ಬಡವನ ಸಿಟ್ಟು ದವಡೆಗೆ ಮೂಲ ಗಾದೆ ಮಾತಿನ ವಿಸ್ತರಣೆ
Answers
Answered by
5
Answer:
ಬಡವರ ಸಿಟ್ಟು ದವಡೆಗೆ ಮೂಲ’ ಎನ್ನುವ ಗಾದೆ, ಬಡವ ಸಿಟ್ಟಾದರೆ ಪರಿಣಾಮವನ್ನು ಆತನೆ ಎದುರಿಸಬೇಕು, ಹಾಗಾಗಿ ಬಾಯ್ಮುಚ್ಚಿರುವುದು ಲೇಸು ಎನ್ನುವಂತಿದೆ. ಅಂತೆಯೇ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎನ್ನುವ ನುಡಿಗಟ್ಟೂ ಚಾಲ್ತಿಯಲ್ಲಿದೆ. ಅಸಹಾಯಕತೆ ಕಟ್ಟೆಯೊಡೆದಾಗ, ದಬ್ಬಾಳಿಕೆ ಅತಿಯಾದಾಗ ಈ ನುಡಿಗಟ್ಟು ವಿರಳವಾಗಿ ಬಳಕೆಯಾಗುತ್ತದೆ. ಆಳುವ ಶಕ್ತಿಗಳು ಮೊದಲ ನುಡಿಗಟ್ಟನ್ನು ಕಟ್ಟಿ ಜನರಲ್ಲಿ ಆತಂಕ ಹುಟ್ಟಿಸಿದರೆ, ವಿರುದ್ಧವಾಗಿ ಜನರು ಪರ್ಯಾಯ ನುಡಿಗಟ್ಟಿನಲ್ಲಿ ನಮ್ಮ ಸಿಟ್ಟಿಗೂ ಶಕ್ತಿಯಿದೆ ಎಂದು ಆಳುವವರಲ್ಲಿ ಭಯ ಹುಟ್ಟಿಸಿದ್ದಾರೆ. ಇವೆರಡೂ ರಾಜಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯಲ್ಲಿ ಜೀವ ತಳೆದವು.
Similar questions