ಮೆದುಳಿನ ಎಲ್ಲಾ ಭಾಗಗಳನ್ನು ಮತ್ತು ಅದರ ಕಾರ್ಯವನ್ನು ಬರೆಯಿರಿ
Answers
1.ಮುಮ್ಮೆದುಳು
ಮಹಾಮಸ್ತಿಷ್ಕ:
ಇದು ಮೆದುಳಿನ ಅತ್ಯಂತ ದೊಡ್ಡ ಹಾಗೂ ಪ್ರಮುಖ ಭಾಗ.ಮತ್ತು ಎಡ ಮತ್ತು ಬಲ ಗೊಳಾರ್ದ ಗಳಾಗಿವೆ.
ಡೈಎನ್ ಸೆಫೆಲಾನ್ :
ಇದು ಮಧ್ಯ ಮೆದುಳಿನ ಮುಂದೆ ಮತ್ತು ಮೇಲೆ ಇದೆ. ಇದರಲ್ಲಿ ಥಲಾಮಸ್ ಮತ್ತು ಹೈಪೋಥಲಾಮಸ್ ಎ೦ಬ ಭಾಗಗಳಿವೆ. ಹೈಪೋಥಲಾಮಸ್ ಆಹಾರ, ನೀರಿನ ಸಮತೋಲನ, ದೇಹದ ಉಷ್ಣತೆ, ನಿದ್ರೆ ಮುಂತಾದವುಗಳನ್ನು ನಿಯಂತ್ರಿಸುತ್ತದೆ."
2) ಮಧ್ಯಮೆದುಳು
• ಇದು ಮೆದುಳಿನ ಅತ್ಯಂತ ಚಿಕ್ಕ ಭಾಗ.
ಮಧ್ಯಮೆದುಳು ಮುಮ್ಮೆದುಳಿನ ಥಲಾಮಸ್ ಮತ್ತು ಹಿಮ್ಮೆದುಳಿನ ಪಾನ್ಸ್ ನ ಮಧ್ಯದಲ್ಲಿದೆ. ಸೆರೆಬ್ರಲ್ ಅಕ್ವಾಡಕ್ಟ್ ఎంబ ನಾಳ ವೂ ಮಧ್ಯಮೆದುಳಿನಿಂದ ಹಾದುಹೋಗುತ್ತದೆ.
ಮಧ್ಯ ಮೆದುಳು ಹಿಮ್ಮೆದುಳಿನಿಂದ ಮುಮ್ಮೆದುಳಿಗೆ ಸಂದೇಶವನ್ನು ಸಾಗಿಸುತ್ತದೆ.
3) ಹಿಮ್ಮೆದುಳು
ಹಿಮ್ಮೆದುಳಿನಲ್ಲಿ ಮೂರು ಭಾಗಗಳಿವೆ:
ಪಾನ್ಸ್ :
★ಮಹಾಮಸ್ತಿಷ್ಕ, ಅನುಮಸ್ತಿಷ್ಕ ಹಾಗೂ ಮೆಡುಲ್ಲಾದ ನಡುವಿನ ಮಧ್ಯವರ್ತಿಯಾಗಿದೆ. ಆಹಾರ ಅಗಿಯುವುದು, ಉಸಿರಾಟ, ಮುಖದ ಭಾವ ಮುಂತಾದವುಗಳ ಹತೋಟಿಯ ಜೊತೆಗೆ, ಸಂದೇಶ ಸಾಗಾಣಿಕಾ ಮಾರ್ಗವಾಗಿದೆ.
ಅನುಮಸ್ತಿಷ್ಕ
★ಅನುಮಸ್ತಿಷ್ಕವು ಸುರುಳಿಯಾಕಾರದ ಮೇಲೆ ಹೊಂದಿದ್ದು, ಅದು ಅನೇಕ ನ್ಯೂರಾನ್ ಗಳಿಗೆ ಹೆಚ್ಚುವರಿ ಜಾಗವನ್ನು ನೀಡುತ್ತದೆ. ಶರೀರದ ಸಮತೋಲನದ ಜೊತೆಗೆ, ನಡೆಯುವ, ಓಡುವ ಮುಂತಾದ ಚಲನೆಗಳಿಗೆ ಅಗತ್ಯವಾದ ಕಾರ್ಯ ಹೊಂದಾಣಿಕೆಯನ್ನು ಏರ್ಪಡಿಸುತ್ತದೆ.
ಮೆಡುಲ್ಲಾ
★ಇದು ಮೆದುಳು ಬಳ್ಳಿಗೆ ಸಂಪರ್ಕ ಹೊಂದಿದೆ. ಉಸಿರಾಟ, ರಕ್ತದೊತ್ತಡ, ಜೀರ್ಣಕ್ರಿಯೆಯ ಸ್ರವಿಸುವಿಕೆಗೆ ಸಹಾಯಕ.
hope it helps you....★★