ಜಾತಿಯತೆ ದೇಶದ ಪ್ರಗತಿಗೆ ಮಾರಕ
ಈ ಕುರಿತು ಒಂದು ಪ್ರಭಂದ ಬರೆಯಿರಿ.
Answers
Answer:
ಭಾರತೀಯ ಜಾತಿ ಪದ್ದತಿ ಯು ಸಾಮಾಜಿಕ ಶ್ರೇಣೀಕರಣವನ್ನು ವಿವರಿಸುತ್ತದೆ.ಅದಲ್ಲದೇ ಸಾಮಾಜಿಕ ನಿರ್ಭಂಧಗಳಡಿ ಭಾರತ ಉಪಖಂಡದ ಸಾವಿರಾರು ಪಂಗಡದ ಪ್ರವರ್ಗಗಳನ್ನು, ವಂಶವಾಹಿನಿಗಳ ಸಮೂಹವನ್ನು ವ್ಯಾಖ್ಯಾನಿಸುತ್ತದೆ.ಇದನ್ನೇ ಜಾತಿ ಗಳು ಅಥವಾ ಕೋಮು ಗಳೆಂದು ಹೇಳಲಾಗುತ್ತದೆ. ಈ ಜಾತಿಯಲ್ಲಿಯೇ ಅನ್ಯಗೋತ್ರ ಗುಂಪುಗಳ ಅಸ್ತಿತ್ವ ಇದೆ,ಇದನ್ನು ಗೋತ್ರಗಳು,ವಂಶವಾಹಿನಿ ಅಥವಾ ಕುಟುಂಬದ ಕುಲಗೋತ್ರವನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಲಾಗುತ್ತದೆ. ಹಲವಾರು ಉಪ-ಜಾತಿಗಳಲ್ಲಿ ಶಾಕಾದ್ವಿಪಿ,ಕೂಡಾ ಒಂದು,ಒಂದೇ ಗೋತ್ರದಲ್ಲಿ ವಿವಾಹ ಅನುಮತಿಸಿದ್ದರೂ ಅದನ್ನು ಪರ್ಯಾಯ ನಿರ್ಭಂದಿತ ಸಗೋತ್ರ ವಿವಾಹಕ್ಕೆ ಪರಿಗಣಿಸಲಾಗುತ್ತದೆ.(ಉದಾಹರಣೆಗೆ ಅಡ್ಡಹೆಸರುಗಳು ಒಂದೇ ಆಗಿದ್ದರೆ ಅಲ್ಲಿ ವಿವಾಹ ನಿಷಿದ್ದದ ನಿಯಮ ಉಂಟು)
ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವ ಇತರ ಮುಸ್ಲಿಮರ ಕೆಲವು ಗುಂಪುಗಳು ಮತ್ತು ಕ್ರಿಶ್ಚನ್ ರು ಕೂಡಾ ಇದೇ ತೆರನಾದ ಗುಂಪು ಪ್ರಭೇದವನ್ನು ಹೊಂದಿರುವುದು ಭಾರತದ ಉಪಖಂಡದಲ್ಲಿ ಕಾಣುತ್ತದೆ. ಆದರೆ ದೊಡ್ಡ ದೊಡ್ಡ ನಗರಗಳಲ್ಲಿ ಜಾತಿಯ ನಿರ್ಭಂಧಗಳು ಅಷ್ಟೊಂದು ಬಿಗಿಯಾಗಿಲ್ಲ;ಇದು ಗ್ರಾಮೀಣ ವಲಯದಲ್ಲಿ ಕಟ್ಟು ನಿಟ್ಟಿನ ಕ್ರಮದಲ್ಲಿ ಚಾಲ್ತಿಯಲ್ಲಿದೆ.ಆದರೆ ಭಾರತದ 72% ರಷ್ಟು ಜನಸಂಖ್ಯೆಯು ಹಳ್ಳಿಗಳಲ್ಲಿ ವಾಸಿಸುತ್ತದೆ. ಹಿಂದು ಧರ್ಮದ ಯಾವುದೇ ಗ್ರಂಥವು ಜಾತಿ-ಆಧಾರದ ಭೇದಭಾವವನ್ನು ಅನುಮೋದಿಸುವುದಿಲ್ಲ,ಅಲ್ಲದೇ ಭಾರತದ ಸಂವಿಧಾನ ಕೂಡಾ ಜಾತಿ-ಆಧಾರದ ಭೇದಭಾವವನ್ನು ಪುಷ್ಟಿಕರಿಸಲಾರದು,ಅದು ಸಮಗ್ರ ಜಾತ್ಯಾತೀತತೆಯನ್ನು ಪ್ರಜಾಪ್ರಭುತ್ವದ ತತ್ವಗಳ ಮೇಲೆ ದೇಶದ ಆಡಳಿತಕ್ಕೆ ಮಾರ್ಗದರ್ಶಿಯಾಗಿದೆ. ಏನೇಯಾದರೂ ಆಧುನಿಕ ಭಾರತದಲ್ಲಿ ಜಾತಿ ಪದ್ದತಿಯು ವಿವಿಧ ಸ್ತರಗಳಲ್ಲಿ ಮುಂದುವರೆದಿದೆ ಎನ್ನಬಹುದು;ಯಾಕೆಂದರೆ ಇದಕ್ಕೆ ರಾಜಕೀಯ ಕಾರಣಗಳು ಮತ್ತು ಸಾಮಾಜಿಕ ಗ್ರಹಿಕೆಗಳು ಮತ್ತು ನಡವಳಿಕೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.
Explanation:
ದಯವಿಟ್ಟು ಉತ್ತರವನ್ನು ಬುದ್ದಿವಂತ ಎಂದು ಗುರುತಿಸಿ..
please mark the answer as brainliest