India Languages, asked by rajugovindanikkam, 4 months ago

ಓಝೋನ್ ಪದರದ ಬಗ್ಗೆ ಮಾಹಿತಿ​

Answers

Answered by rekhaningaraju81
1

Answer:

ಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿರುತ್ತದೆ[೧] . ಇದು ವಾಯುಮಂಡಲದಲ್ಲಿ ಓಝೋನ್ O3 ನ ಅನಿಲದ ಅಧಿಕ ಸಾಂದ್ರತೆಯನ್ನು ಹೊಂದಿದೆ. ಭೂಮಿಯ ಮೇಲೆ ಸುಮಾರು ೧೦ ಕಿ.ಮೀ ನಿಂದ ೪೦ ಕಿ.ಮೀ.ರ ವರೆಗೆ ವ್ಯಾಪಿಸಲ್ಪಟ್ಟಿರುವ ಈ ಪ್ರದೇಶವು ಸೂರ್ಯನಿಂದ ಬಿಡುಗಡೆಯಾಗುವ ನೇರಳಾತೀತ ವಿಕಿರಣಗಳನ್ನು ಹೀರಿಕೊಂಡು ಭೂಮಿಗೆ ಅವುಗಳು ತಲಪುವುದನ್ನು ತಡೆಗಟ್ಟುತ್ತವೆ. ಓಝೋನ್ ಪದರ ಹಾಗೂ ಅದಕ್ಕೆ ಆಗಿರುವ ಅನಾಹುತದ ಬಗ್ಗೆ ಜನರಲ್ಲಿ ಅರಿವಿಲ್ಲ. ಕೈಗಾರಿಕೋದ್ಯಮ, ಕಾರ್ಖಾನೆಗಳು ಹೆಚ್ಚುತ್ತಲೇ ಇವೆ. ಮತ್ತೊಂದೆಡೆ ಗೃಹೋಪಯೋಗಿ, ದಿನಬಳಕೆ ವಸ್ತುಗಳಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ಮತ್ತು ಪ್ರಮುಖವಾಗಿ ರೆಫ್ರೀಜರೇಟರ್ ಮತ್ತು ಏರ್ ಕಂಡೀಶನರ್‍ಗಳಲ್ಲಿ ಉಪಯೋಗದಿಂದ ಬಿಡುಗಡೆಯಾಗುವ ಕ್ಲೋರೋ ಫ್ಲೋರೋ ಕಾರ್ಬನ್ ಅನಿಲ ಓಝೋನ್ ಪದರಕ್ಕೆ ರಂಧ್ರ ಉಂಟು ಮಾಡುತ್ತಿದೆ. ಭೂಮಿಯ ಓಝೋನ್‌ ಪದರವೂ ಸೂರ್ಯನಿಂದ ಬರುವ ಕಾಸ್ಮಿಕ್‌ ಕಿರಣಗಳನ್ನು ಶೋಧಿಸಿ, ವಾತಾವರಣವನ್ನು ಶುದ್ಧವಾಗಿರಿಸಿದೆ. ಆದರೆ ಹೆಚ್ಚಿನ ಪ್ರಮಾಣದ ಕಾರ್ಬನ್‌ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಬಿಟ್ಟು ವಾಯುಮಂಡಲವನ್ನು ಮಲಿನಗೊಳಿಸುತ್ತಿದ್ದೇವೆ. ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್‌ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿರುತ್ತದೆ. ಮನುಷ್ಯನ ಅಟ್ಟಹಾಸಕ್ಕೆ ಬಲಿಯಾದ ವಸ್ತು-ವಿಶೇಷಗಳ ಪಟ್ಟಿಯಲ್ಲಿ ಓಝೋನ್ ಪದರವು ಒಂದು. ಅದಿಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಕ್ಕಿ ಕ್ಯಾನ್ಸರ್‌ನಂತಹ ಮಾರಕ ರೋಗಳಿಗೆ ಸಿಲುಕುತ್ತಿದ್ದವು ಎಂಬ ಆತಂಕವಿದೆ[೨].

Similar questions