"ಸುಬ್ಬಣ್ಣ ರಂಗನಾಥ ಎಕ್ಕುಂಡಿ", ಇವರ ಪರಿಚಯ ಮಾಡಿ
Answers
ನನ್ನೊಳಗೆ, ಓದುಗರೊಳಗೆ ಅವರು ಬಂಕಿಕೊಂಡ್ಲ, ಕಡಲು, ಬೆಳ್ಳಕ್ಕಿ, ಗುಮಟೆ ಪಾಂಗು, ಹಾಲಕ್ಕಿ ಒಕ್ಕಲಿಗರ.. ಅಂತಹವರ ನೋವು ಎಲ್ಲವನ್ನೂ ಸುರಿದರು. ಬೊಚ್ಚು ಬಾಯಿಯ ತುಂಬಾ ನಗೆ ತುಳುಕಿಸುತ್ತಾ, ದೊಡ್ಡ ಕಣ್ಣುಗಳು ಕೆಂಡದುಂಡೆಗಳೇನೋ ಎನ್ನುವಂತೆ ಅವರು ಬಿಚ್ಚಿಟ್ಟ ನೆನಪುಗಳು ನನ್ನ ಒಡಲಲ್ಲಿ ಮನೆ ಮಾಡಿ ಕುಳಿತಿದೆ.
ಹಾಗಿರುವಾಗಲೊಮ್ಮೆ ಅವರನ್ನು ಕೇಳಿದ್ದೆ. ‘ಇಷ್ಟೆಲ್ಲಾ ಬರೆಯಲು ನೀವು ತೊಡಗಿದ್ದು ಹೇಗೆ?’ ಒಂದು ಕ್ಷಣ ಮೌನಕ್ಕೆ ಜಾರಿದ ಅವರು ‘ನನ್ನ ಅಮ್ಮ’ ಎಂದರು. ನಂತರ ನಿಧಾನವಾಗಿ ಸಾವರಿಸಿಕೊಂಡು ‘ಅಮ್ಮ ಹಾಡಿದ ಒಂದು ಹಾಡಿನಿಂದ ನಾನು ಈ ಜಗತ್ತನ್ನು ನೋಡುವ ಒಂದು ಕಿಟಕಿಯನ್ನು ರೂಪಿಸಿಕೊಂಡೆ’ ಎಂದರು. ಅಮ್ಮನ ಹಾಡು ಅವರಿಗೆ ಜಗತ್ತಿನ ಕದ ತೆರೆದಿತ್ತು.
ಹಾಗೆ ಹೇಳುವಾಗ ಅವರು ಹೇಳುತ್ತಿದ್ದುದು ಹೆಣ್ಣು ಸಾಗಿ ಬಂದ ಸಂಕಟವನ್ನು. ಹಾಗೂ ಆ ಸಂಕಟವನ್ನು ಬಣ್ಣಿಸಲು ಹುಡುಕಿಕೊಳ್ಳುತ್ತಿದ್ದ ದಾರಿಗಳನ್ನು. ಕತ್ತಲ ಲೋಕದಲ್ಲಿ ಅವರು ಧೈರ್ಯದಿಂದ ಬೆಳಕಿಂಡಿಗಳನ್ನು ಬೆನ್ನತ್ತಿ ತಮ್ಮದಾಗಿಸಿಕೊಳ್ಳುತ್ತಿದ್ದರು. ತಮ್ಮ ಕೆಚ್ಚು, ಸ್ವಾಭಿಮಾನ, ಮಮತೆ ಯಾವುದೂ ಮುಕ್ಕಾಗದಂತೆ ನೋಡಿಕೊಳ್ಳುತ್ತಲೇ ಅವರು ಬೆಳಕಿನ ಕಿಟಕಿಗಳನ್ನು ತೆರೆಯುತ್ತಾ ಹೋದರು. ಅವರು ಹಚ್ಚಿದೊಂದು ಹಣತೆ ಈಗ ಎಷ್ಟೋ ಜೀವ ಬೆಳಗಿದೆ.