ಹಿಂದಲೆ ಎಂಬುದು ಯಾವ ಸಮಾಸ
Answers
Answer:
ಅಂಶಿಸಮಾಸ
ಅಂಗೈ, ಮುಂಗೈ - ಈ ಸಮಸ್ತಪದಗಳನ್ನು ಕೈಯ+ಅಡಿ=ಅಂಗೈ, ಕೈಯ+ಮುಂದು= ಮುಂಗೈ - ಇತ್ಯಾದಿಯಾಗಿ ಬಿಡಿಸಿ ಹೇಳಬಹುದು. ಈ ಎರಡು ಪದಗಳಲ್ಲಿ-ಒಂದು ಕೈ ಎಂಬ ಪದವೂ, ಇನ್ನೊಂದು ಅದರ (ಕೈಯ) ಒಂದು ಅಂಶವನ್ನು ಹೇಳುವ ‘ಅಡಿ’ ಎಂಬ ಪದವೂ ಇವೆ. ಕೈ ಯೆಂಬುದು ಅನೇಕ ಅಂಶಗಳನ್ನೊಳಗೊಂಡ ಅಂಶಿ, ‘ಅಡಿ’ ಎಂಬುದು ಅಂಶ. ಹೀಗೆ ಒಂದು ಅಂಶಿ ಒಂದು ಅಂಶ ಇವುಗಳನ್ನೊಳಗೊಂಡು ಸಮಾಸವಾಗುವುದೇ ಅಂಶಿಸಮಾಸ. ಇಲ್ಲಿ ಪೂರ್ವಪದ, ಉತ್ತರದ ಎರಡೂ ಪದಗಳು ಸೇರಿ ಸಮಾಸಗಳಾದ ಮೇಲೆ (ಅಂಗೈ-ಮುಂಗೈ ಹೀಗಾದ ಮೇಲೆ) ಅಡಿ, ಮುಂದು-ಎಂಬ ಪೂರ್ವಪದಗಳ ಅರ್ಥವೇ ಪ್ರಧಾನವಾಗುವುದು. ಸಂಸ್ಕೃತದಲ್ಲಿ ಹೀಗೆ ಪೂರ್ವಪದದ ಅರ್ಥ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅವ್ಯಯೀಭಾವವೆನ್ನುವರು. ಅದನ್ನನುಸರಿಸಿ ಕನ್ನಡದಲ್ಲೂ ಕೆಲವರು ಈ ಅಂಶಿಸಮಾಸವನ್ನು ‘ಅವ್ಯಯೀಭಾವ’ ಎಂದು ಕರೆಯುವುದುಂಟು.
Explanation:
ಉದಾ :-
ಇಲ್ಲ + ಪಿಂತು = ಪಿತ್ತಿಲ್
ತಲೆಯ + ಹಿಂದು = ಹಿಂದಲೆ
ತಲೆಯ + ಮುಂದು = ಮುಂದಲೆ
ಮೂಗಿನ + ತುದಿ = ತುದಿಮೂಗು
ಹುಬ್ಬಿನ + ಕೊನೆ = ಕೊನೆಹುಬ್ಬು
ಹುಬ್ಬಿನ + ಕುಡಿ = ಕುಡಿಹುಬ್ಬು
ಕಣ್ಣ + ಕಡೆ = ಕಡೆಗಣ್ಣು
ಕೋಟೆಯ + ಕೆಳಗು = ಕೆಳಗೋಟೆ
ಕೆರೆಯ + ಕೆಳಗು = ಕೆಳಗೆರೆ (ಕಿಳ್ಕೆರೆ-ಹ.ಗ.)
ಕೋಟೆಯ + ಮೇಗು = ಮೇಗೋಟೆ
ಪೊಡೆಯ + ಕೆಳಗು = ಕಿಳ್ಪೊಡೆ (ಕೆಳಗು ಶಬ್ದಕ್ಕೆ ಕಿಳ್ ಆದೇಶ)
ಮೈಯ + ಹೊರಗು = ಹೊರಮೈ
ಮೈಯ + ಒಳಗು = ಒಳಮೈ
ತುಟಿಯ + ಕೆಳಗು = ಕೆಳದುಟಿ