ತಾಳಿದವನು ಬಾಳಿಯಾನು
ಗಾದೆಯನ್ನು ವಿವರಣೆ ಮಾಡಿ
ಓಳ ಆಥ೯ ಹೊಳ ಆಥ೯
Answers
Answer:
ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದೆಂಬ ಮಾತು ಜನಜನಿತವಾಗಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಅಮೂಲ್ಯವಾದ ಅಗಣಿತ ಗಾದೆ ಮಾತುಗಳಲ್ಲಿ ‘ತಾಳಿದವನು ಬಾಳಿಯಾನು’ ಎಂಬ ಗಾದೆಯೂ ಒಂದಾಗಿದೆ. ದುಡುಕು, ಕೋಪ, ಆತುರ ಮುಂತಾದವು ಅನರ್ಥಸಾಧನಗಳು. ಜೀವನದಲ್ಲಿ ಏಳು ಬೀಳುಗಳು, ಕಷ್ಟ ಕಾರ್ಪಣ್ಯ, ಸುಖ ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ, ಎಂತಹ ಸಂದರ್ಭದಲ್ಲಿಯೂ ವಿವೇಕವನ್ನು ಕಳೆದುಕೊಳ್ಳಬಾರದು ತಾಳ್ಮೆಯಿಂದಿರಬೇಕು. ಜೀವನದಲ್ಲಿ ತಾಳ್ಮೆಯು ಅತಿ ಮುಖ್ಯವಾದುದು. ದಾಸರ ನುಡಿಯಂತೆ ‘ತಾಳುವಿಕೆಗಿಂತ ತಪವಿಲ್ಲ’. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಎರಡನ್ನು ಸಮಾನಭಾವದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗುತ್ತದೆ. ದಾಸರು ಹೇಳುವಂತೆ ''ಈಸಬೇಕು, ಇದ್ದು ಜಯಿಸಬೇಕು'' ಪ್ರವಾಹ ಎದುರಾದರೂ ಈಜಿ ಆಚೆಯ ದಡವನ್ನು ಸೇರುವ ಮನೋಭಾವ ಇರಬೇಕು. ಜೀವನದ ಕಷ್ಟಗಳನ್ನು ಎದುರಿಸಲಾಗದೇ ತಾಳ್ಮೆಗೆಟ್ಟು ದುಡುಕಿನಿಂದ ಹೇಡಿತನದ ನಿರ್ಧಾರಕ್ಕೆ ಬರಬಾರದು. ಅದು ಜೀವನವನ್ನು ಬಲಿತೆಗೆದುಕೊಳ್ಳುತ್ತದೆ. ಬಂದ ಪರಿಸ್ಥಿತಿಯನ್ನು ತಾಳ್ಮೆಯಿಂದ ಧೈರ್ಯದಿಂದ ಎದುರಿಸಿದಾಗ ಬದುಕು ಗಟ್ಟಿಯಾಗುತ್ತಾ ಮುಂದೆ ಸಾಗುತ್ತದೆ. ಯಾವುದೇ ಭಾವನೆ, ಮಾತು, ಕೆಲಸವಿರಲಿ ಅದನ್ನು ಯೋಚಿಸಿ, ಪರಾಮರ್ಶಿಸಿ ನೋಡಬೇಕೇ ವಿನಃ ಯಾವುದೇ ಕಾರಣಕ್ಕೂ ದುಡುಕಬಾರದು. ಏನೇ ಮಾಡಿದರೂ ಎರಡೆರಡು ಸಲ ಯೋಚನೆ ಮಾಡಿ ಮಾಡಬೇಕು. ಇದಕ್ಕೆ ತಾಳ್ಮೆಬೇಕು ದುಡುಕಿನ ನಿರ್ಧಾರ ಬೇರೊಬ್ಬರ ಅಥವ ನಮ್ಮ ಜೀವನದ ಮೇಲೆಯೇ ಭಾರಿ ಪರಿಣಾಮ ಉಂಟುಮಾಡಬಹುದು. ತಾಳ್ಮೆಗೆ ಬಂಗಾರಕ್ಕಿಂತ ಹೆಚ್ಚಿನ ಬೆಲೆಯಿದೆ. ಇಂದಿನ ಜೀವನ ಶೈಲಿಯಲ್ಲಂತು ಹೆಚ್ಚು ಬೇಡಿಕೆಯೂ ಇದೆ ಎಂದರೆ