India Languages, asked by Pranavbhandarkar82, 5 months ago

ಮೂಢನಂಬಿಕೆಗಳ ಬಗ್ಗೆ ಪ್ರಬಂಧ ಬರೆಯಿರಿ​

Answers

Answered by Anonymous
11

ಮೂಢನಂಬಿಕೆಗಳು' ಎಲ್ಲ ಕಾಲದ ಎಲ್ಲ ದೇಶದ ಎಲ್ಲ ಜನಾಂಗಗಳಲ್ಲುಂಟಾದರೂ, ಈ ದಿನ ಭಾರತೀಯರಿಗೆ ಮಾತ್ರ ಮೂಢನಂಬಿಕೆ ಹೆಚ್ಚೆಂದೂ ವಾದಿಸುವವರನ್ನು ನಾವು ಕಾಣುತ್ತಿದ್ದೇವೆ. ಭಾರತೀಯರು ಮೂಢನಂಬಿಕೆಗಳಿಂದಲೇ ಹಿಂದೆ ಉಳಿದಿದ್ದಾರೆ ಎಂಬ ಮಾತು ಆಗಗ್ಗೆ ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿಚಾರಾರ್ಹವಾಗಿದೆ. ಯಾರು ದೇವರನ್ನು ಕುರಿತು ಪೂಜೆ, ಹರಕೆ, ಇತ್ಯಾದಿಗಳನ್ನು ಮಾಡುತ್ತಿರುವರೋ ಅವರ ಕ್ರಿಯೆಗಳಿಗೆಲ್ಲ ಮೂಢನಂಬಿಕೆಗಳೇ ಕಾರಣವೆಂದೂ, ದೇವರ ಅಸ್ತಿತ್ವವನ್ನು ಒಪ್ಪದವರೆಲ್ಲ ಮೂಢನಂಬಿಕೆಯ ಸರಹದ್ದಿನಿಂದ ದೂರ ಸರಿದಿರುವ ಪ್ರಜ್ಞಾವಂತ ವೈಚಾರಿಕ ಮನುಷ್ಯರೆಂದೂ ಅಬ್ಬರಿಸಿ ಹೇಳುವುದುಂಟು. ಆದರೆ ಯಾವ ನಂಬಿಕೆಗಳಲ್ಲಿ ಮೌಢ್ಯತೆ ತುಂಬಿರುವುದೋ ಅದನ್ನು ಮೂಢನಂಬಿಕೆಗಳೆಂದು ಕರೆಯುವುದು ಯುಕ್ತ.

ಒಂದು ದೃಷ್ಟಿಯಲ್ಲಿ ಆಳವಾಗಿ ಆಲೋಚನೆ ಮಾಡಿದರೆ ನಮ್ಮ ದೇಶದ ಸಿದ್ಧಾಂತಕ್ಕೂ, ಮೂಢನಂಬಿಕೆಗೂ ನೇರ ಸಂಬಂಧವಿಲ್ಲವೆನ್ನಬಹುದು. ಭಗವಂತನು ಸರ್ವಶಕ್ತ ಎಂದು ನಮ್ಮ ತತ್ವಗಳು ಹೇಳಿದ್ದನ್ನು ನಿಲ್ಲಿಸಿ ಹೇಗಿದ್ದರೂ ದೇವರು ಸರ್ವಶಕ್ತನಾಗಿರುವುದರಿಂದ ಓದದೆ ಪಾಸಾಗಲಿ, ಕೆಲಸ ಮಾಡದೆ ಬಡ್ತಿ ದೊರೆಯಲಿ, ದುಡಿಯದೆ ಹಣ ಬರಲಿ ಎಂಬ ಕೆಟ್ಟ ಸ್ವಾರ್ಥಪರ ದೃಷ್ಟಿಯಿಂದ ದೇವರನ್ನು ಪೂಜಿಸಲಾರಂಬಿಸಿದರು. ಒಂದೊಂದರ ಪರಿಹಾರಕ್ಕೆ ಒಂದೊಂದು ಬಗೆಯ ಪೂಜೆ ಮಾಡಬೇಕೆಂದು ಆಯಾ ದೇಶ-ಜನಾಂಗಗಳಲ್ಲಿ ಒಂದೊಂದು ಬಗೆಯಾಗಿ ನಿರ್ಣಯವಾಯಿತು. ಮಾನವನು ಜೀವನದಲ್ಲಿ ಅವನಷ್ಟೇ ಪ್ರಾಮಾಣಿಕವಾಗಿದ್ದರೂ ಹಲವು ಪ್ರಸಂಗಗಳಲ್ಲಿ ಅವನು ಸೋಲಬಹುದು. ಅಂತಹ ಸಂದರ್ಭದಲ್ಲಿ ಅವನು ಹುಚ್ಚನಾಗದಿರಬೇಕಾದರೆ ತನ್ನ ಅಭಿವೃದ್ಧಿಗೆ ದೈವಚಿತ್ತವಿಲ್ಲವೆಂದು ಸಮಾಧಾನಪಟ್ಟು ಕರ್ತವ್ಯಪರಾಜ್ಮಖನಾಗಿ ಬಾಳದಿರುವ ಆತ್ಮಶಕ್ತಿಯನ್ನು ಬೆಳೆಸಿಕೊಳ್ಳುವಂತೆ ನಮ್ಮ ಧರ್ಮ ನಮಗೆ ಉಪದೇಶಿಸಿದೆ. "ಕರ್ತವ್ಯವನ್ನು ಮಾಡು, ಫಲವನ್ನು ನಿರೀಕ್ಷಿಸದಿರು" ಎಂದು ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದನು. ಆದರೆ ತಿಳಿಯದೆ ಜನ ದೇವರ-ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗಳನ್ನು ಬೆಳೆಸಿಕೊಂಡು ತೊಳಲಾಡುತ್ತಿದ್ದಾರೆ. ಮೂಢನಂಬಿಕೆಗಳಿಗೆ ಧರ್ಮ-ದೇವರು ಕಾರಣವಲ್ಲ. ಮಾನವನ ಸ್ವಾರ್ಥ ಕಾರಣ.

hope it helps ...........★

Similar questions