India Languages, asked by girijammag300, 6 months ago

ಸರ್ ಐಸಾಕ್ ನ್ಯೂಟನ್ ಅವರ ಕಿರುಪರಿಚಯ

Answers

Answered by roshiniPrati12
3

Answer:

ಸರ್‌ ಐಸಾಕ್‌ ನ್ಯೂಟನ್‌ ‌ FRS (4 ಜನವರಿ 1643– 31 ಮಾರ್ಚ್‌‌ 1727 [OS: 25 December 1642– 20 March 1727])[೧] ರವರು ಓರ್ವ ಆಂಗ್ಲ ಭೌತವಿಜ್ಞಾನಿ, ಗಣಿತಜ್ಞ , ಖಗೋಳಶಾಸ್ತ್ರಜ್ಞ, ಸ್ವಾಭಾವಿಕ ತತ್ವಜ್ಞಾನಿ, ರಸಸಿದ್ಧಾಂತಿ, ಹಾಗೂ ಬ್ರಹ್ಮಜ್ಞಾನಿಯಾಗಿದ್ದರು. ಗಮನಾರ್ಹ ಪ್ರಮಾಣದ ತಜ್ಞರು ಹಾಗೂ ಸಾರ್ವಜನಿಕರು ಅವರ ಬಗ್ಗೆ ಇತಿಹಾಸದ ಬಹುಪ್ರಭಾವಿ ವ್ಯಕ್ತಿ ಎಂದು ತಿಳಿದು ಭಾವಿಸಿಕೊಂಡಿದ್ದಾರೆ.[೭] 1687ರಲ್ಲಿ ಪ್ರಕಟಿಸಿದ ಅವರ ಫಿಲಾಸೊಫೀಸ್‌ ನ್ಯಾಚ್ಯುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ (ಸಾಮಾನ್ಯವಾಗಿ ಪ್ರಿನ್ಸಿಪಿಯಾ ಎಂದು ಕರೆಯಲ್ಪಡುವ) ಪುಸ್ತಕವು ವಿಜ್ಞಾನದ ಇತಿಹಾಸದಲ್ಲೇ ಬಹು ಪ್ರಭಾವೀ ಪುಸ್ತಕಗಳಲ್ಲಿ ಒಂದಾಗಿದ್ದು ಅಭಿಜಾತ ಯಂತ್ರಶಾಸ್ತ್ರಕ್ಕೆ ಉತ್ತಮ ತಳಪಾಯ ಒದಗಿಸಿಕೊಟ್ಟ ಕೃತಿಯೆಂಬ ಹೆಗ್ಗಳಿಕೆ ಹೊಂದಿದೆ. ಈ ಕೃತಿಯಲ್ಲಿ, ನ್ಯೂಟನ್‌ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ ಹಾಗೂ ಮೂರು ಗತಿಸೂತ್ರಗಳು ಮುಂದಿನ ಮೂರು ಶತಮಾನಗಳ ಕಾಲ ಭೌತಿಕ ಬ್ರಹ್ಮಾಂಡದ ವೈಜ್ಞಾನಿಕ ನೋಟವನ್ನೇ ಆಳಿದವು. ನ್ಯೂಟನ್‌ರು ಭೂಮಿಯ ಮೇಲಿನ ವಸ್ತುಗಳ ಚಲನೆ ಹಾಗೂ ಬಾಹ್ಯಾಕಾಶ ವಸ್ತುಗಳ ಚಲನೆಯೂ ಒಂದೇ ಗುಂಪಿನ ನೈಸರ್ಗಿಕ ಸೂತ್ರಗಳನ್ನು ಪಾಲಿಸುತ್ತವೆ ಎಂದು ಕೆಪ್ಲರನ ಗ್ರಹಗಳ ಚಲನೆಯ ಮೇಲಿನ ಸೂತ್ರಗಳು ಹಾಗೂ ತನ್ನ ಗುರುತ್ವಾಕರ್ಷಣಾ ಸಿದ್ಧಾಂತಗಳ ನಡುವಿನ ಸಾಮರಸ್ಯವನ್ನು ತೋರಿಸಿದರು. ಆ ಮೂಲಕ ಸೂರ್ಯಕೇಂದ್ರಿತವ್ಯವಸ್ಥೆಯ ಉಳಿದ ಅನುಮಾನಗಳನ್ನು ಪರಿಹರಿಸಿ ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಿದರು.

Similar questions