ನಿವು ನೋಡಿದ ರಸ್ತೆ ಅಪಘಾತವನ್ನು ಕುರಿತು ಒಂದು ಪ್ರತ್ರಿಕ
ವರದಿಯನ್ನು ತಯಾರಿಸಿರಿ.
Answers
Answer:
Answer:
ಅಪಘಾತವು (ಆಕಸ್ಮಿಕ) ಒಂದು ಅನಪೇಕ್ಷಿತ, ಪ್ರಾಸಂಗಿಕ, ಮತ್ತು ಅಯೋಜಿತ ಘಟನೆ. ಅದು ಸಂಭವಿಸುವುದಕ್ಕೆ ಮೊದಲು, ಅದಕ್ಕೆ ದಾರಿಕಲ್ಪಿಸುವ ಸಂದರ್ಭಗಳನ್ನು ಗುರುತಿಸಿ ಕ್ರಮ ತೆಗೆದುಕೊಂಡರೆ ಅಪಘಾತವನ್ನು ತಡೆಗಟ್ಟಬಹುದು. ಅನುದ್ದೇಶಿತ ಗಾಯವನ್ನು ಅಧ್ಯಯನ ಮಾಡುವ ಬಹುತೇಕ ವಿಜ್ಞಾನಿಗಳು "ಅಪಘಾತ" ಪದವನ್ನು ಬಳಸುವುದಿಲ್ಲ ಮತ್ತು ತೀವ್ರ ಗಾಯದ ಅಪಾಯವನ್ನು ಹೆಚ್ಚಿಸುವ ಮತ್ತು ಗಾಯದ ವ್ಯಾಪ್ತಿ ಮತ್ತು ತೀವ್ರತೆಯನ್ನು ಕಡಿಮೆಮಾಡುವ ಅಂಶಗಳ ಮೇಲೆ ಕೇಂದ್ರೀಕರಿಸುತ್ತಾರೆ.
ಫ಼ುಟ್‍ಬಾಲ್ ಆಟದಲ್ಲಿ ಕಂಬಿಬೇಲಿ ಅಪಘಾತ
ಅನುದ್ದೇಶಿತ ಮೋಟಾರು ವಾಹನ ಘರ್ಷಣೆಗಳು ಅಥವಾ ಬೀಳಿಕೆಗಳು, ಯಾವುದಾದರೂ ಚೂಪಾದ, ಬಿಸಿಯಾದ, ವಿದ್ಯುತ್ತಿನ ವಸ್ತುವಿನಿಂದ ಗಾಯಗೊಳ್ಳುವುದು ಅಥವಾ ವಿಷ ಸೇವಿಸುವುದು, ಅಪಘಾತಗಳ ಕೆಲವು ಭೌತಿಕ ಉದಾಹರಣೆಗಳು. ಅನುದ್ದೇಶಿತವಾಗಿ ರಹಸ್ಯವನ್ನು ಬಹಿರಂಗ ಮಾಡುವುದು ಅಥವಾ ಏನನ್ನಾದರೂ ತಪ್ಪಾಗಿ ಹೇಳುವುದು, ಅಥವಾ ಭೇಟಿ ಏರ್ಪಾಟನ್ನು ಮರೆಯುವುದು, ಇತ್ಯಾದಿಗಳು ಅಭೌತಿಕ ಉದಾಹರಣೆಗಳು.
ಕಾರ್ಯ ನಿರ್ವಹಣೆಯ ಅವಧಿಯಲ್ಲಿನ ಅಥವಾ ಅದರಿಂದ ಉದ್ಭವಿಸಿದ ಅಪಘಾತಗಳನ್ನು ಕೆಲಸದ ಅಪಘಾತಗಳೆಂದು ಕರೆಯಲಾಗುತ್ತದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, ಪ್ರತಿ ವರ್ಷ ಕೆಲಸದ ಸಮಯದಲ್ಲಿ ೩೩೭ ಮಿಲಿಯಕ್ಕಿಂತ ಹೆಚ್ಚು ಅಪಘಾತಗಳು ಆಗುತ್ತವೆ, ಪರಿಣಾಮವಾಗಿ, ಔದ್ಯೋಗಿಕ ರೋಗಗಳೊಂದಿಗೆ, ವಾರ್ಷಿಕವಾಗಿ ೨.೩ ಮಿಲಿಯಕ್ಕಿಂತ ಹೆಚ್ಚು ಸಾವುಗಳು ಸಂಭವಿಸುತ್ತವೆ.[೧] ವ್ಯತಿರಿಕ್ತವಾಗಿ, ಬಿಡುವು ಸಂಬಂಧಿತ ಅಪಘಾತಗಳು ಮುಖ್ಯವಾಗಿ ಕ್ರೀಡಾ ಗಾಯಗಳಾಗಿರುತ್ತವೆ.
ವಿಷಗಳು, ವಾಹನ ಡಿಕ್ಕಿಗಳು ಮತ್ತು ಬೀಳಿಕೆಗಳು ಮಾರಕ ಗಾಯಗಳ ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ಅಮೇರಿಕದ ಆರೋಗ್ಯ ಅಂಕಿಅಂಶಗಳ ರಾಷ್ಟ್ರೀಯ ಕೇಂದ್ರದ ರಾಷ್ಟ್ರೀಯ ಜನನ ಮರಣ ಅಂಕಿಅಂಶಗಳಿಂದ ಪಡೆದ ದತ್ತಾಂಶ ಬಳಸಿದ ಮನೆಯಲ್ಲಿ ಅನುಭವಿಸಿದ ಗಾಯಗಳ ಒಂದು ೨೦೦೫ರ ಸಮೀಕ್ಷೆಯ ಪ್ರಕಾರ ಬೀಳಿಕೆಗಳು, ವಿಷ ಸೇರಿಕೆ ಮತ್ತು ಬೆಂಕಿ/ಸುಟ್ಟ ಗಾಯಗಳು ಮರಣಗಳ ಅತ್ಯಂತ ಸಾಮಾನ್ಯ ಕಾರಣಗಳು.
Explanation:
ನವದೆಹಲಿ: ಕಳೆದ ವರ್ಷ ದೇಶದಾದ್ಯಂತ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿರುವ ಅಗ್ರ ಐದು ರಾಜ್ಯಗಳ ಪೈಕಿ ಕರ್ನಾಟಕವು 4ನೇ ಸ್ಥಾನದಲ್ಲಿದೆ.
ಅತಿ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾದ ದೇಶದ ಪ್ರಮುಖ ನಗರಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಕೇಂದ್ರದ ರಸ್ತೆ ಸಾರಿಗೆ ಸಚಿವಾಲಯದ ಸಂಶೋಧನಾ ವಿಭಾಗವು ದೇಶದಾದ್ಯಂತ 2018ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಕುರಿತು ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ಈ ಅಂಶಗಳಿವೆ.
ಈ ವರದಿಯ ಪ್ರಕಾರ, 2017ನೇ ಸಾಲಿಗೆ ಹೋಲಿಸಿದರೆ ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ.
2017ರಲ್ಲಿ ರಾಜ್ಯದಾದ್ಯಂತ 42,542 ಅಪಘಾತ ಪ್ರಕರಣಗಳು ದಾಖಲಾಗಿದ್ದರೆ, 2018ರ ಪ್ರಮಾಣ 41,707. ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದರೂ ಸಾವಿನ ಪ್ರಮಾಣ ಮಾತ್ರ ಹೆಚ್ಚಿದೆ. 2017ರಲ್ಲಿ ರಾಜ್ಯದಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯು 10,609 ಆಗಿದ್ದರೆ, 2018ರ ಸಾವಿನ ಸಂಖ್ಯೆ 10,999.
ಅತಿ ಹೆಚ್ಚು ಅಪಘಾತಗಳು ಸಂಭವಿಸಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಅಲ್ಲಿ ಸಂಭವಿಸಿರುವ 63,920 ಅಪಘಾತಗಳಲ್ಲಿ 65,502 ಜನ ಸಾವಿಗೀಡಾಗಿದ್ದಾರೆ.
10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ದೇಶದ 40 ನಗರಗಳ ಪೈಕಿ ಅಪಘಾತದ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿರುವ ಬೆಂಗಳೂರು, ಸಾವು– ನೋವುಗಳ ಸಂಖ್ಯೆಯಲ್ಲಿ 5ನೇ ಸ್ಥಾನ ಪಡೆದಿದೆ.
2017ರಲ್ಲಿ 2,297 ಅಪಘಾತ ಪ್ರಕರಣಗಳು ದಾಖಲಾಗಿದ್ದ ಬೆಂಗಳೂರಿನಲ್ಲಿ ಕಳೆದ ವರ್ಷದ ಸಂಖ್ಯೆ 4,611. ಈ ಎರಡೂ ವರ್ಷಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆಯೂ ಕ್ರಮವಾಗಿ 653ರಿಂದ 686ಕ್ಕೆ ಹೆಚ್ಚಿದೆ.
ಅಪಘಾತಗಳ ಸಂಖ್ಯೆಯ ಪಟ್ಟಿಯಲ್ಲಿ ಚೆನ್ನೈನ ನಂತರದ ಸ್ಥಾನಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ ಹಾಗೂ ಭೋಪಾಲ, ಇಂದೋರ್ ನಗರಗಳಿವೆ. ಹೆಚ್ಚು ಸಾವು– ನೋವು ಸಂಭವಿಸಿರುವ ನಗರಗಳಲ್ಲಿ ದೆಹಲಿ ಅಗ್ರ ಸ್ಥಾನದಲ್ಲಿದ್ದರೆ ಚೆನ್ನೈ, ಕಾನ್‌ಪುರ ಮತ್ತು ಜೈಪುರ ನಗರಗಳು ನಂತರದ ಸ್ಥಾನದಲ್ಲಿವೆ.
2017ಕ್ಕೆ (4.64 ಲಕ್ಷ) ಹೋಲಿಸಿದರೆ ಕಳೆದ ವರ್ಷ ದೇಶದಾದ್ಯಂತ ಸಂಭವಿಸಿರುವ ಅಪಘಾತಗಳ ಸಂಖ್ಯೆ ಶೇ 0.46ರಷ್ಟು ಹೆಚ್ಚಿದ್ದು, 4.67 ಲಕ್ಷ ತಲುಪಿದೆ. ಸಾವು– ನೋವುಗಳ ಸಂಖ್ಯೆಯೂ ಶೇ 2.37ರಷ್ಟು ಹೆಚ್ಚಿದೆ. 2017ರಲ್ಲಿ ಅಪಘಾತಗಳಲ್ಲಿ ಮೃತರಾದವರ ಸಂಖ್ಯೆ 1.47 ಲಕ್ಷ ಇದ್ದರೆ, ಕಳೆದ ವರ್ಷ ದಾಖಲಾಗಿರುವ ಸಂಖ್ಯೆ 1.51 ಲಕ್ಷ.
ಸಾವಿಗೆ ಕಾರಣಗಳು
* ಅತಿಯಾದ ವೇಗ
* ಚಾಲನೆಯ ಸಂದರ್ಭ ಮೊಬೈಲ್ ಬಳಕೆ
* ಹೆಲ್ಮೆಟ್ ಧರಿಸದಿರುವುದು
* ಮದ್ಯ ಸೇವಿಸಿ ಚಾಲನೆ
* ಸೀಟ್ ಬೆಲ್ಟ್ ಧರಿಸದಿರುವುದ