“ಹಿತ್ತಲಗಿಡ ಮದ್ದಲ್ಲ” ಗಾದೆ ಮಾತನ್ನು
Answers
Answer
ಯಾವುದೋ ರೋಗಕ್ಕೆ ಕಂಡಕಂಡ ಗಿಡದ ರಸವಾಗಲೀ, ಬೇರಾಗಲೀ ಔಷಧವಾಗಲಾರದು ಎಂಬುದು ಈ ನಾಣ್ಣುಡಿಯ ಸ್ಥೂಲ ಅರ್ಥ. ಆದರೆ ಇದರ ಒಳಾರ್ಥವೇ ಬೇರೆ. ನಾವು ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ತುರ್ತು ಉಪಾಯಗಳನ್ನೇ ಹುಡುಕುತ್ತೇವೆ. ಉದಾಹರಣೆಗೆ ಬಿದ್ದು ಗಾಯವಾದರೆ ಕೂಡಲೇ ಅದನ್ನು ತಣ್ಣೀರಿನಿಂದ ತೊಳೆದು ಅದಕ್ಕೆ ಪೌಡರ್ ಹಚ್ಚುತ್ತೇವೆ. ಆದರೆ ಹೀಗೆ ತಕ್ಷಣ ಕೈಗೆ ಸಿಕ್ಕಿದ ವಸ್ತುವನ್ನು ಬಳಸುವುದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ಗಾಯಕ್ಕೆ ಸೂಕ್ತವಾಗ ಔಷಧವನ್ನು ಹಚ್ಚುವುದೇ ಸರಿಯಾದ ಮಾರ್ಗ.
ಹಾಗೆಯೇ ಬದುಕಿನಲ್ಲಿ ನಾವು ಎದುರಿಸುವ ಹಲವು ಸಮಸ್ಯೆಗಳಿಗೆ ನಾವು ತಾತ್ಕಾಲಿಕ ಪರಿಹಾರವನ್ನು ಹುಡುಕುವುದು ಸರಿಯಲ್ಲ ಎಂಬುದೂ ಈ ಗಾದೆಯ ಅರ್ಥ. ಉದಾಹರಣೆಗೆ ಹಣದ: ಸಮಸ್ಯೆ ಬಂದಾಗ ತಕ್ಷಣ ಸಾಲ ಮಾಡುವುದಕ್ಕೆ ಮುಂದಾಗುತ್ತಾರೆ. ಆದರೆ ದುಡಿದು ಸಂಪಾದಿಸುವುದೇ ಹಣದ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಉತ್ತರವಾಗಿದೆ. ಹೀಗೆ ನಾವು ಬದುಕಿನಲ್ಲಿ ಹಠಾತ್ ನಿರ್ಧಾರಗಳನ್ನು ಮಾಡುವ ಬದಲು ಖಾಯಂ ಪರಿಹಾರಕ್ಕಾಗಿ ಪ್ರಯತ್ನಿಸಬೇಕು. ಕೈಗೆ ಸಿಕ್ಕಿದ್ದೇ ಪರಿಹಾರ ಎಂದುಕೊಳ್ಳಬಾರದು.
hope it helps........thanks........★★★★★
Answer: