India Languages, asked by kmccmeprog, 6 months ago

ಪರಬಂಧವನ್ನು ಬರೆಯಲಿ,
ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸುವ ಮಾರ್ವಗಳು ​

Answers

Answered by sushma8860
6

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಶಾಸನಬದ್ಧ ಅಧಿಕಾರಗಳನ್ನು ಹೊಂದಿರುವ ಪ್ರಾಧಿಕಾರವಾಗಿದೆ. ಕರ್ನಾಟಕದಲ್ಲಿ ಅಧಿಕೃತ ಆಡಳಿತ ಭಾಷೆಯಾಗಿ ಕನ್ನಡ ಅಳವಡಿಕೆ ಮತ್ತು ಬಳಕೆಯನ್ನು ಇದು ಪರಿಶೀಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಶಿಫಾರಸ್ಸು ಮಾಡುತ್ತದೆ. ಕನ್ನಡ ಭಾಷೆಯ ಪ್ರೋತ್ಸಾಹ ಹಾಗೂ ಬೆಳವಣಿಯ ಕಾರ್ಯಚಟುವಟಿಕೆಗಳನ್ನು ನಡೆಸುವ ಕಾರ್ಯವ್ಯಾಪ್ತಿ ಹೊಂದಿದೆ. 1 ನವಂಬರ್ 1995 ರಂದು ಪ್ರಾಧಿಕಾರ ರಚನೆಯಾಯಿತು.

ಭಾಷಾವಾರು ಪ್ರಾಂತ್ಯಗಳ ರಚನೆಯ ಹಲವು ಉದ್ದೇಶಗಳಲ್ಲಿ ಆಯಾಪ್ರದೇಶದಲ್ಲಿ ಪ್ರಧಾನವಾಗಿ ಬಳಕೆಯಲ್ಲಿರುವ ಭಾಷೆಯಲ್ಲಿ ಆಡಳಿತವನ್ನು ನಡೆಸುವುದು ಒಂದಾಗಿರುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ವಿಚಾರದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಹಿಂದೆ ಇದ್ದ ಸ್ಥಿತಿಯೇ ಆನಂತರದ ವರ್ಷಗಳಲ್ಲೂ ಮುಂದುವರೆಯಿತು. ಆಡಳಿತ ಎಂದರೆ ಇಂಗ್ಲಿಷ್ ಭಾಷೆಯಲ್ಲಿನ ಆಡಳಿತವೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ತಪ್ಪಿಸುವ ಪ್ರಯತ್ನವಾಗಿ ಸರ್ಕಾರವು 'ಕರ್ನಾಟಕ ರಾಜ್ಯಭಾಷಾ ಅಧಿನಿಯಮ 1963' ಎಂಬ ಒಂದು ಕಾಯಿದೆಯನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡವು ರಾಜ್ಯದ ಅಧಿಕೃತ ಆಡಳಿತ ಭಾಷೆಯೆಂದು ಘೋಷಿಸಿತು. ಆಡಳಿತ ಭಾಷೆ ಯಾಗಿ ಕನ್ನಡವನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ 1963ರಿಂದಲೇ ತನ್ನ ನೂರಾರು ಆದೇಶಗಳು, ಸುತ್ತೋಲೆಗಳು ಹಾಗೂ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಪ್ರಯತ್ನಶೀಲವಾಯಿತು.

ಕನ್ನಡ ಆಡಳಿತ ಭಾಷಾ ಇತಿಹಾಸದಲ್ಲಿ ಸಾಧನೆಯ ದೃಷ್ಟಿಯಿಂದ ಆಡಳಿತ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ಆಶಯದಿಂದ ಸರ್ಕಾರವು 10-02-1983ರಲ್ಲಿ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ 'ಕನ್ನಡ ಭಾಷಾ ಕಾವಲು ಸಮಿತಿ'ಯನ್ನು ಸ್ಥಾಪಿಸಿತು.

ಸಮಗ್ರ ಆಡಳಿತದಲ್ಲಿ ಸಂಪೂರ್ಣ ಕನ್ನಡವೆಂಬ ದಿಟ್ಟ ನಿಲುವನ್ನು ಕಾರ್ಯರೂಪಕ್ಕೆ ತರಲು ಪುನಪರಿವರ್ತನೆಯ ಜೊತೆಗೆ ಗಟ್ಟಿ ನಿಲುವಿನ ಬಿಗಿ ಕ್ರಮಗಳೂ ಅತ್ಯವಶ್ಯವೆಂಬುದನ್ನು ಪೂರ್ವಾನುಭವದಿಂದ ಮನಗಂಡ ಸರ್ಕಾರವು ಸರ್ಕಾರ ಹೊರಡಿಸಿರುವ ಆದೇಶಗಳು, ಸುತ್ತೋಲೆಗಳು ಹಾಗೂ ಕನ್ನಡ ಅನುಷ್ಠಾನ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಕನ್ನಡ ಕಾವಲು ಸಮಿತಿಯನ್ನು ಅಕ್ಟೋಬರ,1,1994ರಲ್ಲಿ 'ಕನ್ನಡ ಅಭಿವೃದ್ಧಿ ಪ್ರಾಧಿಕಾರ' ಎಂದು ಮರುನಾಮಕರಣಗೊಳಿಸಿತು.

ಈ ಅಧಿನಿಯಮದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಪ್ರಾಧಿಕಾರಕ್ಕೆ ಸ್ವಾಯತ್ತತೆ ಮತ್ತು ಶಾಸನಬದ್ಧ ಸ್ಥಾನಮಾನಗಳನ್ನು ನೀಡಲಾಗಿದೆ. ಈ ಸಚಿವಾಲಯದ ಕಾರ್ಯದರ್ಶಿಯು ಸರ್ಕಾರದ ಯಾವ ಕಚೇರಿಗಾದರೂ ಅನಿರೀಕ್ಷಿತವಾಗಿ ಭೇಟಿ ಕೊಟ್ಟು, ಯಾವ ಕಡತವನ್ನಾದರೂ ತೆಗದು ಅದರ ಭಾಷೆಯನ್ನು ಗುರುತಿಸಿ,ಕನ್ನಡದ ಬಳಕೆ ಆಗುತ್ತಿದೆಯೇ ಎನ್ನುವುದನ್ನು ನೋಡಬಹುದು ಎಂಬ ಆದೇಶವನ್ನು ಕೂಡಾ ಸರ್ಕಾರ ಹೊರಡಿಸಿದೆ.

Similar questions