History, asked by amithstar15, 4 months ago

೫. ಸೀತೆ ಯಾರಲ್ಲಿ ತಪ್ಪಿಲ್ಲವೆಂದು ಹೇಳುತ್ತಾಳೆ?
ಲೆಡುಕಾಳೆ?​

Answers

Answered by kavita8484057585
0

ಪದ್ಯ ಭಾಗ 4

ಹಲುಬಿದಳ್ ಕಲ್ಮರಂ ಕರಗುವಂತೆ

ಕವಿ ಲಕ್ಷ್ಮೀಶ : ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ದೇವನೂರಿನವನು. ಉಪಮಾಲೋಲ, ಕವಿಚೂತವನ ಚೈತ್ರ , ಎಂಬ ಬಿರುದುಗಳಿವೆ. ವೈಶಂಪಾಯನ ಋಷಿಯ ಶಿಷ್ಯನಾದ ಜೈಮಿನಿ ಮುನಿಯು ರಚಿಸಿದ ಜೈಮಿನಿಭಾರತವನ್ನು ಕನ್ನಡದಲ್ಲಿ ರಚಿಸಿದ್ದಾನೆ.

ಸಾರಾಂಶ : ಜೈಮುನಿ ಮಹರ್ಷಿಯು ಜನಮೇಜಯನನ್ನು ಕುರಿತು ಹೇಳುತ್ತಿದ್ದಾನೆ. ಅರಸ ಕೇಳು ಲಕ್ಷ್ಮಣನು ಸೀತೆಯನ್ನು ವನಕ್ಕೆ ಕರೆದು ಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ರಥದ ಮೇಲಿದ್ದ ಪತಾಕೆಯೂ ಶ್ರೀರಾಮನು ತನ್ನ ಪತ್ನಿಯನ್ನು ತೊರೆಯುವುದು ಸರಿಯಾದ ನಿರ್ಣಯವಲ್ಲ ಎಂದು ತಲೆಗೊಡವುತ್ತಿದೆಯೇನೋ ಎಂಬಂತೆ ಅತ್ತಿತ್ತ ಆಡುತ್ತಿತ್ತು. ಜನರೂ ಕೂಡ ಇದು ಪರಮ ದಾರುಣಸಂಗತಿ ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. ಲಕ್ಷ್ಮಣನು ವೇಗವಾಗಿ ರಥವನ್ನು ಗಂಗಾನದೀತೀರಕ್ಕೆ ತಂದನು. ಸೀತೆಯು ರಥದಿಂದ ಇಳಿದು ಗಂಗೆಗೆ ನಮಿಸಿದಳು. ನಂತರ ಲಕ್ಷ್ಮಣ ಹಾಗೂ ಸೀತೆ ನಾವಿಕರೊಡನೆ ನಾವೆಯಲ್ಲಿ ಕುಳಿತು ಗಂಗೆಯನ್ನು ದಾಟಿದರು. ಸೀತೆಯನ್ನು ಕಾಡಿನಲ್ಲಿ ಬಿಡುವ ವಿಚಾರವಾಗಿ ಲಕ್ಷ್ಮಣ ಬಹಳವಾಗಿ ಮರುಗುತ್ತಿದ್ದನು.ಹೀಗೆ ಮುಂದೆ ಭೀಕರವಾದ , ಕಠಿಣತಮವಾದ , ದುರ್ಗಮವಾದ ಕಾಡಿನ ದಾರಿಯಲ್ಲಿ ಸಾಗುತ್ತಾ, ಇರಲು ಸದಾ ಸೂರ್ಯ, ಚಂದ್ರ ,ಅಗ್ನಿ, ಇಂದ್ರ , ವಿಷ್ಣು, ಶಿವ ಮೊದಲಾದವರ ಆವಾಸವಾಗಿದ್ದ, ಸೋಮಲತೆಗಳು , ಮೃದುವಾದ ಹುಲ್ಲುಗಳು, ಪೊದೆಗಳು, ಸುಂದರ ಕೊಳಗಳು, ಅಲ್ಲದೆ ಹವಳದಿಂದ ಕೂಡಿದ ಕಡಲಿನಂತೆ , ಸ್ವರ್ಗದಂತೆ, ಹಾಲ್ಗಡಲಿನಂತೆ , ಕೈಲಾಸಭೂಮಿಯಂತೆ ಕಂಗೊಳಿಸುತ್ತಿದ್ದ ಮಹಾ ಅಡವಿಯು ಇಂದು ನರಿ, ಸಿಂಹ ,ಕೋತಿ, ಕರಡಿ , ಹುಲಿ, ನವಿಲು ಮೊದಲಾದ ಪಶುಪಕ್ಷಿಗಳಿಂದ , ಬೃಹತ್ ವೃಕ್ಷಗಳಿಂದ ಮುಳ್ಳುಗಳಿಂದ ಕೂಡಿದ ಘೋರ ಅರಣ್ಯವಾಗಿ ತೋರುತ್ತಿರಲು ಸೀತೆಯು “ಲಕ್ಷ್ಮಣಾ ಮುನಿಗಳ ತಪೋಭೂಮಿಗಳೆಲ್ಲಿ? , ಕುಟೀರಗೆಳೆಲ್ಲಿ? , ವೇದಘೋಷಗಳೆಲ್ಲಿ? ಹೋಮಧೂಮಗಳೆಲ್ಲಿ?, ನನ್ನನ್ನೇಕೆ ಈ ಘೋರ ಅರಣ್ಯಕ್ಕೆ ಕರೆತಂದೆ” ಎಂದು ಕೇಳಿದಳು.

Answered by pratikpotadar124
0

Answer:

ಸೀತೆಯು ಕರುಣಾಳುವಾದ ರಾಘವನಲ್ಲಿ ತಪ್ಪಿಲ್ಲವೆಂದು ಹೇಳುತ್ತಾಳೆ.

Similar questions