India Languages, asked by ubm4459, 4 months ago

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.​

Answers

Answered by 2003karthikdevadiga
3

Answer:

ಈ ವಾಕ್ಯವನ್ನು ಕನಕದಾಸರ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ಕೀರ್ತನೆಯಿಂದ ಆರಿಸಿಕೊಳ್ಳಲಾಗಿದೆ. ಬೆಟ್ಟದ ತುದಿಯಲ್ಲಿ ಹುಟ್ಟಿದ ಮರಕ್ಕೆ ನೀರೆರೆದವರು ಯಾರು? ಅಡವಿಯೊಳಗೆ ಇರುವ ಮೃಗಪಕ್ಷಿಗಳಿಗೆ ಆಹಾರವನ್ನು ನೀಡುತ್ತಿರುವವರು ಯಾರು? ನವಿಲು , ಹವಳ, ಗಿಳಿಗಳಿಗೆ ಬಣ್ಣವನ್ನು ಹಚ್ಚಿದವರು ಯಾರು? ಕಲ್ಲಿನಲ್ಲಿ ಅಡಗಿಕುಳಿತ ಕಪ್ಪೆಗೆ ಅಲ್ಲಿಯೇ ಆಹಾರ ನೀಡಿದವರಾರು? ಹೆತ್ತ ಅಮ್ಮನಂತೆ ಆದಿಕೇಶವನೇ ಎಲ್ಲರನ್ನೂ ಸಲಹುವನು ಸಂಶಯಪಡಬೇಡ ಎಂದು ಕನಕದಾಸರು ನೊಂದ ಮನಸ್ಸಿಗೆ ಸಮಾಧಾನ ಹೇಳುತ್ತಾರೆ

Similar questions