India Languages, asked by vishalmrvishalmr560, 4 months ago

೨. ದೊಂಬರಾಟದ ಹುಡುಗಿ ಯಾವ ಸಾಹಸ ಮಾಡುತ್ತಿದ್ದಳು?​

Answers

Answered by prabinkumarbehera
9

Explanation:

ದೊಂಬರು ಕರ್ನಾಟಕದ ಪ್ರಮುಖ ಅಲೆಮಾರಿ ಸಮುದಾಯ.ಉತ್ತರ ಕರ್ನಾಟಕದಲ್ಲಿ ಕೊಲ್ಲಟಿಗರೆಂದೂ ಕರೆಯುತ್ತಾರೆ. ಅವರ ಪ್ರದರ್ಶನವನ್ನು ದೊಂಬರಾಟ, ಕೊಲ್ಲಟಿಗರ ಆಟ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

ದೊಂಬರು ಆಂಧ್ರಪ್ರದೇಶದ ಕಡಪಾ, ನೆಲ್ಲೂರು, ಚಿತ್ತೂರು ಮತ್ತು ವಿಶಾಖಪಟ್ಟಣ ಜಿಲ್ಲೆಗಳಿಂದ ವಲಸೆ ಬಂದರೆಂದು ಹೇಳಲಾಗಿದೆ. ಅವರು ತೆಲುಗು ಮತ್ತು ಪ್ರಾದೇಶಿಕ ಭಾಷೆಯಾದ ಕನ್ನಡ ಮಾತನಾಡುತ್ತಾರೆ. ದೊಂಬರ ಸಮುದಾಯವು ಭಾರತದ ಉದ್ದಗಲಕ್ಕೂ ಹರಡಿಕೊಂಡಿದ್ದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.

ಈ ಬುಡಕಟ್ಟಿನ ಹುಟ್ಟು ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅನೇಕ ಐತಿಹ್ಯಗಳಿವೆ. ಅವರು ಐತಿಹಾಸಿಕ ವ್ಯಕ್ತಿಯಾದ ಕುಮಾರರಾಮನ ಮಲತಾಯಿ ರತ್ನಾಜಿಯೊಂದಿಗೆ ತಮ್ಮ ಸಂಬಂಧವನ್ನು ಹೇಳಿಕೊಳ್ಳುತ್ತಾರೆ. ಹತ್ತನೆಯ ಶತಮಾನದ ಪಂಪ ಮತ್ತು ಹನ್ನೆರಡನೆಯ ಶತಮಾನದ ವಚನಕಾರರ ಬರವಣಿಗೆಯಲ್ಲಿಯೇ ದೊಂಬರನ್ನು ಕುರಿತಾದ ಉಲ್ಲೇಖಗಳು ಕಂಡುಬರುತ್ತವೆ. ಬಿಜಾಪುರ ಜಿಲ್ಲೆಯ ಹೊನ್ನಿಹಾಳಿನಲ್ಲಿ ಸಿಕ್ಕಿರುವ ಶಾಸನವು ದೊಂಬರಿಗೆ ಒಂದು ಹಳ್ಳಿಯನ್ನೇ ದಾನವಾಗಿ ಕೊಟ್ಟ ಪ್ರಸಂಗವನ್ನು ದಾಖಲೆ ಮಾಡಿದೆ. ಅಲ್ಲಿಯೇ ದೊಂಬರ ಹೆಣ್ಣುಮಕ್ಕಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿರುವ ಶಿಲ್ಪಗಳು ದೊರಕಿವೆ.

ದೊಂಬರು ಯೆಲ್ಲಮ್ಮ, ದ್ಯಾಮವ್ವ, ಮಾರಮ್ಮ, ದುರ್ಗಮ್ಮ, ಹನುಮಂತ ಮುಂತಾದ ಸ್ಥಳೀಯ/ಪಪ್ರಾದೇಶಿಕ ದೇವತೆಗಳನ್ನು ಪೂಜಿಸುತ್ತಾರೆ. ಚೈತ್ರ ಮಾಸದ ಹುಣ್ಣಿಮೆಯ ದಿನ ಅವರೆಲ್ಲರೂ ಯೆಲ್ಲಮ್ಮ ದೇವಿಯನ್ನು ಆರಾಧಿಸುತ್ತಾರೆ.

ದೊಂಬರು ತಮ್ಮ ದೊಂಬರಾಟಕ್ಕಾಗಿ ಮತ್ತು ಮೋಡಿ ಪ್ರದರ್ಶನಗಳಿನ್ನು ಮಾಡುತ್ತಾರೆ. ಈ ಕಲೆಯಲ್ಲಿ ಧಾರ್ಮಿಕತೆಯಾಗಲೀ ಆಚರಣೆಗಳಾಗಲೀ ಇಲ್ಲ. ಇದು ಜಿವನ ನಡೆಸಲು ಕಲಿತಿರುವ ಮನರಂಜನೆಯ ಕಲೆ. ದೊಂಬರು ತಮ್ಮ ವಸ್ತುಗಳ ಸಮೇತ ಊರೂರು ತಿರುಗುವುದು ತಮ್ಮ ಹೊರೆಯನ್ನು ಎತ್ತುಗಳು ಹಾಗೂ ಕತ್ತೆಗಳ ಮೇಲೆ ಸಾಗಿಸುತ್ತಾರೆ. ಅವರು ತಾತ್ಕಾಲಿಕವಾಗಿ ಕಟ್ಟಿಕೊಂಡ ಗುಡಿಸಲುಗಳು ಮತ್ತು ಡೇರಾಗಳಲ್ಲಿ ವಾಸಿಸುತ್ತಾರೆ.

ಪ್ರದರ್ಶನದ ಪ್ರಾರಂಭದಲ್ಲಿ ಸಗಣಿಯಿಂದ ಮಾಡಿದ ಗಣಪತಿಯನ್ನು ಪೂಜಿಸಿ, ರಂಗಸ್ಥಳದ ನಡುವೆ ಒಂದು ಬೊಂಬನ್ನು ಹೂಳಿ ನಿಲ್ಲಿಸುತ್ತಾರೆ.

  • ಬಿದಿರುಗಳವನ್ನು ಹತ್ತುವುದು ಮತ್ತು ದಿಢೀರನೆ ಅದರಿಂದ ಜಾರಿಕೊಂಡು ಕೆಳಗೆ ಇಳಿಯುವುದು.
  • ಆ ಬೊಂಬನ್ನು ಹಿಡಿದಿಕೊಂಡೇ ಬಗೆಬಗೆಯ ಲಾಗಗಳನ್ನು ಹಾಕುವುದು.
  • ಎತ್ತಿನ ಬಂಡಿಯನ್ನು ತನ್ನ ಕೂದಲಿಗೆ ಕಟ್ಟಿಕೊಂಡು ಎಳೆಯುವುದು.

  • ನೆಲದ ಮೇಲೆ ಅಂಗಾತ್ತಾಗಿ ಮಲಗಿಕೊಂಡು, ಎದೆಯ ಮೇಲೆ ದೊಡ್ಡ ಬಂಡೆಯನ್ನು ಇಟ್ಟುಕೊಳ್ಳುವುದು.

  • ಹಗ್ಗದ ಮೇಲಿನ ನಡಿಗೆ.

  • ನೀರುತುಂಬಿದ ಕೊಡವನ್ನು ಹಲ್ಲುಗಳಿಂದಲೇ ಎತ್ತುವುದು.

  • ಮರಗಾಲುಗಳನ್ನು ಕಟ್ಟಿಕೊಂಡು ನಡೆಯುವುದು.

  • ಚಿಕ್ಕ ಮಕ್ಕಳು ಕಬ್ಬಿಣದ ಹೂಪುಗಳಲ್ಲಿ (Hoop) ಒಳಗೆ ಮೈಮಣಿಸಿಕೊಂಡು ಹೋಗಿ ಹೊರಬರುವುದು. ಇತ್ಯಾದಿ

Similar questions