ನಿಮ್ಮ ಶಾಲೆಯಲ್ಲಿ ಆಚರಿಸಿದ ಪರಿಸರ ದಿನಾಚರಣೆ ಕುರಿತು ಪತ್ರಿಕಾ ವರದಿ ಬರೆಯಿರಿ
Answers
Answer:
ಪರಿಸರ ದಿನಾಚರಣೆ ದಿನದಿಂದ ಆಗಸ್ಟ್ ಅಂತ್ಯದವರೆಗೂ ಪ್ರತಿ ವಿದ್ಯಾರ್ಥಿಯಿಂದ ಅಥವಾ ಪ್ರತಿ ವಿದ್ಯಾರ್ಥಿ ತಂಡದಿಂದ ಭವಿಷ್ಯದಲ್ಲಿ ಉಪಯುಕ್ತವಾಗುವಂತಹ ನೆರಳು ಹಾಗೂ ಫಲ ನೀಡುವ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ನಾನಾ ರೀತಿಯ ಅಲಂಕಾರಿಕ ಗಿಡಗಳು, ಹೂವಿನ ಗಿಡಗಳು ಹಾಗೂ ಔಷಧ ಗಿಡಗಳನ್ನು ಬೆಳೆಸಿ ಶಾಲೆಯ ಸೊಬಗನ್ನು ಹೆಚ್ಚಿಸುವುದರ ಜತೆಗೆ, ಶಾಲಾ ಮೈದಾನದ ಅನುಪಯುಕ್ತ (ಕ್ರೀಡಾ ಮೈದಾನ ಹೊರತುಪಡಿಸಿ) ಜಾಗದಲ್ಲಿ ಸ್ಥಳೀಯ ವಾತಾವರಣಕ್ಕೆ ಅನುಗುಣವಾದ ತೆಂಗು, ಮಾವು, ಹಲಸು, ನೇರಳೆ, ಸೀಬೆ, ದಾಳಿಂಬೆ, ನೆಲ್ಲಿ, ಬೇವು, ಅರಳಿ, ಹೊಂಗೆ, ಸಂಪಿಗೆ, ಟೀಕ್, ಅಶೋಕ ಹಾಗೂ ಸರ್ವೆ ಸೇರಿದಂತೆ ಇತರೆ ಸಸ್ಯಗಳನ್ನು ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಪಡೆಯುವುದರ ಮೂಲಕ ಶಾಲಾ ಪರಿಸರವನ್ನು ಹಸಿರೀಕರಣವಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಶಾಲಾ ಹಂತದಲ್ಲಿ ಶಾಲಾ ಮುಖ್ಯಸ್ಥರು ಶಾಲಾ ಪರಿಸರವು ಶಿಕ್ಷಣದ ಅವಿಭಾಜ್ಯ ಅಂಗವೆಂದು ಭಾವಿಸಿ ವಿಶೇಷ ಗಮನಹರಿಸಬೇಕು; ತಾಲೂಕು/ ವಲಯ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು (ಆಡಳಿತ) ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮೂಲಕ ಮೇಲ್ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಅಲ್ಲದೆ, ಕಾರ್ಯಕ್ರಮದ ಪ್ರಗತಿ ವರದಿಯನ್ನು ಹಿರಿಯ ಸಹಾಯಕ ನಿರ್ದೇಶಕರು (ವೃತ್ತಿ ಶಿಕ್ಷಣ), ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು-1, ಇವರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಯಲು ಸಲಹೆ
ಭೂಮಿ ಲಭ್ಯತೆಯಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 'ಶಾಲಾ ಕೈತೋಟ' ನಿರ್ಮಿಸುವುದರ ಜತೆಗೆ, ಅದರ ಮಹತ್ವ ಹಾಗೂ ಉಪಯೋಗದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದು. ಜತೆಗೆ, ಬಿಸಿಯೂಟಕ್ಕೆ ಅಗತ್ಯವಾದ ತಾಜಾ ಸೊಪ್ಪು, ಕರಿಬೇವು, ನುಗ್ಗೆ, ತರಕಾರಿ, ಬಳ್ಳಿ ತರಕಾರಿಗಳನ್ನು ಬೆಳೆಸಿ ಉಪಯೋಗಿಸಲು ಸಲಹೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶ್ರಮದ ಗೌರವ, ಸ್ವಾವಲಂಬನೆ, ಸಾಮಾಜಿಕ ಕೌಶಲ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Question : ನಿಮ್ಮ ಶಾಲೆಯಲ್ಲಿ ಆಚರಿಸಿದ ಪರಿಸರ ದಿನಾಚರಣೆ ಕುರಿತು ಪತ್ರಿಕಾ ವರದಿ ಬರೆಯಿರಿ
Answer:
The answer is in the photo of this question.
Explanation:
Hope this answer will help you.