India Languages, asked by deeksha8710, 5 months ago

- ನಾಮಪ್ರಕೃತಿಗಳ ವಿಧಗಳಾವುವು?​

Answers

Answered by ItzSweetyHere
7

ನಮಸ್ಕಾರ!

ನಿಮ್ಮ ಉತ್ತರ ಕೆಳಗೆ ಕೊಟ್ಟಿದ್ದೇನೆ

ಉತ್ತರ ಮತ್ತು ವಿವರಣೆ :

ನಾಮಪದಗಳು - Nouns  

ಯಾವುದೇ ವಸ್ತುವಿನ, ಪ್ರಾಣಿಯ, ಸ್ಥಳದ, ವ್ಯಕ್ತಿಯ ಹೆಸರನ್ನುತಿಳಿಸುವ ಪದ ನಾಮಪದ ಆಗಿರುತ್ತದೆ ಎಂಬ ವಿಷಯವನ್ನು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ.

ಈಗ ನಾಮಪದದ ವಿಚಾರವಾಗಿ ಇನ್ನಷ್ಟು ವಿವರವಾಗಿ ತಿಳಿಯೋಣ.

ನಾಮಪದದಲ್ಲಿಮುಖ್ಯವಾಗಿ 5 (ಐದು) ವಿಧಗಳಿವೆ.

1. ರೂಢನಾಮ

2. ಅಂಕಿತನಾಮ

3. ಸಮೂಹವಾಚಕ ನಾಮಪದ

4. ಲೋಹ-ವಾಚಕ ನಾಮಪದ

5. ಭಾವನಾಮ

(1) ರೂಢನಾಮ - Common Noun:

ರೂಢಿಯಲ್ಲಿ ಹೇಳುವ ಹೆಸರುಗಳನ್ನು ರೂಢನಾಮ ಎನ್ನುವರು.

ಉದಾಹರಣೆ:

ಬೆಕ್ಕು, ಬುಕ್ಕು, ಮೇಜು, ಪೆನ್ನು, ಚೆಂಡುಮೊದಲಾದವು.

2) ಅಂಕಿತನಾಮ - Proper Noun

ನಿರ್ದಿಷ್ಟ ಇಲ್ಲವೇ ಗೊತ್ತಾದ ರೀತಿಯ ಹೆಸರುಗಳನ್ನು ತಿಳಿಸುವ ಪದಗಳು ಅಂಕಿತನಾಮ ಎನಿಸುವುವು.

ಉದಾಹರಣೆ: ಶ್ರೀರಾಮ, ಹಿಮಾಲಯ, ಬೈಬಲ್, ಗಂಗಾನದಿ, ಲಾಲ್‌ಬಾಗ್‌ ಇತ್ಯಾದಿ.

ಮೇಲಿನ ನಾಮಪದಗಳು ನಮಗೆ ತಿಳಿದಿರುವ ಗೊತ್ತಾದ ಹೆಸರುಗಳನ್ನು ತಿಳಿಸುವುದರಿಂದ ಅಂಕಿತನಾಮ ಆಗಿವೆ.

(3) ಸಮೂಹವಾಚಕ ನಾಮಪದ - Collective Noun

ಹಲವು ನಾಮಪದಗಳು ಸಮೂಹವಾಚಕ ರೀತಿಯಲ್ಲಿ ಬರುವುದೂ ಉಂಟು. ಇಂತಹ ನಾಮಪದಗಳನ್ನು ಸಮೂಹವಾಚಕ ನಾಮಪದಗಳು ಎಂದು ಪರಿಗಣಿಸಲಾಗಿದೆ.

ಉದಾಹರಣೆ:

ಗೊಂಚಲು, ದನ, ಸೈನ್ಯ, ನೌಕಾದಳ, ಗುಂಪು ಇತ್ಯಾದಿ.

ಮೇಲಿನ ನಾಮಪದಗಳು ಸಮೂಹ ರೂಪದಲ್ಲಿರುವುದರಿಂದ ಸಮೂಹವಾಚಕ ನಾಮಪದಗಳೆನಿಸಿವೆ.

(4) ಲೋಹವಾಚಕ ನಾಮಪದ - Material Noun

ಲೋಹಗಳ ಹೆಸರನ್ನು ತಿಳಿಸುವ ನಾಮಪದಗಳನ್ನು ಲೋಹವಾಚಕ ನಾಮಪದಗಳು ಎನ್ನಲಾಗುವುದು.

ಉದಾಹರಣೆ:

ಚಿನ್ನದ ಸರ, ಬೆಳ್ಳಿಯ ಲೋಟ, ಸ್ಟೀಲ್ ಪಾತ್ರೆ ಇತ್ಯಾದಿ. ಮೇಲಿನ ಪದಗಳಲ್ಲಿ ಬರುವ ಚಿನ್ನ, ಬೆಳ್ಳಿ, ಕಬ್ಬಿಣ ಇವು ಲೋಹವಾಚಕ ಎನಿಸಿರುವುದರಿಂದ ಲೋಹವಾಚಕ ನಾಮಪದಗಳಾಗಿವೆ

(5) ಭಾವನಾಮ - Abstract Noun

ಭಾವನೆ (feeling)ಯ ಅಂತರ್ಗತವಾಗಿ ಬರುವ ನಾಮಪದಗಳೆಲ್ಲವನ್ನೂ ಭಾವನಾಮ ಎನ್ನುವರು.

ಉದಾಹರಣೆ:

ಯೌವನ, ಮುಪ್ಪು, ಕ್ರೌರ್ಯ, ಕೇಡು, ದೇವರು, ಧೈರ್ಯ, ದುಃಖ ಮೊದಲಾದವು.

ಭಾವನಾಮದ ಹೆಸರುಗಳನ್ನು ಕಣ್ಣಿನಿಂದ ನೋಡಲು ಆಗುವುದಿಲ್ಲ, ಕೈಗಳಿಂದ ಮುಟ್ಟಲೂ ಸಾಧ್ಯವಿಲ್ಲ. ಕೇವಲ ಭಾವನೆಯ ರೂಪದಲ್ಲಿ ಮಾತ್ರ ಗ್ರಹಿಸಬಹುದು. ಆದ್ದರಿಂದಲೇ ಇವನ್ನು ಭಾವನಾಮ ಎನ್ನಲಾಗುವುದು.

Thanks!

ಧನ್ಯವಾದಗಳು!

ನಿಮಗೆ ನನ್ನ ಉತ್ತರ ಸರಿ ಅನಿಸಿದ್ದರೆ ದಯವಿಟ್ಟು ಥ್ಯಾಂಕ್ಸ್ ಕೊಡಿ  !

Similar questions