ಅಲಂಕಾರಗಳು ಚಿತ್ರ ಕವಿತ್ವ ಉದಾಹರಣೆಗಳು
Answers
Explanation:
ಅಲಂಕಾರಗಳು
ಉಪಮಾಲಂಕಾರ
ಉದಾ ೧ : ಮಗುವಿನ ಮುಖವು ಚಂದ್ರನಂತೆ ಮನೋಹರವಾಗಿವೆ ಉಪಮೇಯ = ಮಗುವಿನ ಮುಖ ಉಪಮಾನ = ಚಂದ್ರ ಸಮಾನಧರ್ಮ = ಮನೋಹರ ಉಪಮಾವಾಚಕ = ಅಂತೆ ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನಿಗೆ ಸಮಾನವಾಗಿ ( ಸಾದೃಶ್ಯ) ಹೋಲಿಸಲಾಗಿದೆ. ಆದ್ದರಿಂದ ಇದು ಉಪಮಾಲಂಕಾರ. ಇಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಮತ್ತು ಉಪಮಾವಾಚಕ - ಈ ನಾಲ್ಕೂ ಅಂಶಗಳಿರುವುದರಿಂದ ಇದು ಪೂರ್ಣ ಉಪಮಾಲಂಕಾರ ಎಂದೆನ್ನಿಸಿಕೊಳ್ಳುತ್ತದೆ
ರೂಪಕಾಲಂಕಾರ
ಉದಾಹರಣೆ :
ಎನ್ನ ಬಗೆಗನಿವಾರ್ಯವೀ ಶೊಕದುಲ್ಕೆ
ಅರ್ಥಾಂತರನ್ಯಾಸಾಲಂಕಾರ
ಉದಾ : ಅಮೀರನು ಉಂಡಮನೆಗೆ ಕೇಡು ಬಗೆದ . ಕೃತಘ್ನರು ಏನನ್ನೂ ಮಾಡುವರು. ಅಮೀರನು ಉಂಡ ಮನೆಗೆ ಕೇಡು ಬಗೆದ. ( ವಿಶೇಷ ವಾಕ್ಯ ) ಕೃತಘ್ನರು ಏನನ್ನೂ ಮಾಡುವರು. ( ಸಾಮಾನ್ಯ ವಾಕ್ಯ ) ಸಮನ್ವಯ : ಇಲ್ಲಿ ಉಪಮಾನವಾದ "ಕೃತಘ್ನರು ಏನನ್ನೂ ಮಾಡುವರು." ( ಸಾಮಾನ್ಯ ವಾಕ್ಯ ) , ಅಮೀರನು ಉಂಡ ಮನೆಗೆ ಕೇಡು ಬಗೆದ ( ವಿಶೇಷ ವಾಕ್ಯ ) ಎಂಬ ಮಾತನ್ನು ಸಮರ್ಥಿಸಲಾಗಿದೆ ಆದ್ದರಿಂದ ಇ ದೂ ಅರ್ಥಾಂತರನ್ಯಾಸಾಲಂಕಾರ
ದೃಷ್ಟಾಂತ ಅಲಂಕಾರ
ಎರಡು ಬೇರೆಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ ಉದಾ : ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ ಉಪಮೇಯ = ತಾಯಿ ಉಪಮಾನ = ಉಪ್ಪು ಉಪಮವಾಚಕ = ಗಿಂತ ಸಮನ್ವಯ : ಇಲ್ಲಿ ಉಪಮೇಯವಾದ ತಾಯಿಗಿಂತ ಬಂಧುವಿಲ್ಲ ಹಾಗೂ ಉಪಮಾನವಾದ ಉಪ್ಪಿಗಿಂತ ರುಚಿಯಿಲ್ಲ ಎರಡೂ ಬಿಂಬ ಪ್ರತಿಬಿಂಬ ಭಾವದಂತೆ ಇರುವುದುರಿಂದ ಇದು ದೃಷ್ಟಾಂತ ಅಲಂಕಾರ
ಶ್ಲೇಷಾಲಂಕಾರ
ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ ಉದಾ : ಕುರುಕುಲಾರ್ಕನು ಅರ್ಕನು ಅಸ್ತಂಗತರಾದರು. ಉಪಮೇಯ = ಕುರುಕುಲಾರ್ಕನು ( ಕುರು ವಂಶಕ್ಕೆ ಸೂರ್ಯನಂತಿರುವವನು = ದುರ್ಯೋಧನ ) ಉಪಮಾನ = ಅರ್ಕ ( ಸೂರ್ಯ ) ಸಮನ್ವಯ : ಬೇರೆಬೇರೆ ಅರ್ಥ ಹೊಂದಿದ ಅರ್ಕ ಎಂಬ ಪದ ಉಪಮೇಯಕ್ಕೆ ( ಸುಯೋಧನ ) ಉಪಮಾನವಾದ ( ಸೂರ್ಯ ) ಬೇರೆಬೇರೆ ಅರ್ಥ ನೀಡುತ್ತದೆ. ಆದ್ದರಿಂದ ಇದು ಶ್ಲೇಷಾಲಂಕಾರ
ಚಿತ್ರ ಕವಿತ್ವ
ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ
ಉದಾ:
ನನ್ದನ ನನ್ದನ ನುನ್ನೊನ್ದನ
ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ