ಎ) ಕೆಳಗಿನ ಗದ್ಯಭಾಗ ಓದಿಕೊಂಡು ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ರಾಧಾಕೃಷ್ಣನ್ ಅವರು ಶಿಕ್ಷಣ ಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟರ್ ಆಗಿ ಮದ್ರಾಸಿನಲ್ಲಿ ಮೊದಲ
ಸೇವೆಯನ್ನು ಆರಂಭಿಸಿದರು. ಅನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು, ಸಯ್ಯದ್‌ಪೇಟೆಯ ಟೀಚರ್ ಟ್ರೈನಿಂಗ್
ಕಾಲೇಜು, ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರ್ಕಾರಿ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಈ
ಅವಧಿಯಲ್ಲಿ ಸಂಸ್ಕೃತವನ್ನು ಪಂಡಿತರಿಂದ ಕಲಿತರಲ್ಲದೇ ಗಾಂಧೀಜಿ ಅವರನ್ನು ಭೇಟಿ
ಮಾಡಿ ರಾಷ್ಟ್ರೀಯ
ಹೋರಾಟವನ್ನು
ಬೆಂಬಲಿಸಿ
ಲೇಖನಗಳನ್ನು
ಬರೆದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ
ತತ್ವಶಾಸ್ತ್ರದ
ಉಪಪ್ರಾಧ್ಯಾಪಕರಾಗಿ ಹಾಗೂ ಕೋಲ್ಕತ್ತಾದಲ್ಲಿ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ಇದಲ್ಲದೆ ಆಂಧ್ರ, ದೆಹಲಿ,
ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿದರು. ಆಕ್ಸಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ
ಪಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ರಾಧಾಕೃಷ್ಣನ್ ಅವರ ಬೋಧನಾ ಶೈಲಿ, ನಿರರ್ಗಳತೆ, ವಿಷಯದ ಮೇಲಿನ
ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು. ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು
ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು. ಶಿಕ್ಷಕನೊಬ್ಬನ ಗೌರವವು ಬೋಧನೆಯಿಂದಲೇ
ವೃದ್ಧಿಸುತ್ತದೆ ಜತೆಗೆ ವ್ಯಕ್ತಿತ್ವದ ಸೌಜನ್ಯ ಎಲ್ಲರ ಗಮನ ಸೆಳೆಯುತ್ತದೆ.
ಪ್ರಶ್ನೆಗಳು:
1) ರಾಧಾಕೃಷ್ಣನ್ ಅವರು ಯಾವ ವಿಷಯದ ಪ್ರಾಧ್ಯಾಪಕರಾಗಿದ್ದರು?
2) ರಾಧಾಕೃಷ್ಣನ್ ಅವರು ಮೊದಲ ಸೇವೆಯನ್ನು ಎಲ್ಲಿ ಆರಂಭಿಸಿದರು?
3) ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿದ್ದು ಏನು?
4) ರಾಧಾಕೃಷ್ಣನ್ ಎಲ್ಲೆಲ್ಲಿ ಸೇವೆ ಸಲ್ಲಿಸಿದರು?
say the answer please i want these answers
Answers
Answered by
0
very simple
Explanation:
1)ಆಕ್ಸಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ
ಪಾಧ್ಯಾಪಕರಾಗಿದ್ದರು.
2) ರಾಧಾಕೃಷ್ಣನ್ ಅವರು ಶಿಕ್ಷಣ ಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟರ್ ಆಗಿ ಮದ್ರಾಸಿನಲ್ಲಿ ಮೊದಲ ಸೇವೆಯನ್ನು ಆರಂಭಿಸಿದರು.
3) ರಾಧಾಕೃಷ್ಣನ್ ಅವರ ಬೋಧನಾ ಶೈಲಿ, ನಿರರ್ಗಳತೆ, ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಆಕರ್ಷಿಸಿತು.
4)ರಾಧಾಕೃಷ್ಣನ್ ಅವರು ಶಿಕ್ಷಣ ಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟರ್ ಆಗಿ ಮದ್ರಾಸಿನಲ್ಲಿ ಮೊದಲ ಸೇವೆಯನ್ನು ಆರಂಭಿಸಿದರು. ಅನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು, ಸಯ್ಯದ್‌ಪೇಟೆಯ ಟೀಚರ್ ಟ್ರೈನಿಂಗ್ ಕಾಲೇಜು, ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರ್ಕಾರಿ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು.
mark me as brainliest answer
Similar questions