Biology, asked by maanasha680, 3 months ago

ತತ್ಪುರುಷ ಸಮಾಸ ಎಂದರೀನು ಉದಾಹಣೆ ಕೋಡಿ

Answers

Answered by BrainlyTwinklingstar
7

ಸಮಾಸ

ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಅನುಗುಣವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಸಮಸ್ತ ಪದವಾಗುವುದಕ್ಕೆ ಸಮಾಸವೆಂದು ಕರೆಯುತ್ತೇವೆ.

ತತ್ಪುರುಷ ಸಮಾಸ

ಪೂರ್ವಪದ ಮತ್ತು ಉತ್ತರಪದ ನಾಮಪದವಾಗಿದ್ದು, ಉತ್ತರ ಪದದ ಅರ್ಥ ಪ್ರಧಾನವಾಗಿದ್ದರೆ ಅದನ್ನು ತತ್ಪುರುಷ ಸಮಾಸವೆಂದು ಕರೆಯುತ್ತೇವೆ, (ಪೂರ್ವಪದದ ಕೊನೆಯಲ್ಲಿ ತೃತೀಯಾದಿಂದ ಸಪ್ತಮಿ ವಿಭಕ್ತಿ ಪರ್ಯಂತ ಯಾವುದಾದರೂ ಒಂದು ವಿಭಕ್ತಿ ಹೊಂದಿರುತ್ತದೆ. ಪೂರ್ವಪದದ ಕೊನೆಗೆ ಯಾವ ವಿಭಕ್ತಿ ಪ್ರತ್ಯಯದ ಹೆಸರು ಬರುತ್ತದೆಯೋ ಆ ವಿಭಕ್ತಿ ಹೆಸರಿನ ತತ್ಪುರುಷ ಸಮಾಸವೆಂದು ಕರೆಯಬೇಕು).

ಉದಾ:-

➛ ಕಣ್ಣಿನಲ್ಲಿ (ಅಲ್ಲಿ)+ ಉರಿ = ಕಣ್ಣುರಿ

➛ ರಾಜನ (ಅ) + ಪುತ್ರಿ = ರಾಜಪುತ್ರಿ

➛ ಅರಸನ (ಅ) + ಮನೆ = ಅರಮನೆ

➛ ಕಣ್ಣಿನಿಂದ (ಇಂದ) + ಕುರುಡ = ಕಣ್ಗುರುಡ

➛ ಊರಿಗೆ (ಗೆ) + ಊಟ = ಊರೊಟ

➛ ವ್ಯಾಘ್ರದಿಂದ (ಇಂದ)+ ಭಯ = ವ್ಯಾಘ್ರಭಯ

➛ ತಲೆಯಲ್ಲಿ (ಅಲ್ಲಿ) + ನೋವು= ತಲೆನೋವು

➛ ರಣದಲ್ಲಿ + ಶೂರ = ರಣಶೂರ

➛ ಬೆಟ್ಟದ + ತಾವರೆ = ಬೆಟ್ಟದಾವರೆ

➛ ಕಲ್ಲಿನ + ಹಾಸಿಗೆ = ಕಲ್ಲುಹಾಸಿಗೆ

 \:

Similar questions