ಕನ್ನಡ ಕನ್ನಡ ಸಂಸ್ಕೃತಿ -
Answers
Answer:
ಕರ್ನಾಟಕದ ಸಂಸ್ಕೃತಿ : ‘ಸಂಸ್ಕೃತಿ’ ಎಂಬ ಶಬ್ದದ ಅರ್ಥ ಬಹು ವ್ಯಾಪಕವಾಗಿ ಬೆಳೆಯುತ್ತ ಬಂದಿದೆ; ಹೊಸ ಹೊಸ ಅರ್ಥಗಳನ್ನು ಒಳಗೊಂಡಿದೆ. ಸಮಷ್ಟಿ ಜೀವನದ ಅಂತರಂಗದ ಸಾಧನೆಗೆ ಸಹಕಾರಿಯಾದ ಸಾಮಗ್ರಿಗಳಿಂದ ಹಿಡಿದು, ವ್ಯಷ್ಟಿ ಜೀವನದ ವಿಕಾಸಕ್ಕೆ ಕಾರಣವಾದ ಸಂಸ್ಕಾರದವರೆಗೆ ಈ ಪದದ ಅರ್ಥ ಬೆಳೆದಿದೆ. ವ್ಯಕ್ತಿಯ ವಿಕಾಸಕ್ಕೆ ಕಾರಣವಾಗುವ ಸಾಮಾಜಿಕ ಪರಿಕರಗಳು ಸಹ ಸಂಸ್ಕೃತಿಯಲ್ಲಿಯೇ ಸಮಾವೇಶಗೊಳ್ಳುತ್ತವೆ. ಈ ಅರ್ಥದಲ್ಲಿ ಅದನ್ನು ಕೆಲವು ವೇಳೆ ದೇಶವಾಚಕವಾಗಿ ಬಳಸುವುದುಂಟು. ಒಟ್ಟು ಜನಜೀವನದ ಅಂತರಂಗದ ಅನುಭವ ಇಲ್ಲಿ ಪ್ರಧಾನವಾದ ಅಂಶವಾಗಿ ಗೋಚರವಾಗುತ್ತದೆ. ಆಯಾ ಪ್ರದೇಶ, ಭಾಷೆ, ಧರ್ಮಗಳ ಜನರು ತಂತಮ್ಮ ಬಹುಮುಖ ಸಮಸ್ಯೆಗಳಿಗೆ ಉತ್ತರವನ್ನು ಕಾಣಬಯಸುವ ಅಂತರಂಗದ ಸಾಧನೆಯೇ ಸಂಸ್ಕೃತಿಯ ಮೂಲಸಾಮಗ್ರಿ. ಸಾವಿರಾರು ವರ್ಷಗಳಿಂದ ಬಾಳಿ, ಬದುಕಿನಲ್ಲಿ ಬಿಳಲು ಬಿಟ್ಟು, ವಿಸ್ತಾರವಾಗಿ ಬೆಳೆದು ನೆರಳನ್ನೀಯುತ್ತ ಸಾರ್ಥಕ ಮಾರ್ಗದಲ್ಲಿ ನಡೆದಿರುವ ಕರ್ನಾಟಕ ಸಂಸ್ಕೃತಿ ಒಂದು ಸನಾತನ ವೃಕ್ಷ. ಕಾಲದಿಂದ ಮತ್ತು ಸತ್ತ್ವದಿಂದ ಅದು ಸನಾತನ; ಆದರೆ ಅದರ ಚೇತನ ನಿತ್ಯನೂತನ. ಇಂದೂ ಹೊಸ ಹೊಸ ಬಿಳಲುಗಳು ಬೇರೂರಿ ಬೆಳೆಯುತ್ತಿವೆ; ಟಿಸಿಲುಗಳು ಕುಡಿಯೊಡೆದು ಹೂವುಗಳು ಅರಳುತ್ತಿವೆ. ನಿರಂತರವಾಗಿ ಬೆಳೆದುಬಂದ ಭಾರತೀಯ ಪರಂಪರೆಯಿಂದ ಅದು ಪೋಷಿತವಾಗುತ್ತದೆ.
ನಿಜವಾಗಿ ನೋಡಿದರೆ ಕರ್ನಾಟಕ ಸಂಸ್ಕೃತಿ ಎಂಬುದು ಭಾರತೀಯ ಸಂಸ್ಕೃತಿಗಿಂತ ಭಿನ್ನವಾದುದೇನಲ್ಲ. ಭರತಖಂಡದ ಒಂದು ಅವಿಭಾಜ್ಯ ಅಂಗವಾಗಿರುವ ಕರ್ನಾಟಕ ತನ್ನ ಆಶಯ ಆಶೋತ್ತರಗಳಲ್ಲಿ, ಅವುಗಳ ಸಾಧನೆಯ ಮಾರ್ಗದಲ್ಲಿ, ಅನುಭವದ ಅಭಿವ್ಯಕ್ತಿಯ ಮಾಧ್ಯಮವನ್ನು ರೂಪಿಸಿಕೊಳ್ಳುವ ಕುಶಲಕಲೆಯಲ್ಲಿ ಭಾರತೀಯ ಮನೋಧರ್ಮವನ್ನೇ ಅವಲಂಬಿಸಿ ಬೆಳೆಯಿತು. ಆದರೆ ಅದರ ಪ್ರಾದೇಶಿಕ ವೈವಿಧ್ಯಕ್ಕೆ ತನ್ನ ವಿಶಿಷ್ಟ ಸ್ವರೂಪವನ್ನಿತ್ತು ಅದರ ಶ್ರೀಮಂತಿಕೆಗೆ ಕಾರಣವಾಯಿತು.
ಕರ್ನಾಟಕವನ್ನಾಳಿದ ವಿವಿಧ ರಾಜವಂಶಗಳು, ಈ ನಾಡಿಗೆ ಬಂದ ಮತ್ತು ಇಲ್ಲಿಯೇ ಹುಟ್ಟಿ ಬೆಳೆದ ಧಾರ್ಮಿಕ ಆಂದೋಲನಗಳು, ಜನಪದವನ್ನು ಅವು ರೂಪಿಸಿದ ಬಗೆ, ಸಾಹಿತ್ಯ ಮತ್ತು ಜನಪದ ಸಾಹಿತ್ಯಗಳು ಪಡೆದ ಅಭಿವ್ಯಕ್ತಿ. ವಾಸ್ತುಶಿಲ್ಪ, ಶಿಲ್ಪ ಸಂಗೀತ ನೃತ್ಯ ಚಿತ್ರಾದಿ ಕುಶಲ ಕಲೆಗಳ ಸಾಧನೆ-ಈ ಎಲ್ಲ ಅಂಶಗಳಲ್ಲಿಯೂ ಕರ್ನಾಟಕದ ವೈಶಿಷ್ಟ್ಯವನ್ನು ಗುರುತಿಸಬಹುದು. ಮುಖ್ಯವಾಗಿ ಇಲ್ಲಿ ಕಾಣುವುದು ಒಂದು ಸಮನ್ವಯ ಮತ್ತು ಸಾಮರಸ್ಯ ದೃಷ್ಟಿ.
ರಾಜಕೀಯ ಚರಿತ್ರೆಯನ್ನು ನೋಡಿದರೆ ಕದಂಬರು, ಗಂಗರು ಅಥವಾ ಅವರಿಗಿಂತ ಹಿಂದಿನ ಶಾತವಾನರಿಂದ ಹಿಡಿದು, ಕೆಳದಿ ಮೈಸೂರು ಅರಸರವರೆಗೂ ಎಲ್ಲ ರಾಜವಂಶಗಳೂ ಉದಾತ್ತ ಹಿನ್ನೆಲೆಯಲ್ಲಿಯೇ ಬೆಳೆದುಬಂದುವು. ತಮ್ಮ ಜಾತಿ ಮತ ಭಾವಗಳಲ್ಲಿ ಅಂಧರಾಗಿ ಇತರರನ್ನು ಹಿಂಸಿಸಲು ಹೊರಟ ರಾಜರು ಈ ದೀರ್ಘ ಇತಿಹಾಸದಲ್ಲಿ ಅಪ್ಪಿತಪ್ಪ್ಪಿ ಕೂಡ ಕಾಣಸಿಗಲಾರರೆಂಬುದು ಗಮನಾರ್ಹವಾದ ಸಂಗತಿ. ಈ ನೆಲದ ಗುಣವೇ ಅದೆನ್ನುವಷ್ಟರ ಮಟ್ಟಿಗೆ ಸಮನ್ವಯ ಮತ್ತು ಸಾಮರಸ್ಯ ಭಾವನೆಯನ್ನು ಅವರು ರೂಪಿಸಿಕೊಂಡರು. ರಾಜರ ವೈಯಕ್ತಿಕ ಬಲವನ್ನು ಅವಲಂಬಿಸಿ ಒಂದೊಂದು ಕಾಲದಲ್ಲಿ ಒಂದೊಂದು ಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ಸಿಕ್ಕಿರಬಹುದು. ಒಂದೇ ವಂಶದಲ್ಲಿಯೂ ಒಬ್ಬೊಬ್ಬ ರಾಜರು ಒಂದೊಂದು ಧರ್ಮಕ್ಕೆ ಹೆಚ್ಚಾಗಿ ಒಲಿಯುತ್ತಿದ್ದುದೂ ಉಂಟು. ರಾಷ್ಟ್ರಕೂಟ ರಾಜರಲ್ಲಿ ಅನೇಕರು ಹಿಂದೂ ಧರ್ಮವನ್ನು ಅದರಲ್ಲಿಯೂ ವಿಶೇಷವಾಗಿ ಶೈವಧರ್ಮವನ್ನು ಅವಲಂಬಿಸಿದ್ದರೆ, ನೃಪತುಂಗ ಜೈನ ಧರ್ಮಕ್ಕೆ ಮನಸೋತಿದ್ದ. ಹೊಯ್ಸಳ ಒಂದನೇ ಬಲ್ಲಾಳ ಶೈವನಾದರೆ, ಅವನ ತಮ್ಮ ವಿಷ್ಣುವರ್ಧನ ವೈಷ್ಣವ. ಅದು ಅವರ ವೈಯಕ್ತಿಕ ಒಲವು. ಆದರೆ ಸಾರ್ವತ್ರಿಕವಾಗಿ ಅವರು ಸರ್ವಧರ್ಮ ರಕ್ಷಕರೆಂಬುದನ್ನು ಮರೆತಿರಲಿಲ್ಲ. ಹೆಚ್ಚೆಂದರೆ ತಾವು ಒಲಿದ ಧರ್ಮಕ್ಕೆ ಸ್ವಲ್ಪ ಹೆಚ್ಚು ಪ್ರೋತ್ಸಾಹ ಕೊಟ್ಟಿರಬಹುದು. ಆದರೆ ಇತರ ಧರ್ಮಗಳ ಮೇಲೆ ದ್ವೇಷವನ್ನು ಸಾಧಿಸಿದ ದುರ್ಘಟನೆ ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಒಮ್ಮೆಯೂ ಸಂಭವಿಸಲಿಲ್ಲ. ಚಾಳಕ್ಯರು, ಗಂಗರು, ಹೊಯ್ಸಳರು, ವಿಜಯನಗರದ ಅರಸರು, ಕೆಳದಿಯ ನಾಯಕರು-ಈ ಎಲ್ಲ ಅರಸುಮನೆತನಗಳಿಗೂ ಈ ಮಾತನ್ನು ಅನ್ವಯಿಸಬಹುದು.
ಕರ್ನಾಟಕದ ಸಂಸ್ಕೃತಿ : ‘ಸಂಸ್ಕೃತಿ’ ಎಂಬ ಶಬ್ದದ ಅರ್ಥ ಬಹು ವ್ಯಾಪಕವಾಗಿ ಬೆಳೆಯುತ್ತ ಬಂದಿದೆ; ಹೊಸ ಹೊಸ ಅರ್ಥಗಳನ್ನು ಒಳಗೊಂಡಿದೆ. ಸಮಷ್ಟಿ ಜೀವನದ ಅಂತರಂಗದ ಸಾಧನೆಗೆ ಸಹಕಾರಿಯಾದ ಸಾಮಗ್ರಿಗಳಿಂದ ಹಿಡಿದು, ವ್ಯಷ್ಟಿ ಜೀವನದ ವಿಕಾಸಕ್ಕೆ ಕಾರಣವಾದ ಸಂಸ್ಕಾರದವರೆಗೆ ಈ ಪದದ ಅರ್ಥ ಬೆಳೆದಿದೆ. ವ್ಯಕ್ತಿಯ ವಿಕಾಸಕ್ಕೆ ಕಾರಣವಾಗುವ ಸಾಮಾಜಿಕ ಪರಿಕರಗಳು ಸಹ ಸಂಸ್ಕೃತಿಯಲ್ಲಿಯೇ ಸಮಾವೇಶಗೊಳ್ಳುತ್ತವೆ. ಈ ಅರ್ಥದಲ್ಲಿ ಅದನ್ನು ಕೆಲವು ವೇಳೆ ದೇಶವಾಚಕವಾಗಿ ಬಳಸುವುದುಂಟು. ಒಟ್ಟು ಜನಜೀವನದ ಅಂತರಂಗದ ಅನುಭವ ಇಲ್ಲಿ ಪ್ರಧಾನವಾದ ಅಂಶವಾಗಿ ಗೋಚರವಾಗುತ್ತದೆ. ಆಯಾ ಪ್ರದೇಶ, ಭಾಷೆ, ಧರ್ಮಗಳ ಜನರು ತಂತಮ್ಮ ಬಹುಮುಖ ಸಮಸ್ಯೆಗಳಿಗೆ ಉತ್ತರವನ್ನು ಕಾಣಬಯಸುವ ಅಂತರಂಗದ ಸಾಧನೆಯೇ ಸಂಸ್ಕೃತಿಯ ಮೂಲಸಾಮಗ್ರಿ. ಸಾವಿರಾರು ವರ್ಷಗಳಿಂದ ಬಾಳಿ, ಬದುಕಿನಲ್ಲಿ ಬಿಳಲು ಬಿಟ್ಟು, ವಿಸ್ತಾರವಾಗಿ ಬೆಳೆದು ನೆರಳನ್ನೀಯುತ್ತ ಸಾರ್ಥಕ ಮಾರ್ಗದಲ್ಲಿ ನಡೆದಿರುವ ಕರ್ನಾಟಕ ಸಂಸ್ಕೃತಿ ಒಂದು ಸನಾತನ ವೃಕ್ಷ. ಕಾಲದಿಂದ ಮತ್ತು ಸತ್ತ್ವದಿಂದ ಅದು ಸನಾತನ; ಆದರೆ ಅದರ ಚೇತನ ನಿತ್ಯನೂತನ. ಇಂದೂ ಹೊಸ ಹೊಸ ಬಿಳಲುಗಳು ಬೇರೂರಿ ಬೆಳೆಯುತ್ತಿವೆ; ಟಿಸಿಲುಗಳು ಕುಡಿಯೊಡೆದು ಹೂವುಗಳು ಅರಳುತ್ತಿವೆ. ನಿರಂತರವಾಗಿ ಬೆಳೆದುಬಂದ ಭಾರತೀಯ ಪರಂಪರೆಯಿಂದ ಅದು ಪೋಷಿತವಾಗುತ್ತದೆ.
ನಿಜವಾಗಿ ನೋಡಿದರೆ ಕರ್ನಾಟಕ ಸಂಸ್ಕೃತಿ ಎಂಬುದು ಭಾರತೀಯ ಸಂಸ್ಕೃತಿಗಿಂತ ಭಿನ್ನವಾದುದೇನಲ್ಲ. ಭರತಖಂಡದ ಒಂದು ಅವಿಭಾಜ್ಯ ಅಂಗವಾಗಿರುವ ಕರ್ನಾಟಕ ತನ್ನ ಆಶಯ ಆಶೋತ್ತರಗಳಲ್ಲಿ, ಅವುಗಳ ಸಾಧನೆಯ ಮಾರ್ಗದಲ್ಲಿ, ಅನುಭವದ ಅಭಿವ್ಯಕ್ತಿಯ ಮಾಧ್ಯಮವನ್ನು ರೂಪಿಸಿಕೊಳ್ಳುವ ಕುಶಲಕಲೆಯಲ್ಲಿ ಭಾರತೀಯ ಮನೋಧರ್ಮವನ್ನೇ ಅವಲಂಬಿಸಿ ಬೆಳೆಯಿತು. ಆದರೆ ಅದರ ಪ್ರಾದೇಶಿಕ ವೈವಿಧ್ಯಕ್ಕೆ ತನ್ನ ವಿಶಿಷ್ಟ ಸ್ವರೂಪವನ್ನಿತ್ತು ಅದರ ಶ್ರೀಮಂತಿಕೆಗೆ ಕಾರಣವಾಯಿತು.
ನಿಮಗೆ ಉಪಯೋಗ ಭಾವಿಸುತ್ತೇನೆ ☺☺☺☺