ಕನ್ನಡದಲ್ಲಿ ಅನುಸ್ವಾರ ಮತ್ತು ವಿಸರ್ಗಗಳನ್ನು ಹೀಗೆಂದು ಕರೆಯುತ್ತಾರೆ
Answers
Answer:
ಅಂ, ಅಃ ಇವು ಸ್ವರಗಳ ಒಂದು ಭಾಗ ಮಾತ್ರ. (೦)ಮ್ ಅನುಸ್ವಾರದ ಗುರುತಾದರೆ, 'ಃ ' ವಿಸರ್ಗದ ಗುರುತಾಗಿರುತ್ತದೆ. ಇವೆರಡನ್ನೂ ಒಟ್ಟಿಗೆ ಯೋಗವಾಹ ಎಂದು ಕರೆಯುವರು. 'ಯೋಗವಾಹ' ಅಂದರೆ ಜೊತೆಯಲ್ಲಿ ಬರುವಂತಹವುಗಳು ಎಂದರ್ಥ.
Answer:
ಅನುಸ್ವಾರ ಮತ್ತು ವಿಸರ್ಗ ಎಂದರೇನು?
ಅಂ, ಅಃ ಇವು ಸ್ವರಗಳ ಒಂದು ಭಾಗ ಮಾತ್ರ. (೦)ಮ್ ಅನುಸ್ವಾರದ ಗುರುತಾದರೆ, 'ಃ ' ವಿಸರ್ಗದ ಗುರುತಾಗಿರುತ್ತದೆ. ಇವೆರಡನ್ನೂ ಒಟ್ಟಿಗೆ ಯೋಗವಾಹ ಎಂದು ಕರೆಯುವರು. 'ಯೋಗವಾಹ' ಅಂದರೆ ಜೊತೆಯಲ್ಲಿ ಬರುವಂತಹವುಗಳು ಎಂದರ್ಥ.
ಅನುಸ್ವಾರದ ಉಚ್ಚಾರಣೆಯ ಸಮಯದಲ್ಲಿ ನಾವು 'ಮ್' ಉಸಿರನ್ನು ಒಳಗೆ ತೆಗೆದುಕೊಂಡರೆ, ವಿಸರ್ಗ (ಅಃ) ಉಚ್ಚಾರಣೆಯ ಸಮಯದಲ್ಲಿ ಉಸಿರನ್ನು ಹೊರಗೆ ಬಿಡುತ್ತೇವೆ.
'ಅಂ ಅಃ' ಸ್ವರಗಳೇ ಆಗಿದ್ದರೂ ಮೂಲ ಸ್ವರಗಳಲ್ಲ, ವ್ಯಂಜನವೂ ಅಲ್ಲ.
ಇವೆರಡು ಸಹ ಸ್ವರದ ನಂತರ ಮಾತ್ರ ಬರಲು ಸಾಧ್ಯ.
ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು.
ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು.
ಉದಾ:
ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು )
ಅಞ್ಚೆ = ಅಂಚೆ
ತಙ್ಗಿ = ತಂಗಿ
ಗಣ್ಟೆ = ಗಂಟೆ
ಅನ್ದ = ಅಂದ
ಅಮ್ಬ = ಅಂಬ
(೦) ಇದನ್ನ ಬಿಂದು ಅಕ್ಷರವೆಂದೂ ಕರೆಯುತ್ತಾರೆ. ಇದಕ್ಕೆ ನಿರ್ಧಿಷ್ಟ ಉಚ್ಚಾರಣೆ ಇಲ್ಲ, ಮುಂದೆ ಬರುವ ವ್ಯಂಜನದ ಮೇಲೆ ಇದರ ಉಚ್ಚಾರಣೆ ಅವಲಂಬಿತವಾಗಿರುತ್ತದೆ.
ಗಂಗಾ ಎಂಬಲ್ಲಿ ಅನುಸ್ವಾರವು ಙ್ ಇದರ ಉಚ್ಚಾರಣೆ ಪಡೆದುಕೊಳ್ಳುತ್ತದೆ.
ಸಂಜಯ ಎಂಬಲ್ಲಿ ಅನುಸ್ವಾರವು ಞ್ ಇದರ ಉಚ್ಚಾರಣೆ ಪಡೆದುಕೊಳ್ಳುತ್ತದೆ.
ಘಂಟೆ ಎಂಬಲ್ಲಿ ಅನುಸ್ವಾರವು ಣ್ ಇದರ ಉಚ್ಚಾರಣೆ ಪಡೆದುಕೊಳ್ಳುತ್ತದೆ.
i don't know if iys correct or not becoz i don't understand your Language.... sorry if its wrong