Music, asked by abhishekmantoor5, 5 months ago

ಪಂಡಿತ ಬಸವರಾಜ ರಾಜಗುರು ಅವರ ಬಗ್ಗೆ ಬರೆಯಿರಿ​

Answers

Answered by shreyas30259799
0

Answer:

ಸುರ ಕಾ ಬಾದಶಾಹ ಎಂದು ಖ್ಯಾತರಾದ ಬಸವರಾಜ ಮಹಾಂತಸ್ವಾಮಿ ರಾಜಗುರು ಇವರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲಿ ೧೯೧೭ ಆಗಸ್ಟ್ ೨೪ರಂದು ಜನಿಸಿದರು. ಇವರ ತಂದೆ ಮಹಾಂತಸ್ವಾಮಿಗಳು ತಂಜಾವೂರಿನಲ್ಲಿ ಕರ್ನಾಟಕ ಸಂಗೀತ ಕಲಿತವರು.

ಚಿಕ್ಕಂದಿನಂದಲೂ ಬಸವರಾಜರು ರಂಗಗೀತೆಗಳಲ್ಲಿ ಒಲವು ತೋರಿಸುತ್ತಿದ್ದರು. ನಾಟಕ ಕಂಪನಿಗಳಿಗೆ ಹೋಗಿ, ಅಲ್ಲಿ ರಂಗಗೀತೆಗಳನ್ನು ಹಾಡಲು ಅವಕಾಶ ಪಡೆಯಲು ಪ್ರಯತ್ನಪಡುತ್ತಿದ್ದರು. ಇದನ್ನು ಗಮನಿಸಿದ ಇವರ ತಂದೆ ಬಸವರಾಜರನ್ನು ಸವಣೂರ ವಾಮನರಾಯರ ಕಂಪನಿಯಲ್ಲಿ ಸೇರಿಸಿದರು. ಬಸವರಾಜರ ತಂದೆ, ಇವರ ೧೩ನೆಯ ವಯಸ್ಸಿನಲ್ಲಿ ತೀರಿಕೊಂಡರು.

ಸಂಗೀತ ಶಿಕ್ಷಣ

ಬಸವರಾಜರನ್ನು ಅವರ ಕಕ್ಕ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿರುವ ಸಂಸ್ಕೃತ ಪಾಠಶಾಲೆಗೆ ಸೇರಿಸಿದರು. ಗದಗಿನ ಅಂಧ ಗಾನಯೋಗಿ ಪಂಚಾಕ್ಷರಿ ಗವಾಯಿ ಅಲ್ಲಿ ಬಂದಾಗ ಇವರ ಹಾಡುಗಾರಿಕೆ ಕೇಳಿ, ಇವರನ್ನು ಗದುಗಿಗೆ ಕರೆದುಕೊಂಡು ಹೋದರು.

ಬಸವರಾಜರು ಗಾನಯೋಗಿಗಳ ಆಶ್ರಮದಲ್ಲಿ ಕಠಿಣವಾದ ಸಂಗೀತ ಸಾಧನೆ ಮಾಡಿದರು. ೧೯೩೬ರಲ್ಲಿ ವಿಜಯನಗರ ಸಾಮ್ರಾಜ್ಯದ ೬ನೆಯ ಶತಮಾನೋತ್ಸವವನ್ನು ಹಂಪಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಬಸವರಾಜ ರಾಜಗುರು ತಮ್ಮ ಪ್ರಥಮ ಕಚೇರಿಯನ್ನು ನೀಡಿದರು. ಗುರು ಪಂಚಾಕ್ಷರಿಯವರೆ ಸ್ವತಃ ತಬಲಾ ಸಾಥ್ ನೀಡಿದರು!

ಆ ಸಮಯದಲ್ಲಿ ಇವರು ಹಾಡಿದ ರಾಗ ಬಾಗೇಶ್ರೀ ಹಾಗು ನಿಜಗುಣಿ ಶಿವಯೋಗಿಗಳ ವಚನಗಳನ್ನು ಕೇಳಿದ ಜನಸ್ತೋಮ ಮಂತ್ರಮುಗ್ಧವಾಯಿತು. ಹಿಂದುಸ್ತಾನಿ ಸಂಗೀತದ ಹೊಸ ತಾರೆಯೊಂದು ಕರ್ನಾಟಕದ ಬಾನಿನಲ್ಲಿ ಉದಯಿಸಿತ್ತು.

೧೯೩೬ರಿಂದ ೧೯೪೩ರವರೆಗೆ ಮುಂಬಯಿ ಆಕಾಶವಾಣಿ ಹಾಗು ಎಚ್.ಎಮ್.ವಿ. ಕಂಪನಿಯವರಿಗಾಗಿ ಬಸವರಾಜ ರಾಜಗುರು ಅನೇಕ ರಾಗಗಳನ್ನು ಹಾಡಿದರು. ೧೯೪೪ರಲ್ಲಿ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ಬಳಿಕ ಬಸವರಾಜರು ಮುಂಬಯಿಗೆ ಬಂದು ಸವಾಯಿ ಗಂಧರ್ವರ ಶಿಷ್ಯವೃತ್ತಿ ಸ್ವೀಕರಿಸಿದರು. ಸವಾಯಿ ಗಂಧರ್ವರು ಅನತಿಕಾಲದಲ್ಲಿ ಅರ್ಧಾಂಗವಾಯು ಪೀಡಿತರಾಗಿದ್ದರಿಂದ, ತಮ್ಮ ಶಿಷ್ಯ ಬಸವರಾಜರನ್ನು ಸುರೇಶಬಾಬು ಮಾನೆ ಎನ್ನುವ ಗವಾಯಿಗಳಿಗೆ ಒಪ್ಪಿಸಿದರು.

ಕೆಲ ಸಮಯದ ನಂತರ ಬಸವರಾಜ ರಾಜಗುರು ಸದ್ಯದ ಪಾಕಿಸ್ತಾನ ಭಾಗದಲ್ಲಿದ್ದ, ಕಿರಾಣಾ ಘರಾಣಾದ ಪ್ರಸಿದ್ಧ ಗಾಯಕರಾದ ಹಾಗು ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ಗುರುವಾದ ಉಸ್ತಾದ ವಹೀದಖಾನರಲ್ಲಿ ತೆರಳಿ ತಮ್ಮ ಶಿಕ್ಷಣ ಮುಂದುವರಿಸಿದರು. ಅಲ್ಲಿಂದ ಉಸ್ತಾದ ಲತೀಫ ಖಾನ‍ರಲ್ಲಿ ೬ ತಿಂಗಳುವರೆಗೆ ಕಲಿತರು. ಇನಾಯತುಲ್ಲಾ ಖಾನ, ರೋಶನ ಅಲಿ ಹಾಗು ಗೋವಿಂದರಾವ ಟೇಂಬೆಯವರಲ್ಲಿ ಸಹ ಸಂಗೀತಾಭ್ಯಾಸ ಮಾಡಿದ ಬಸವರಾಜ ರಾಜಗುರು ಹಿಂದುಸ್ತಾನಿ ಸಂಗೀತದ ಮೂರು ಪ್ರಸಿದ್ಧ ಘರಾಣಾಗಳಲ್ಲಿ ( ಕಿರಾಣಾ ಘರಾಣಾ,ಗ್ವಾಲಿಯರ ಘರಾಣಾ ಹಾಗು ಪತಿಯಾಳಾ ಘರಾಣಾ ) ಪ್ರಭುತ್ವ ಸ್ಥಾಪಿಸಿದರು.

ಮೃತ್ಯು ಪರೀಕ್ಷೆ

೧೯೪೭ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ರಾಜಗುರು ಕರಾಚಿಯಲ್ಲಿದ್ದರು. ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ನರಮೇಧದಿಂದ ತಪ್ಪಿಸಿಕೊಳ್ಳಲು, ಉಸ್ತಾದ ಲತೀಫ ಖಾನರ ಸಲಹೆಯಂತೆ, ರಾಜಗುರು ಭಾರತಕ್ಕೆ ತೆರಳುವ ಟ್ರೇನ್ ಒಂದನ್ನು ಹತ್ತಿ ಪಲಾಯನ ಮಾಡಬೇಕಾಯಿತು. ಭಾರತದ ಗಡಿಗಿಂತ ಸ್ವಲ್ಪ ಮೊದಲು ಆ ಟ್ರೇನ್ ನಿಲ್ಲಿಸಿ, ಪಾಕಿಸ್ತಾನಿಗಳು ಹಿಂದುಗಳ ಹತ್ಯೆ ಪ್ರಾರಂಭ ಮಾಡಿದಾಗ, ರಾಜಗುರು ಟ್ರೇನಿನ ಬೋಗಿಯ ಕೆಳಗೆ ಅಡಗಿಕೊಂಡು ದಿಲ್ಲಿಯವರೆಗೆ ಬಂದರು. ದಿಲ್ಲಿಯಿಂದ ಪುಣೆಗೆ ಬಂದ ರಾಜಗುರು ತಮ್ಮ ಸಂಗೀತ ವೃತ್ತಿ ಮುಂದುವರಿಸುತ್ತಿದ್ದಂತೆಯೆ ಮತ್ತೊಂದು ಗಂಡಾಂತರ ಎದುರಾಯಿತು.

Similar questions