ನಮ್ಮೂರ ಜಾತ್ರೆ ಪ್ರಬಂಧ
Answers
Answer:
hope it helps you
Explanation:
ಜಾತ್ರೆಯೆಂದರೆ ಸಾಕು.. ಥಟ್ಟನೆ ಮನಸ್ಸು ಬಾಲ್ಯಕ್ಕೋಡುತ್ತದೆ!
ಅಪ್ಪನ ಬೆನ್ನುಹತ್ತಿ ಹೆಗಲ ಮೇಲೆ ಕೂತು ಪುಟ್ಟ ಕಣ್ಣುಗಳನ್ನ ಇಷ್ಟಗಲ ಅರಳಿಸಿ ನೋಡಿದ್ದ ಇಡೀ ಜಾತ್ರೆಯ ಪನೋರಮಿಕ್ ನೋಟ ಮತ್ತೆ ಅಷ್ಟೇ ರಂಗು ರಂಗಾಗಿ ತೆರೆದುಕೊಳ್ಳುತ್ತದೆ..
ಶಿವಮೊಗ್ಗದಿಂದ ಸಾಗರ, ಹೊಸನಗರ, ಶಿಕಾರಿಪುರಗಳಿಗೆ ಹೋಗುವ ಮಾರ್ಗದಲ್ಲಿ ಮಲೆನಾಡಿನ ಪ್ರವೇಶ ದ್ವಾರದಂತಿರುವ ನಮ್ಮೂರು “ಆನಂದಪುರ”ದ ಕಡ್ಲೆಹಕ್ಲು ಮಾರಿಕಾಂಬಾ ಜಾತ್ರೆಯೆಂದರೆ ನಮ್ಮ ಮಟ್ಟಿಗೆ ಅದು ಬಹುದೊಡ್ಡ ಹಬ್ಬ! ಶಿರಸಿ ಮಾರಿಕಾಂಬಾ, ಸಾಗರದ ಮಾರಿಕಾಂಬಾ, ಆನಂದಪುರದ ಕಡ್ಲೆಹಕ್ಲು ಮಾರಿಕಾಂಬಾ ಈ ಮೂವರೂ ಅಕ್ಕ ತಂಗಿಯರೆಂಬ ಪ್ರತೀತಿಯಿದೆ. ಹಾಗಾಗಿ 3 ವರ್ಷಕ್ಕೊಮ್ಮೆ ಮೊದಲಿಗೆ ಶಿರಸಿಯ ಹಿರಿಯಕ್ಕನ ಜಾತ್ರೆ, ಸಾಗರದ ಜಾತ್ರೆ, ಕೊನೆಯಲ್ಲಿ ನಮ್ಮೂರ ಜಾತ್ರೆ ನಡೆಯುತ್ತದೆ. ನಮ್ಮ ಸಂಸ್ಕೃತಿಯಲ್ಲಿ ದೈವವನ್ನೂ ಮರ್ತ್ಯ ಸಂಬಂಧಗಳಲ್ಲಿ(ಅಕ್ಕ-ತಂಗಿ) ಬೆಸೆದು ವಾತ್ಸಲ್ಯದಿಂದ ಕಾಣುವುದು ಸೋಜಿಗವಲ್ಲದೇ ಮತ್ತೇನು?!
ಈಗ ಜಾತ್ರೆಯಲ್ಲಿ ಕಳೆದುಹೋಗೋ ಮೊದಲು ನಮ್ಮೂರಿನ ಹೃದಯಭಾಗ ಸಂತೆಮಾಳದಲ್ಲಿರುವ ಮಾರಿಗುಡಿಗೆ ಹೋಗಿ ಅಮ್ಮನ ದರ್ಶನ ಮಾಡಿಬಿಡೋಣ ಬನ್ನಿ! ಗುಡಿ ಅಂದ್ರೆ ಮತ್ತೇನಿಲ್ಲ.. ಒಂದು ಪುರಾತನ ಅಶ್ವತ್ಥ ವೃಕ್ಷದ ಸುತ್ತ ಚಿಕ್ಕ ಕಟ್ಟೆ.. ಮರದ ಬುಡದಲ್ಲಿ ಅರಿಶಿನ-ಕುಂಕುಮ ಲೇಪಿತವಾದ ಗುಂಡು ಕಲ್ಲು ರೂಪಿ ಮಾರಮ್ಮ.. ನಾಲ್ಕಾರು ತ್ರಿಶೂಲಗಳು.. ಇಷ್ಟೇ! ಜಾತ್ರೆ ಸಂದರ್ಭ ಹೊರತುಪಡಿಸಿದರೆ ಬಾಕಿಯಂತೆ ಇಲ್ಲಿ ಯಾವುದೇ ಪೂಜೆ-ಪುನಸ್ಕಾರಗಳು ನಡೆಯೋದಿಲ್ಲ. ಊರಿನ ಹೆಣ್ಣುಮಕ್ಕಳು ಯಾವುದಾದರೂ ಶುಕ್ರವಾರ/ಮಂಗಳವಾರಗಳಂದು ಅಥವಾ ಮಕ್ಕಳಿಗೆ ಸಿಡುಬು ಇತ್ಯಾದಿ ಖಾಯಿಲೆಯಾದಾಗ ಮಾತ್ರ ಅಮ್ಮನನ್ನ ನೆನಪಿಸಿಕೊಂಡು ಹರಕೆ ಹೊತ್ತು ತೆಂಗಿನಕಾಯಿ, ಮೊಸರನ್ನ ನೈವೇದ್ಯ ಮಾಡುತ್ತಾರಷ್ಟೇ.. ಇಷ್ಟರಿಂದಲೇ ಸಂತೃಪ್ತಳಾಗುವ ಮಾರಮ್ಮ ಯಾವುದೇ ಮಹಾಮಾರಿ ಊರೊಳೊಗೆ ಕಾಲಿಡದಂತೆ ಕಾಯುತ್ತಾ, ಭಕ್ತಮಕ್ಕಳನ್ನು ಹರಸುತ್ತಾ ಇಲ್ಲಿ ನೆಲೆಸಿದ್ದಾಳೆ. ಉಗ್ರ ಕ್ಷುದ್ರದೇವತೆಯಾಗಿ, ಸೌಮ್ಯ ಮಾತೃಸ್ವರೂಪಿಯಾಗಿ ಅವರವರ ಭಾವಕ್ಕೆ ತಕ್ಕಂತೆ ಒಲಿಯುವ ದೇವಿಯೆಂದರೆ ಭಯ, ಭಕ್ತಿ, ಪ್ರೀತಿ, ನಂಬಿಕೆ ಎಲ್ಲವೂ ಒಮ್ಮೆಗೇ ಉಂಟಾಗುತ್ತವೆ. ಈ ಮಾರಿಗುಡಿಯನ್ನ ಬಿಟ್ಟರೆ ಊರಾಚೆ ಬಯಲಲ್ಲಿ ಮಾರಮ್ಮನ ತವರು ಮನೆಯೆಂಬೊಂದು ಕಟ್ಟೆ ಥರದ ಜಾಗವಿದೆ. ಜಾತ್ರೆಯಲ್ಲಲ್ಲದೇ ಉಳಿದ ದಿನಗಳಲ್ಲಿ ಊರಿನ ಯಾರೂ ಇತ್ತ ಸುಳಿಯುವುದಿಲ್ಲ.
ಸರಿ, ಮಾರಮ್ಮನ ದರ್ಶನವಾಯ್ತಲ್ಲ.. ಇನ್ನು ಜಾತ್ರೆ ವಿಚಾರ ಕೇಳಿ. ಜಾತ್ರೆಯ ಮೊದಲ ಹಂತವಾಗಿ ಊರಿನ ಪ್ರಮುಖರೆಲ್ಲ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಸೇರಿ ಉತ್ಸವದ ದಿನಾಂಕವನ್ನ ನಿಶ್ಚಯ ಮಾಡ್ತಾರೆ. ವಿಶೇಷವೆಂದರೆ ಚುನಾವಣೆ ಸಮಯದಲ್ಲಿ ಎಷ್ಟೇ ಕಚ್ಚಾಡಿ, ಕೆಸರೆರಚಾಡಿದ್ದರೂ ಜಾತ್ರೆಯ ವಿಷಯದಲ್ಲಿ ಮಾತ್ರ ಎಲ್ಲ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಪಕ್ಷ, ಧರ್ಮ, ಜಾತಿ ಎಲ್ಲಕ್ಕೂ ಅತೀತರಾಗಿ ಜನರು ಒಂದಾಗುತ್ತಾರೆ.. ಅಮ್ಮನ ಮಕ್ಕಳಷ್ಟೇ ಆಗಿ ಉತ್ಸವ ನಡೆಸುತ್ತಾರೆ!
ದಿನಾಂಕ ನಿಗದಿಯಾಯಿತೆಂದರೆ ಜಾತ್ರೆಗೆ ನಾಂದಿ ಹಾಡಿದಂತೆಯೇ ಲೆಕ್ಕ. ನಂತರದ ಕೆಲಸ ಕೋಣದ ಆಯ್ಕೆ! ಆಯ್ಕೆಯೆಂದರೆ ಹೊಸದಾಗಿ ಹುಡುಕಿ ತರುವುದೇನಿಲ್ಲ.. ಹಿಂದಿನ ಜಾತ್ರೆಯಲ್ಲೇ ಒಂದು ಕೋಣವನ್ನು ಮುಂದಿನ ಜಾತ್ರೆಗೆ ಅಂತ ಬಿಟ್ಟು ಬೆಳೆಸಿ ಆಗಿರತ್ತೆ. ಈಗ ಅದರ ಮೈ ತೊಳೆದು ಸಿಂಗರಿಸಿ ಪ್ರತಿಯೊಂದು ಮನೆ ಬಾಗಿಲಿಗೂ ಕರೆತಂದು ಚಂದ ವಸೂಲಿ ಮಾಡುತ್ತಾರೆ. ಎಲ್ಲ ಮನೆಯವರೂ ಅದರ ಹಣೆಗೆ ಎಣ್ಣೆ ಹಚ್ಚಿ ಪೂಜೆ ಮಾಡಿ ಕಳಿಸುವುದು ಸಂಪ್ರದಾಯ. ಕೋಣ ಮನೆಗೆ ಬಂದು ಹೋಯಿತೆಂದರೆ ಅಧಿಕೃತವಾಗಿ ಜಾತ್ರೆಯ ಸಂಭ್ರಮ ಶುರುವಾಯಿತು ಅಂತಲೇ! ಜನರಲ್ಲಿ ಏನೋ ಉತ್ಸಾಹ, ಲವಲವಿಕೆ.. ಹಾಗೇ ಕೋಣಕ್ಕೂ ಖುಷಿಯಾಗುತ್ತೇನೋ! ತನಗೂ ಪೂಜೆ ಮಾಡ್ತಿದ್ದಾರೆ, ಹೊಟ್ಟೆತುಂಬ ತಿನ್ನಲಿಕ್ಕೆ ಕೊಡ್ತಿದ್ದಾರೆ ಅಂತ.. ಜಾತ್ರೆಯ ದಿನ ತನ್ನ ಕೊರಳು ಉರುಳಿ ಬೀಳತ್ತೇಂತ ಅದಕ್ಕೆಲ್ಲಿ ಕನಸಾಗ್ಬೇಕು ಪಾಪ..!
ಕೋಣದ ಮನೆ ಮನೆ ಭೇಟಿ ಕಾರ್ಯಕ್ರಮ ಮುಗಿದ ಮೇಲೆ ದೂರದೂರುಗಳಲ್ಲಿ ನೆಲೆಸಿರುವ ನೆಂಟರಿಗೆಲ್ಲ ಜಾತ್ರೆಗೆ ಬನ್ನಿ ಅಂತ ಕರೆ ಕಳಿಸುವ ಕೆಲಸ. ಊರಹಬ್ಬ, ಜಾತ್ರೆ, ಉತ್ಸವಗಳೆಂದರೆ ಅದು ಕಾರಣಾಂತರಗಳಿಂದ ಊರುಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವ ಬಂಧು-ಬಾಂಧವರು, ಸ್ನೇಹಿತರೆಲ್ಲ ವರ್ಷಕ್ಕೊಮ್ಮೆಯಾದರೂ ತಮ್ಮೂರಿಗೆ ಬಂದು ತಮ್ಮ ಜನರೊಂದಿಗೆ ಕೂಡಲು, ಬೆರೆಯಲು ಇರುವ ಖುಷಿಯ ಅವಕಾಶವೇ ಸರಿ! ಇಂಥ ಆಚರಣೆಗಳ ಹಿಂದೆ ನಮ್ಮ ಪೂರ್ವಿಕರ ಆಶಯವೂ ಬಹುಷಃ ಇದೇ ಇದ್ದಿರಬೇಕು.
ಜಾತ್ರೆಯ ದಿನ ಸಮೀಪಿಸುತ್ತಿದ್ದ ಹಾಗೇ ಆಟೋ ಒಂದಕ್ಕೆ ಮೈಕ್ ಸಿಕ್ಕಿಸಿಕೊಂಡು ಸುತ್ತಮುತ್ತಲ ಎಲ್ಲ ಹಳ್ಳಿಗಳಲ್ಲೂ ನಮ್ಮೂರಿನ ಶಂಕ್ರಣ್ಣ ಘೋಷಣೆ ಕೂಗುತ್ತಾ ಹೊರಟರೆಂದರೆ ಸಾಕು.. ಅವರ ಕಂಚಿನ ಕಂಠ, ಮಜವಾದ ಮಾತುಗಳು.. ಆತ್ಮೀಯ ಬಂಧುಗಳೇ, ಅಕ್ಕ ತಂಗಿಯರೇ, ಅಣ್ಣತಮ್ಮಂದಿರೇ, ಹುಡುಗ ಹುಡುಗಿಯರೇ, ಅಜ್ಜ ಅಜ್ಜಿಯರೇ! ಇದೇ ಮಾರ್ಚ್ 1,2 ಹಾಗೂ ಮೂರನೇ ತಾರೀಖು ಆನಂದಪುರದ ಶ್ರೀ ಕಡ್ಲೆಹಕ್ಲು ಮಾರಿಕಾಂಬಾ ಜಾತ್ರೆ….. ಅಂತೆಲ್ಲ ಸಾಗುವ ಅವರ ಮಾತಿನ ಶೈಲಿಯೇ ಚೆಂದ.
ಜಾತ್ರೆಗೆ ಒಂದು ವಾರ ಬಾಕಿಯಿದೆ ಎನ್ನುವಾಗ ಹಬ್ಬದ ಸಂತೆ ಏರ್ಪಡಿಸ್ತಾರೆ. ನಮ್ಮೂರಿನ ಸಾಮಾನ್ಯ ಸಂತೆ ಪ್ರತೀ ಬುಧವಾರ ನಡೆಯುತ್ತದಾದರೂ ಇದು ಜಾತ್ರೆಯ ಪ್ರಯುಕ್ತ ವಿಶೇಷ ಸಂತೆ. ಜಾತ್ರೆಯ ದಿನ ಬರಲಿರುವ ನೆಂಟರ ಉದರ ಪೋಷಣೆಗಾಗಿ ಈ ಸಂತೆಯಲ್ಲಿ ಊರಿನ ಜನರು ಜೋರಾಗೇ ವ್ಯಾಪಾರ ನಡೆಸುತ್ತಾರೆ. ಬೇರೆ ಊರುಗಳ ವಣಿಕರೂ ಬಂದು ಮಾಳದಲ್ಲಿ ಟೆಂಟ್ ಹಾಕಿ ಅಂಗಡಿ ಇಡುತ್ತಾರೆ. ಊರಾಚೆ ಬಯಲಿನಲ್ಲಿ ತವರು ಮನೆ ಜಾಗ ಮತ್ತು ಗಂಡನಮನೆಯೆಂಬ ಮಾರಿಗುಡಿಯಲ್ಲಿ ದೊಡ್ಡ ದೊಡ್ಡ ಪೆಂಡಾಲ್ ಏಳುತ್ತವೆ. ಬೆಳಿಗ್ಗೆ ಶಾಲೆಗೆ ಹೋಗುವಾಗ ಬಟಾಬಯಲಿದ್ದ ಸ್ಥಳದಲ್ಲಿ ಸಂಜೆ ಮನೆಗೆ ವಾಪಸ್ಸಾಗುವ ಹೊತ್ತಿಗೆ ಎದ್ದಿರುತ್ತಿದ್ದ ಕಮಾನು, ಪೆಂಡಾಲು, ಗೋಪುರ, ಶಾಮಿಯಾನಗಳನ್ನ ನೋಡಿ ಅತೀವ ಆಶ್ಚರ್ಯಕ್ಕೆ ಒಳಗಾಗ್ತಿದ್ದ ನಮಗೆ ಯಾವುದೋ ಮಾಯಾಲೋಕಕ್ಕೆ ಕಾಲಿಟ್ಟ ಅನುಭವ ಅದು!
ಉತ್ಸವದ ಪೂಜಾ ಕೈಂಕರ್ಯ ಒಟ್ಟು ಮೂರು ದಿನ ನಡೆಯುತ್ತದೆ. ಮೊದಲನೇ ದಿನ ತವರು ಮನೆ ಪೆಂಡಾಲಿನಲ್ಲಿ ಮರದಲ್ಲಿ ಮಾಡಿದ ಮಾರಿಕಾಂಬೆಯ ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಿರುತ್ತಾರೆ. ಅದನ್ನು ಕೆತ್ತುವ ಕುಶಲಿಗಳ ವರ್ಗವೇ ಬೇರೆಯಿದೆ. ನಾಲ್ಕಾಳೆತ್ತರದ ರಕ್ತವರ್ಣದ ಕಾಷ್ಟ ಮೂರ್ತಿ ನಾಲಿಗೆ ಹೊರಚಾಚಿ, ಕಣ್ಣರಳಿಸಿ ನಿಂತಿರುವುದನ್ನು ನೋಡುವಾಗ ರೌದ್ರ, ಸೌಮ್ಯ ಎರಡೂ ಭಾವಗಳು ಸಮನಾಗಿ ಮೇಳೈಸಿ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣದ ಮೂರ್ತ ಸ್ವರೂಪವಾಗಿ, ಅದ್ವೈತದ ಪ್ರತೀಕವಾಗಿ ತಾಯಿಯ ಮುಖ ಗೋಚರಿಸುತ್ತದೆ.
HOPE THIS IS HELPFUL
Explanation:
ಜಾತ್ರೆ ಮೈದಾನದಲ್ಲಿ ಸಾಲು ಸಾಲುವಾಗಿ ಅಂಗಡಿಗಳು ಇರುತ್ತವೆ. ಆಟಕ್ಕೆ ಸಾಮಾನುಗಳು ಬಲೂನುಗಳು ಗೊಂಬೆಗಳು ಬೆಳೆ ಸಾರು ಬೆಂಡು ಬತ್ತಾಸು ಸಿಹಿ ತಿಂಡಿಗಳು ಅಂಗಡಿಗಳು ಒಂದೆಡೆ. ಬಟ್ಟೆ ಪಾತ್ರೆ ಹೂವು ಹಣ್ಣು ಅಂಗಡಿಗಳ ಸಾಲು ಮತ್ತೊಂದು ಕಡೆ ಮಗದೊಂದು ಕಡೆ ಹೋಟೆಲ್ ಗಳು ಜೋಕಾಲಿಗಳು ತೂಗು ತೊಟ್ಟಿಲುಗಳು ಇದ್ದವು . ಜಾತ್ರೆಗೆ ಬಹಳಷ್ಟು ಜನ ಬರುತ್ತಾರೆ . ಬಂದವರಿಗೆ ತಮಗೆ ಬೇಕಾದನ್ನು ಕೊಂಡುಕೊಳ್ಳಲು ಅನುಕೂಲವಾಗಲೆಂದು ದೂರದಿಂದ ಮೂರು ರಿಂದ ವ್ಯಾಪಾರಸ್ಥರು ಬರುತ್ತಾರೆ. ಅಲ್ಲದೆ ಮಾರಾಟಗಾರರಿಗೂ ಒಳ್ಳೆಯ ಅವಕಾಶ.ನಮ್ಮೂರ ಜಾತ್ರೆಯಲ್ಲಿ ಕಥೆಯನ್ನು ಕೇಳುವುದು ಕೇವಲ ಒಂದು ದಿನ ಮಾತ್ರ ಆದರೆ ಜನರ ಹೋರಾಟ ಎರಡು ಮೂರು ದಿನ ವರೆಗೂ ಇರುತ್ತದೆ . ನಮ್ಮ ಊರಿನ ಜನರೆಲ್ಲ ಜಾತ್ರೆಯಲ್ಲೇ ಇದ್ದರು. ಎಲ್ಲರೂ ಸಂತೋಷವಾಗಿದ್ದರು. ನಾನು ಜಾತ್ರೆಯಲ್ಲಿ ನನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಂಡೆ. ಜಾತ್ರೆಯಲ್ಲಿ ರಥ ನಡೆಸಿದರು.
ಜಾತ್ರೆ ಮೈದಾನದಲ್ಲಿ ಸಾಲು ಸಾಲುವಾಗಿ ಅಂಗಡಿಗಳು ಇರುತ್ತವೆ. ಆಟಕ್ಕೆ ಸಾಮಾನುಗಳು ಬಲೂನುಗಳು ಗೊಂಬೆಗಳು ಬೆಳೆ ಸಾರು ಬೆಂಡು ಬತ್ತಾಸು ಸಿಹಿ ತಿಂಡಿಗಳು ಅಂಗಡಿಗಳು ಒಂದೆಡೆ. ಬಟ್ಟೆ ಪಾತ್ರೆ ಹೂವು ಹಣ್ಣು ಅಂಗಡಿಗಳ ಸಾಲು ಮತ್ತೊಂದು ಕಡೆ ಮಗದೊಂದು ಕಡೆ ಹೋಟೆಲ್ ಗಳು ಜೋಕಾಲಿಗಳು ತೂಗು ತೊಟ್ಟಿಲುಗಳು ಇದ್ದವು . ಜಾತ್ರೆಗೆ ಬಹಳಷ್ಟು ಜನ ಬರುತ್ತಾರೆ . ಬಂದವರಿಗೆ ತಮಗೆ ಬೇಕಾದನ್ನು ಕೊಂಡುಕೊಳ್ಳಲು ಅನುಕೂಲವಾಗಲೆಂದು ದೂರದಿಂದ ಮೂರು ರಿಂದ ವ್ಯಾಪಾರಸ್ಥರು ಬರುತ್ತಾರೆ. ಅಲ್ಲದೆ ಮಾರಾಟಗಾರರಿಗೂ ಒಳ್ಳೆಯ ಅವಕಾಶ.ನಮ್ಮೂರ ಜಾತ್ರೆಯಲ್ಲಿ ಕಥೆಯನ್ನು ಕೇಳುವುದು ಕೇವಲ ಒಂದು ದಿನ ಮಾತ್ರ ಆದರೆ ಜನರ ಹೋರಾಟ ಎರಡು ಮೂರು ದಿನ ವರೆಗೂ ಇರುತ್ತದೆ . ನಮ್ಮ ಊರಿನ ಜನರೆಲ್ಲ ಜಾತ್ರೆಯಲ್ಲೇ ಇದ್ದರು. ಎಲ್ಲರೂ ಸಂತೋಷವಾಗಿದ್ದರು. ನಾನು ಜಾತ್ರೆಯಲ್ಲಿ ನನಗೆ ಇಷ್ಟವಾದ ವಸ್ತುಗಳನ್ನು ಕೊಂಡುಕೊಂಡೆ. ಜಾತ್ರೆಯಲ್ಲಿ ರಥ ನಡೆಸಿದರು.ಜಾತ್ರೆಯಲ್ಲಿ ದೊಂಬರಾಟ, ಯಕ್ಷಗಾನ ಡೋಲು ಕುಣಿತ ಮುಂತಾದ ಆಟಗಳು ಆಡುತ್ತಿದ್ದರು.