ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ಎಲ್ಲರಿಗೂ ಮನೆ ಆಗೋವರೆಗೆ ನನಗೂ ಮನೆ ಬೇಡ
Answers
ಪ್ರಶ್ನೆ:
" ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ "
ಉತ್ತರ:
ಈ ಮೇಲಿನ ವಾಕ್ಯವನ್ನು ದೇವನೂರು ಮಹಾವೇವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ವೈಚಾರಿಕ ಬಿಡಿ ಲೇಖನಗಳಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಕವಿ ಸಿದ್ದಲಿಂಗಯ್ಯನವರು ಒಮ್ಮೆ ಲೇಖಕರಾದ ದೇವನೂರವರಿಗೆ ಹೇಳಿದ ಕಥೆಯಲ್ಲಿ ಜನರು ಗ್ರಾಮದೇವತೆಗೆ ಗುಡಿಕಟ್ಟುತ್ತಿರುವಾಗ ಇದ್ದಕ್ಕಿದ್ದಂತೆ ಅವರಲ್ಲಿ ಒಬ್ಬನ ಮೇಲೆ ಆವಾಹಿಸಿಕೊಂಡು ಅವರು ಮಾಡುತ್ತಿರುವ ಕಾರ್ಯದ ಕುರಿತು ವಿಚಾರಿಸುತ್ತಾಳೆ.ಆಗ ಜನರು “ತಾಯಿ ನಿನಗಾಗಿ ಒಂದು ಗುಡಿಮನೆ ಕಟ್ಟುತ್ತಿರುವುದಾಗಿ ಹೇಳಿದಾಗ ಗ್ರಾಮದೇವತೆ ಈ ಮೇಲಿನಂತೆ ಹೇಳಿ “ನಿಮಗೆಲ್ಲ ಮನೆಯಾಗೋವರೆಗೂ ನನಗೂ ಮನೆ ಬೇಡ” ಎಂದು ಹೇಳುತ್ತಾಳೆ.
ಸ್ವಾರಸ್ಯ: ಬದುಕಲು ನೆಲೆ ಇಲ್ಲದ ಅದೆಷ್ಟೋ ಬಡವರು ನೆರಳಿಲ್ಲದೆ ಕಷ್ಟ ಪಡುತ್ತಿರುವಾಗ ಕಣ್ಣಿಗೆ ಕಾಣದ ದೇವತೆಗೆ ಮನೆ ಕಟ್ಟುತ್ತಿರುವುದು ಎಷ್ಟು ಸರಿ? ಇದನ್ನು ನೋಡಿದ ಗ್ರಾಮ ದೇವತೆಯೇ ಪ್ರತ್ಯಕ್ಷಳಾಗಿ ಸಮಾಜದಲ್ಲಿ ನೆಲೆಯಿಲ್ಲದವರಿಗೆ ನೆಲೆ ಒದಗಿಸಬೇಕಾದ ಅನಿವಾರ್ಯತೆಯ ಮಾನವೀಯ ಮೌಲ್ಯವನ್ನು ಸಾರುವ ಸ್ವಾರಸ್ಯ ವ್ಯಕ್ತವಾಗಿದೆ.
ದಯವಿಟ್ಟು brainliest ಬಟನ್ ಮೇಲೆ ಒತ್ತಿ...
ಮೇಲಿನ ಉತ್ತರವು 100% ರಷ್ಟು ಸರಿಯಾಗಿದೆ.
Mark it as brainliest