ಛಂದಸ್ಸಿನ ಪ್ರಯೋಜನಗಳೇನು
Answers
Answered by
0
Answer:
ఎపెఫ9కఫేఢశడేశఢషఢఘషఘఢేఫఘఢషేఢ
Answered by
4
ಛಂದಸ್ಸಿನ ಪ್ರಯೋಜನಗಳು :
ಒಂದು ಕಾವ್ಯಕ್ಕೆ ಸಮರ್ಥವಾದ ಸಂಹವನ ಮಾರ್ಗ, ನಿಯತವಾದ ಚೌಕಟ್ಟು, ಬಿಗಿಯಾದ ಬಂಧ, ಶೈಲಿ ಇವು ಅಗತ್ಯ ಪರಿಕರಗಳು.
ಛಂದಸ್ಸು ಇಂತಹ ಅನುಕೂಲತೆಗಳನ್ನು ಪೂರೈಸುತ್ತಲ್ಲದೆ ಕವಿಗೂ ಸಹೃದಯನಿಗೂ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಅವನ್ನು ಈ ಕೆಳಕಂಡಂತೆ ಗುರುತಿಸಬಹುದು.
ಕವಿಯ ಹೃದಯ ಕಂಡುಕೊಂಡು ಸೂಕ್ಷ್ಮಾತಿಸೂಕ್ಷ್ಮ ಭಾವಗಳನ್ನು ಸೆರೆಹಿಡಿದಿಡುವ ಸಮರ್ಥ ಸಾಧನ.
ಛಂದಸ್ಸಿನ ನೆರವಿನಿಂದ ವಿಸ್ತಾರವಾದ ವಿಚಾರಗಳನ್ನು ಸಂಕ್ಷಿಪ್ತವಾಗಿಯೂ ಪ್ರಭಾವಗೊಳಿಸುವಂತೆಯೂ ಹೇಳಬಹುದು.
ಸುಲಭವಾಗಿ ಪದ್ಯವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬಹುದು.
ಛಂದಸ್ಸಿನಿಂದ ಕಾವ್ಯಕ್ಕೆ ಅಹ್ಲಾದತೆಯೂ, ಮನೋಹರತೆಯೂ ಲಭಿಸುತ್ತದೆ.
ಸಹೃದಯರ ಮನಸ್ಸಿಗೆ ತಟ್ಟುತ್ತದೆ.
ಕಾವ್ಯಾನಂದವನ್ನು ಉಂಟು ಮಾಡುತ್ತದೆ.
ಕವಿಯ ಮನಸ್ಸಿನ ಉತ್ಸಾಹ-ಆವೇಶ, ಆನಂದಯುತವಾದ ಭಾವಗಳನ್ನುಬಂಧಿಸುವ ಚೌಕಟ್ಟು.
Similar questions