಿಂಹಾಸನ, ಪದವಿಯ ಭದ್ರತೆಗಾಗಿ

ದೇವೇಂದ್ರನಾಡಿದಾಟಕ್ಕೆ ಲೆಕ್ಕವೇ ಇಲ್ಲ.

ಸೂರ್ಯ, ಚಂದ್ರರಾ ಬೆಳಕು

ನದಿ, ನದಿಗಳಾ ತಳಕು

ಬೆಟ್ಟ, ಗುಡ್ಡ ಝರಿಗಳಾ ಹೊಳಪು

ಭೂರಮೆಯ ಹಚ್ಚ ಹಸಿರಿನ ಒನಪು

ನಮಗಿರಲು ಸ್ವರ್ಗವಾದರೂ ಏಕೆ ಬೇಕು?

ಪ್ರಶ್ನೆಗಳು:

೧. ಕವಿಯ ಸ್ವರ್ಗಕ್ಕೆ ಏನು ಹಚ್ಚಬೇಕೆಂದು ಹೇಳುತ್ತಾರೆ?

೨. ಕವಿಗೆ ಸಂತೋಷ ನೀಡದ ವಿಷಯ ಯಾವುದು?

೩. ಸ್ವರ್ಗದಲ್ಲಿನ ಬದುಕು ಹೇಗಿರುತ್ತದೆಂದು ಕವಿ ಹೇಳಿದ್ದಾರೆ?

೪. ಭೂಮಿಯ ಮೇಲೆ ಯಾವ ಸಂತೋಷವಿದೆ?​

Answers

Answered by sanjeevinidhammur
1

Answer:

ಕವಿಯ ಸ್ವರ್ಗಕ್ಕೆ ದೇವತೆಗಳು ಕಣ್ಣು ಹಚ್ಚಬೇಕೆಂದು ಹೇಳುತ್ತಾರೆ

Similar questions