India Languages, asked by Vidyagowda, 3 months ago

ಆ ನೆಲ ಇದು ಯಾವ ಸಮಾಸ ಎಂದು ಬರೆಯಿರಿ.​

Answers

Answered by bhuvaneshwariks81
1

Answer:ಗಮಕ ಸಮಾಸ

ಗಮಕಸಮಾಸ:- "ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಗಮಕಸಮಾಸವೆಂದು ಕರೆಯುವರು. ಈ ಸಮಾಸದಲ್ಲಿ ಅರಿಸಮಾಸ ದೋಷವನ್ನು ಎಣಿಸಕೂಡದು."

ಉದಾ:-

ಇವನು + ಮುದುಕ = ಈ ಮುದುಕ

ಅವು + ಪ್ರಾಣಿಗಳು = ಆ ಪ್ರಾಣಿಗಳು

ಮಾಡಿದುದು + ಅಡುಗೆ = ಮಾಡಿದಡುಗೆ

ಬಾಡಿದುದು + ಹೂವು = ಬಾಡಿದ ಹೂವು

ಉಡುವುದು + ದಾರ = ಉಡುದಾರ

ಉದಾಹರಣೆಗೆ:-

(i) ಪೂರ್ವಪದವು ಸರ್ವನಾಮದಿಂದ ಕೂಡಿರುವುದಕ್ಕೆ-

ಅವನು + ಹುಡುಗ = ಆ ಹುಡುಗ

ಅವಳು + ಹೆಂಗಸು = ಆ ಹೆಂಗಸು

ಅದು + ಕಲ್ಲು = ಆ ಕಲ್ಲು

ಇವನು + ಗಂಡಸು = ಈ ಗಂಡಸು

ಇವಳು + ಮುದುಕಿ = ಈ ಮುದುಕಿ

ಇದು + ನಾಯಿ = ಈ ನಾಯಿ

(ಮೇಲಿನ ಅವನು, ಅವಳು, ಅದು - ಎಂಬುದಕ್ಕೆ ‘ಆ’ ಎಂಬುದೂ, ಇವನು, ಇವಳು, ಇದು - ಎಂಬುದಕ್ಕೆ ‘ಈ’ ಎಂಬುದೂ ಆದೇಶಗಳಾಗಿ ಬಂದಿವೆ.)

Similar questions