India Languages, asked by kkomala386gmailcom, 6 months ago

ಯಾವುದೇ ಉತ್ಪನ್ನ ಉತ್ಪಾದಿತ ಗೊಂಡ ನಂತರ ಅದನ್ನು ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ಜಾಹೀರಾತುಗಳ ಪಾತ್ರವನ್ನು ಕುರಿತಾಗಿ ಪ್ರಬಂಧ ಮಂಡಿಸಿ​

Answers

Answered by Anonymous
14

Answer:

ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀ ರಾತುಗಳು "ಗುರುತಿನ ಪ್ರತಿ ಅಭಿಪ್ರಾಯ" (ಬ್ರ್ಯಾಂಡ್ ಇಮೇಜ್) ಮತ್ತು "ಗುರುತಿನ ಪ್ರತಿ ನಿಷ್ಠೆ"ಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆಗಳ ಬಳಕೆ ಹೆಚ್ಚಾಗುವಂತೆ ರೂಪಿಸಲ್ಪಡುತ್ತವೆ. ಈ ಉದ್ದೇಶಗಳಿಗಾಗಿ, ಜಾಹೀರಾತು ಗಳು ಕೆಲವು ಸಲ ವಾಸ್ತವವಾದ ಮಾಹಿತಿಯ ಜೊತೆಗೆ ತಮ್ಮ ಪ್ರೇರಿಸುವ ಸಂದೇಶವನ್ನು ಹುದುಗಿಸುತ್ತವೆ. ದೂರದರ್ಶನ, ರೇಡಿಯೋ, ಚಲನಚಿತ್ರ, ಪತ್ರಿಕೆಗಳು, ವೀಡಿಯೋ ಗೇಮ್ಸ್, ಅಂತರ್ಜಾಲ ಜಾಹೀರಾತು ಮತ್ತು ಜಾಹೀ ರಾತು ಫಲಕ ಸಹಿತ ಪ್ರತಿಯೊಂದು ಪ್ರಮುಖ ಮಾಧ್ಯಮ ಈ ಸಂದೇಶಗಳನ್ನು ತಲುಪಿಸಲು ಉಪಯೋಗಿಸಲ್ಪಡುತ್ತದೆ. ಅನೇಕ ಸಲ, ಒಂದು ಕಂಪನಿ ಅಥವಾ ಇತರ ಸಂಸ್ಥೆಯ ಪರವಾಗಿ ಒಂದು ಜಾಹೀರಾತು ಸಂಸ್ಥೆ ಜಾಹೀರಾತುಗಳನ್ನು ಇರಿಸುತ್ತದೆ.

Attachments:
Similar questions